ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುತ್ತೂರು ತಾಲ್ಲೂಕು ಉಪ್ಪಿನಂಗಡಿ ಪೊಲೀಸ್‌ಠಾಣೆಯಲ್ಲಿ ಫೋನಿಲ್ಲ !

By Staff
|
Google Oneindia Kannada News

ಪುತ್ತೂರು ತಾಲ್ಲೂಕು ಉಪ್ಪಿನಂಗಡಿ ಪೊಲೀಸ್‌ಠಾಣೆಯಲ್ಲಿ ಫೋನಿಲ್ಲ !
ಗೃಹ ಇಲಾಖೆ ಉದಾಸೀನದ ಕುರಿತು ಬಿಜೆಪಿ ಸದಸ್ಯೆಯಿಂದ ಟೀಕೆ

ಬೆಂಗಳೂರು : ನಿಮ್ಮ ಕಣ್ಣೆದುರೇ ಯಾವುದೋ ಅಪರಾಧ ಘಟಿಸುತ್ತದೆ, ತಕ್ಷಣ ಪೊಲೀಸರಿಗೆ ತಿಳಿಸಬೇಕು, ಆಗ ಏನು ಮಾಡುತ್ತೀರಿ? ಫೋನ್‌ ಮಾಡುತ್ತೀರಿ ಅಲ್ಲವೇ ? ಒಂದುವೇಳೆ, ಆ ಠಾಣೆಯಲ್ಲಿ ಫೋನ್‌ ಇಲ್ಲದಿದ್ದರೆ ?

ಫೋನ್‌ ಇಲ್ಲದ ಪೊಲೀಸ್‌ ಠಾಣೆಯೂ ಉಂಟಾ ಎಂದು ಮೂಗು ಮುರಿಯಬೇಡಿ. ರಸ್ತೆ , ವಿದ್ಯುತ್‌, ಶಾಲೆಗಳು ಇಲ್ಲದ ಊರುಗಳು ಇರುವ ಕರ್ನಾಟಕದಲ್ಲಿ ಫೋನ್‌ ಇಲ್ಲದ ಪೊಲೀಸ್‌ ಠಾಣೆಗಳೂ ಇವೆ. ಜುಲೈ 29ರ ಗುರುವಾರ ರಾಜ್ಯ ವಿಧಾನಸಭೆಯಲ್ಲಿ ಫೋನ್‌ ಇಲ್ಲದ ಠಾಣೆಯಾಂದರ ಪ್ರಸ್ತಾಪ ಬಂತು.

ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಉಪ್ಪಿನಂಗಡಿ ಎನ್ನುವುದೊಂದು ಊರಿದೆ. ಈ ಊರಲ್ಲಿ ಪೊಲೀಸ್‌ ಠಾಣೆಯೇನೋ ಇದೆ ; ಠಾಣೆಯಲ್ಲಿ ದೂರವಾಣಿ ಮಾತ್ರ ಇಲ್ಲ . ಈ ಕಾರಣದಿಂದಾಗಿ ಪೊಲೀಸರ ನೆರವು ಆ ಕ್ಷಣದಲ್ಲೇ ಬೇಕೆಂದ ಸಂದರ್ಭದಲ್ಲಿ ಠಾಣೆಯನ್ನು ತ್ವರಿತವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ . ಸಣ್ಣಪುಟ್ಟ ವಿಷಯಗಳಿಗೂ ಸಾರ್ವಜನಿಕರು ಠಾಣೆಗೆ ಓಡಿಬರಬೇಕಾಗಿದೆ.

ಫೋನ್‌ ವಂಚಿತ ಉಪ್ಪಿನಂಗಡಿ ಠಾಣೆಯ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದವರು ಬಿಜೆಪಿ ಸದಸ್ಯೆ ಶಕುಂತಲಾ ಶೆಟ್ಟಿ . ಬಜೆಟ್‌ ಪ್ರಸ್ತಾಪಗಳ ಬಗ್ಗೆ ಮಾತನಾಡುತ್ತಿದ್ದ ಶಕುಂತಲಾ- ಫೋನ್‌ ಇಲ್ಲದ ಠಾಣೆಯ ವಿಷಯ ಪ್ರಸ್ತಾಪಿಸಿ ಗೃಹ ಇಲಾಖೆಯ ಅಸಾಮರ್ಥ್ಯವನ್ನು ಟೀಕಿಸಿದರು.

ಕಳೆದ ಸರ್ಕಾರ ನಾಲ್ಕು ಮಹಿಳಾ ಪೊಲೀಸ್‌ ಠಾಣೆಗಳನ್ನು ನಿರ್ಮಿಸುವುದಾಗಿ ಹೇಳಿತ್ತು . ಆದರೆ 2004-05ರ ಬಜೆಟ್‌ನಲ್ಲಿ ಈ ಪ್ರಸ್ತಾಪವೇ ಇಲ್ಲ ಎಂದು ಶಕುಂತಲಾ ಆಕ್ಷೇಪಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X