ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೂರು ಶಾಲೆ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕನ್ನಡಿಗರು

By Super
|
Google Oneindia Kannada News

ಬನ್ನೂರು ಶಾಲೆ ಸ್ವಾತಂತ್ರ್ಯೋತ್ಸವಕ್ಕೆ ಅಮೆರಿಕನ್ನಡಿಗರು
ಐವತ್ತೆಂಟಲೇ ಸ್ವಾತಂತ್ರ್ಯಉತ್ಸವ ಆಚರಣೆಗೆ ದೇಶಾದ್ಯಂತ ವ್ಯಾಪಕ ಸಿದ್ಧತೆ ನಡೆದಿದೆ. ಪಟ್ಟಣ ನಗರಿಗಳ ಮೈದಾನಗಳಲ್ಲಿ ಆ.15ರ ಕಾರ್ಯಕ್ರಮಗಳು ರಂಗುರಂಗಾಗಿ ನಡೆಯುತ್ತವೆ. ಹಳ್ಳಿಗಳಲ್ಲಿ ? ಒಂದು ಹಳ್ಳಿಯ ವಿಶಿಷ್ಟ ಕಾರ್ಯಕ್ರಮದ ಕಥೆ ಕೇಳಿ....

ಬನ್ನೂರೆಂದ ಕೂಡಲೇ ನೆನಪಿಗೆ ಬರುವುದು ಏನು ? ಕುರಿಗಳ ಮಾತು ಬಿಡಿ, ಅಲ್ಲಿನ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಗ್ಗೆ ಮಾತನಾಡಿ. ಈ ಸುದ್ದಿಯ ಕೇಂದ್ರಬಿಂದು ಇದೇ ಶಾಲೆ- ವಿವೇಕಾನಂದ ಶಿಕ್ಷಣ ಸಂಸ್ಥೆ .

ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರ (ಟಿ.ನರಸೀಪುರ) ತಾಲ್ಲೂಕಿನ ಒಂದು ಪುಟ್ಟ ಗ್ರಾಮ, ಬನ್ನೂರು. ಇಲ್ಲಿನ ಮಕ್ಕಳ ಪಾಲಿಗೆ ವಿವೇಕಾನಂದ ಶಿಕ್ಷಣ ಸಂಸ್ಥೆ ಅಕ್ಷರಪಾತ್ರೆ! ಈ ಶಾಲೆಯಲ್ಲಿ ಆ.15ರ ಭಾನುವಾರ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಎಲ್ಲ ಶಾಲೆಗಳಲ್ಲೂ ಕೇಸರಿ ಬಿಳಿ ಹಸಿರು ಬಾವುಟ ಆ.15ರಂದು ಹಾರುವುದು ಮಾಮೂಲು, ಬನ್ನೂರಿನ ಶಾಲೆಯದೇನು ವಿಶೇಷ ಎಂದಿರಾ ? ಇದೆ.

ಬನ್ನೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆ ಆಚರಿಸುವ 58ನೇ ಸ್ವಾತಂತ್ರ್ಯದಿನಾಚರಣೆ ಸಮಾರಂಭದಲ್ಲಿ ಭಾಗವಹಿಸುವ ಅತಿಥಿಗಳ ಪಟ್ಟಿಯ ಮೇಲೆ ಸುಮ್ಮನೇ ಒಮ್ಮೆ ಕಣ್ಣಾಡಿಸಿ. ಅಲ್ಲಿರುವುದೆಲ್ಲ ಅಮೆರಿಕನ್ನಡಿಗರು. ಅದರಲ್ಲೂ ಸಾರಸ್ವತಲೋಕದ ನಂಟರು !

ಕಾರ್ಯಕ್ರಮದ ವಿವರಗಳು ಇಂತಿವೆ :

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯುವ ಸ್ಥಳ :
ವಿವೇಕಾನಂದ ಶಿಕ್ಷಣ ಸಂಸ್ಥೆ , ಬನ್ನೂರು, ಟಿ. ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ-571 101

ದಿನಾಂಕ : 15, ಆಗಸ್ಟ್‌ , 2004.
ಸಮಯ : 10:15 ಪ್ರಾತಃಕಾಲ
ಸಮಾರಂಭ : ಸರ್ವಮಂಗಳ ಕಲ್ಯಾಣ ಮಂಟಪ, ಬನ್ನೂರು

ಧ್ವಜಾರೋಹಣ

ಕುಮಾರಿ ರಶ್ಮಿ ಶ್ರೀಧರ್‌
(ಪ್ರತಿಭಾನ್ವಿತ ನೃತ್ಯಗಾರ್ತಿ, ಕ್ಯಾಲಿಫೋರ್ನಿಯಾ ಅಮೇರಿಕಾ, ಕುಪರ್ಟಿನೋ. ರಶ್ಮಿ , ಕ್ಯಾಲಿಫೋರ್ನಿಯಾದಲ್ಲಿರುವ ಶ್ರೀಮತಿ ಆಶಾ ಶ್ರೀಧರ್‌ ಮತ್ತು ಗೋಪಾಲ್‌ ಶ್ರೀಧರ್‌ ಅವರ ಮಗಳು)

ಉದ್ಘಾಟನೆ

ಡಾ. ಕೆ. ವಿ. ರವಿಶಂಕರ್‌
ನಿರ್ದೇಶಕರು, ಉಷಾಕಿರಣ್‌ ಕಣ್ಣಿನ ಆಸ್ಪತ್ರೆ, ಮೈಸೂರು

ಅನ್ನಪೂರ್ಣಾ ವಿದ್ಯಾರ್ಥಿ ನಿಲಯದ ನಿರ್ಮಾಣದ ಉದ್ಘಾಟನೆ

ಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ
ಸಾಹಿತಿಗಳು ಮತ್ತು ಸಂಪಾದಕರು

ಮುಖ್ಯ ಅತಿಥಿಗಳು

ಡಾ. ಅಶ್ವಥ್‌ ಎನ್‌. ರಾವ್‌
ಅರ್ಥೋಪೆಡಿಕ್‌ ಸರ್ಜನ್‌
ಸೆಂಟ್‌ ಲೂಯಿಸ್‌ ಮಿಸ್ಸೌರಿ, ಅಮೇರಿಕಾ

ಅಧ್ಯಕ್ಷತೆ

ಶ್ರೀ ಶಿಕಾರಿಪುರ ಹರಿಹರೇಶ್ವರ
ಸಾಹಿತಿಗಳು ಮತ್ತು ಅಂಕಣ ಬರಹಗಾರರು, ಮೈಸೂರು

ರಾಷ್ಟ್ರಭಕ್ತಿಯ ಈ ಸಮಾರಂಭಕ್ಕೆ ಎಲ್ಲರಿಗೂ ಶಾಲೆ ಸ್ವಾಗತ ಕೋರಿದೆ.

ಸ್ವಾಗತಿಸುವವರು :
ಎಂ. ಪ್ರಕಾಶ್‌, ಸಂಸ್ಥಾ ನಿರ್ವಾಹಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು.

ಅಂದಹಾಗೆ, ನೀವು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿರಾ ? ಕನಿಷ್ಟ , ಗಾಂಧಿತಾತನ ನೆನೆದು. ಭಾರತ ಮಾತೆಗೊಂದು ನಮನ ಸಲ್ಲಿಸಿದಿರಿ ತಾನೆ....

English summary
Displaced Indians join school going kids in Bannur to celebrate India Independence Day, what a day!!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X