ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಗೆಹರಿಯಿತು ಉಡುಪಿ ‘ಕನಕನ ಕಿಂಡಿ’ ಎದುರಿನ ಗೋಪುರ ವಿವಾದ

By Staff
|
Google Oneindia Kannada News

ಬಗೆಹರಿಯಿತು ಉಡುಪಿ ‘ಕನಕನ ಕಿಂಡಿ’ ಎದುರಿನ ಗೋಪುರ ವಿವಾದ
ನೂತನ ಗೋಪುರಕ್ಕೆ ಕನಕದಾಸರ ಹೆಸರು.

ಉಡುಪಿ : ವಿಶ್ವಪ್ರಸಿದ್ಧ ಉಡುಪಿ ಶ್ರೀ ಕೃಷ್ಣ ದೇವಾಲಯದ ಹೊರ ಆವರಣದಲ್ಲಿರುವ ಕನಕನ ಕಿಂಡಿ ಎದುರಿನ ಗೋಪುರ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ವಿವಾದ ಈಗ ಬಗೆಹರಿದಿದೆ.

ಕನಕನ ಕಿಂಡಿ ಎದುರಿನ ಗೋಪುರವನ್ನು ತೆಗೆದುಹಾಕುವ ಕುರಿತು ವಿವಾದ ಉಂಟಾಗಿತ್ತು . ಎರಡು ಸಂಘಟನೆ ಪರ-ವಿರೋಧ ಪ್ರತಿಭಟನೆಯಿಂದ ಪ್ರಕರಣ ಸಂದಿಗ್ಧ ಪರಿಸ್ಥಿತಿ ಉಂಟು ಮಾಡಿದ್ದರೂ, ಮಾತುಕತೆಯ ಮೂಲಕ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕುರುಬ ಜನಾಂಗದ ನಾಯಕ ಎಚ್‌.ಎಂ.ರೇವಣ್ಣ ತಿಳಿಸಿದ್ದಾರೆ.

ಶಾಶ್ವತ ಪರಿಹಾರಕ್ಕೆ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ರಚಿಸುವ 15 ಸದಸ್ಯರ ಸಮಿತಿಯಲ್ಲಿ 8 ಜನ ಮಠದ ಪ್ರತಿನಿಧಿಗಳು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರತಿನಿಧಿಗಳು ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರತಿನಿಧಿ, ಕಾಗಿನೆಲೆ ಸಂಸ್ಥಾನದ ಪ್ರತಿನಿಧಿಗಳು ಹಾಗೂ ಇತರ ಮೂವರು ಪ್ರತಿನಿಧಿಗಳು - ಹೀಗೆ ಒಟ್ಟು 7 ಸದಸ್ಯರಿರುತ್ತಾರೆ.

ಶಿಥಿಲ ಗೋಪುರವನ್ನು ಕೆಡವಿ ನೂತನವಾಗಿ ನಿರ್ಮಿಸುವ ಗೋಪುರವನ್ನು ಸ್ವಾಗತಿಸುತ್ತೇವೆ. ನಮ್ಮ ಹಾಗೂ ಮಠದ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ . ಉಡುಪಿಯನ್ನು ವಿಶ್ವವಿಖ್ಯಾತ ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾಡುವ ಉದ್ದೇಶವಿರಿಸಿಕೊಂಡಿದ್ದೇವೆ ಎಂದು ಶಾಸಕ ಕೆ.ಎಸ್‌.ಈಶರಪ್ಪ ತಿಳಿಸಿದ್ದಾರೆ.

ಈ ನಡುವೆ ನೂತನ ಗೋಪುರಕ್ಕೆ ಕನಕದಾಸರ ಹೆಸರನ್ನು ಇಡುವುದಕ್ಕೆ ಪರ್ಯಾಯ ಶ್ರೀಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X