ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲದ ಮೇಲಿನ ಅಬಕಾರಿ ಹಾಗೂ ಸೀಮಾಸುಂಕದಲ್ಲಿ ಶೇ.2 ರ ಕಡಿತ

By Staff
|
Google Oneindia Kannada News

ತೈಲದ ಮೇಲಿನ ಅಬಕಾರಿ ಹಾಗೂ ಸೀಮಾಸುಂಕದಲ್ಲಿ ಶೇ.2 ರ ಕಡಿತ
ಹಣದುಬ್ಬರ ಹತೋಟಿಯಲ್ಲಿಡಲು ಕೇಂದ್ರಸರ್ಕಾರದಿಂದ ಮಹತ್ವದ ನಿರ್ಧಾರ

ಹೊಸದಿಲ್ಲಿ : ಪೆಟ್ರೋಲ್‌, ಡೀಸಲ್‌, ಎಲ್‌ಪಿಜಿ ಮತ್ತು ಸೀಮೆಎಣ್ಣೆ ಮೇಲಿನ ಅಬಕಾರಿ ಮತ್ತು ಸೀಮಾ ಸುಂಕ ವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಮತ್ತೊಮ್ಮೆ ಹೆಚ್ಚುವ ಸಂಭವ ಸದ್ಯಕಿಲ್ಲ ಮತ್ತು ಸೀಮಾಸುಂಕ , ಅಬಕಾರಿ ಸುಂಕ ತಲಾ ಶೇಕಡ 2ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ದೆಹಲಿ ಮೂಲಗಳು ತಿಳಿಸಿವೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸೋಮವಾರ ಬ್ಯಾರೆಲ್‌ಗೆ 47 ಡಾಲರ್‌ ತಲುಪಿದ್ದು, ಇತಿಹಾಸದಲ್ಲೇ ಕಂಡರಿಯದ ಏರಿಕೆ ದಾಖಲಿಸಿದೆ. ದೇಶದಲ್ಲೂ ಇದು ವಿಪರೀತ ಪರಿಣಾಮಕ್ಕೆ ಕಾರಣವಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಈ ಕ್ರಮಕ್ಕೆ ಮುಂದಾಗಿದೆ. ದೇಶದಲ್ಲಿ ಹಣದುಬ್ಬರ ಶೇಕಡ 7.61ಕ್ಕೆ ತಲುಪಿದ ಹಿನ್ನೆಲೆಯಲ್ಲಿ ಬೆಲೆಗಳನ್ನು ಹತೋಟಿಯಲ್ಲಿಡಲು ಅನಿವಾರ್ಯ ಕ್ರಮವಾಗಿ ಸುಂಕ ಕಡಿತ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ. ಈ ಕುರಿತು ಪ್ರಕಟಣೆಯನ್ನು ಸಂಸತ್ತಿನಲ್ಲಿ ಸರಕಾರ ಇದೇ ವಾರ ಪ್ರಕಟಿಸಲಿದೆ.

ಭರವಸೆ ವಿಫಲ : ಹಣ್ಣು- ಕಾಯಿಪಲ್ಲೆ ಮತ್ತು ತೈಲ ಬೆಲೆಗಳ ಹೆಚ್ಚಳ ಹಣದುಬ್ಬರವನ್ನು ಕಳೆದ ಕೆಲ ವಾರಗಳಿಂದ ನಿರಂತರ ಏರಿಸುತ್ತಲೇ ಹೋಯಿತು. ಹಣದುಬ್ಬರದ ಹತೋಟಿಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರಕಾರ ಮತ್ತು ರಿಸರ್ವ್‌ಬ್ಯಾಂಕ್‌ ಭರವಸೆ ನೀಡಿದರೂ ಹಣದುಬ್ಬರದ ಗತಿ ಮೇಲ್ಮುಖವಾಗಿಯೇ ಇತ್ತು.

ಬೆಲೆ ನಿಯಂತ್ರಣ ಮೂಲಕ ಹಣದುಬ್ಬರದ ಹತೋಟಿಗೆ ಸಂಬಂಧಿಸಿದಂತೆ ವಿತ್ತ ಸಚಿವ ಪಿ.ಚಿದಂಬರ ಮತ್ತು ಪೆಟ್ರೋಲಿಯಂ ಸಚಿವ ಮಣಿಶಂಕರ್‌ ಅಯ್ಯರ್‌ ಜತೆ ಪ್ರಧಾನಿ ಮನಮೋಹನ್‌ ಸಿಂಗ್‌ ಸೋಮವಾರ ಬೆಳಗ್ಗೆ ಸಂಸತ್‌ ಭವನದಲ್ಲಿ ಮೊದಲ ಸುತ್ತಿನ ಚರ್ಚೆ ನಡೆಸಿದರು. ನಂತರ ಪ್ರಧಾನಿ ನಿವಾಸದಲ್ಲಿ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಮತ್ತೊಂದು ಸುತ್ತು ಮಾತುಕತೆ ನಡೆದು ಸುಂಕಗಳ ಕಡಿತ ನಿರ್ಧಾರಕ್ಕೆ ಬರಲಾಗಿದೆ.

ಪ್ರಸ್ತುತ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಶೇ.20ರಷ್ಟು ಸೀಮಾಸುಂಕ, ಶೇ.26 ರಷ್ಟು ಅಬಕಾರಿ ಸುಂಕ ಇದೆ. ಎರಡೂ ಬಗೆ ಸುಂಕ ಕಡಿತದಿಂದ ಆದಾಯ ಕೊರತೆ ಸಮಸ್ಯೆ ಎದುರಾಗುವ ವಿಚಾರವೂ ಚರ್ಚೆಯ ವೇಳೆ ಪ್ರಸ್ತಾಪವಾಯಿತು ಎಂದು ಮೂಲಗಳು ಹೇಳಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X