• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುರುಕೃಪಾ ಸಂಗೀತಕೇಂದ್ರದ ಸಂಭ್ರಮ

By Staff
|

ಗುರುಕೃಪಾ ಸಂಗೀತಕೇಂದ್ರದ ಸಂಭ್ರಮ
ಮಡಿಕೇರಿ ನಾಗೇಂದ್ರ ಸಾರಥ್ಯದ ಗುರುಕೃಪಾ ಸಂಗೀತ ಸಂಸ್ಥೆ ಮೂರನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸಾಹಿತ್ಯ-ಸಂಗೀತ ಕಾಯಕದಲ್ಲಿ ತೊಡಗಿರುವ ಗುರುಕೃಪಾ, ನೂರಾರು ವಿದ್ಯಾರ್ಥಿಗಳ ಪಾಲಿನ ಸರಿಗಮಪದನಿ. ಈ ಸಂಸ್ಥೆಯ ಕಿರು ಪರಿಚಯ ಹಾಗೂ ವಾರ್ಷಿಕೋತ್ಸವದ ವಿವರ ಇಲ್ಲಿದೆ.

  • ದಟ್ಸ್‌ಕನ್ನಡ ಬ್ಯೂರೊ, ಮೈಸೂರು
ಗುರುಕೃಪಾ ಸಂಗೀತ ಕೇಂದ್ರ
(139, 4ನೇ ಮುಖ್ಯ ರಸ್ತೆ, ದಟ್ಟಗಳ್ಳಿ ಎಂ ಬ್ಲಾಕ್‌,
ಕುವೆಂಪು ನಗರ, ಮೈಸೂರು -57ಂ ಂ23:: ದೂರವಾಣಿ: ಂ821-256 8558 )

ತೃತೀಯ ವಾರ್ಷಿಕೋತ್ಸವ ಸಮಾರಂಭ.

ಆಗಸ್ಟ್‌ 1, 2004, ಭಾನುವಾರ

ಬೆಳಿಗ್ಗೆ 10: 00 ಗಂಟೆಗೆ ಪ್ರಾರಂಭ

ಸ್ಥಳ:
ವೀಣೆ ಶೇಷಣ್ಣ ಭವನ, ಗಾನಭಾರತಿ,
ಆದಿಚುಂಚನಗಿರಿ ರಸ್ತೆ, ಮೈಸೂರು

ಸಮಾರಂಭದ ಉದ್ಘಾಟನೆ
ಸಂತ ಶಿಶುನಾಳ ಪ್ರಶಸ್ತಿ ವಿಜೇತೆ, ಶ್ರೀಮತಿ ಶ್ಯಾಮಲ ಜಾಗೀರದಾರ್‌ ಅವರಿಂದ.

ಮುಖ್ಯ ಅತಿಥಿಗಳು
ಶ್ರೀ ಎಸ್‌. ಕೆ. ಹರಿಹರೇಶ್ವರ
(‘ಅಮೇರಿಕನ್ನಡ’ ಖ್ಯಾತಿಯ ಅಂಕಣಕಾರರು).

*

ಪ್ರಾತಃಕಾಲ 11:00
ನಾದದೇವಿಗೆ ನಮನ-ವೃಂದಗಾನ
(ನಿರೂಪಣೆ: ಶ್ರೀಮತಿ ವಾಣಿ ರಾವ್‌)

ಪ್ರಾತಃಕಾಲ 11:30
ನಾದ ನೃತ್ಯ-ವಿಚಾರ ಗೋಷ್ಠಿ
ಪ್ರೊ।। ಕೆ. ರಾಮಮೂರ್ತಿ ರಾವ್‌
ಡಾ।। ತುಳಸಿ ರಾಮಚಂದ್ರ
ಶ್ರೀಮತಿ ಕೃಪಾ ಘಡ್ಡೆ
(ನಿರೂಪಣೆ: ಕುಮಾರಿ ರೂಪಶ್ರೀ)

ಮಧ್ಯಾಹ್ನ 12:15
ಎಳೆಯರ ಅಂಗಣ
ಗುರುಕೃಪಾ ಮಕ್ಕಳಿಂದ ಗಾಯನ
(ನಿರೂಪಣೆ: ಶ್ರೀಮತಿ ಇಂದ್ರಾಣಿ ಅನಂತರಾಮ್‌)

ಮಧ್ಯಾಹ್ನ 12:30
ಕಾವ್ಯ ಗಾಯನ - ಕವನ ಗಾಯನ
ಗಮಕಿ ಕೃ. ರಾಮಚಂದ್ರ
ಗಮಕಿ ಎಂ. ಆರ್‌. ಸತ್ಯನಾರಾಯಣ
ವಿದುಷಿ ಪದ್ಮಾ ನರಸಿಂಹನ್‌
(ನಿರೂಪಣೆ: ಡಾ. ಎನ್‌. ಕೆ. ರಾಮಶೇಶನ್‌)

ಮಧ್ಯಾಹ್ನ 3:00
‘ಉರಿವ ಬಿಸಿಲಿರಲಿ ಕೊರೆವ ಚಳಿ ಇರಲಿ ಮನದೊಳಿರಲಿ ನಿನ್ನ ಧ್ಯಾನ’
ದೇಶಭಕ್ತಿ ಗೀತೆಗಳು, ದಾಸರ ಪದಗಳು, ವಚನಗಳು ಹಾಗೂ ಚಲನ ಚಿತ್ರ ಭಾವಗೀತೆಗಳ ಗಾಯನ
(ನಿರೂಪಣೆ: ಜಯಶ್ರೀ ಮುಕುಂದ್‌)

ಸಂಜೆ 4:00
ರಂಗ ಗೀತೆಗಳು
ವಿದ್ವಾನ್‌ ಪರಮಶಿವನ್‌
ವಿದ್ವಾನ್‌ ಪುಟ್ಟಣ್ಣಯ್ಯ
ವಿದ್ವಾನ್‌ ಎಂ. ಎಸ್‌. ವೆಂಕಟರಾಮಯ್ಯ
(ನಿರೂಪಣೆ: ಮಡಿಕೇರಿ ನಾಗೇಂದ್ರ)

ಸಂಜೆ 6:00
ಸಮಾರೋಪ ಸಮಾರಂಭ

ಸನ್ಮಾನ
ಶ್ರೀಮತಿ ಶ್ಯಾಮಲ ಜಾಗೀರದಾರ್‌

ಅಧ್ಯಕ್ಷತೆ
ಮ. ಗು. ಸದಾನಂದಯ್ಯ
(ಉಪನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ, ಮೈಸೂರು)

ಸುಗಮ ಸಂಗೀತ
ಶ್ರೀನಿವಾಸ ಉಡುಪ
ಶ್ರೀಮತಿ ಅರ್ಚನಾ ಉಡುಪ
ಮತ್ತು ಗುರುಕೃಪಾ ವಿದ್ಯಾರ್ಥಿಗಳಿಂದ

ವಾದ್ಯ ಸಹಕಾರ: ಲಯ ಲಹರಿ
ಸಿ. ವಿಶ್ವನಾಥ್‌ :: ಮ್ಯಾಂಡೊಲಿನ್‌
ಸಿ. ಜಿ. ರವಿಶಂಕರ್‌ :: ಕೀ-ಬೋರ್ಡ್‌
ನಾರಾಯಣ್‌ :: ಪಿಟೀಲು
ನ. ಅಶ್ವಥ್‌ ನಾರಾಯಣರಾವ್‌ :: ತಬಲಾ
ನಾಗರಾಜ್‌ :: ತಬಲಾ
ಮಹದೇವ್‌, ಎನ್‌. ಭರತ್‌ :: ಲಯ ಸಹಕಾರ

ನೆರವು:
ಎನ್‌. ಫಣೀಶ್‌ ರಾವ್‌ :: ಎಂ. ಎ. ನಾಗರಾಜ್‌ :: ಸಂತೃಪ್ತಿ ರಾಘವೇಂದ್ರ
ನಾಗಲಕ್ಷ್ಮಿ ಶಂಕರ್‌ ಪ್ರಸಾದ್‌ :: ರಾಧಿಕಾ ಮೋಹನ್‌:: ಅನಂತಕೃಷ್ಣ ಶರ್ಮ
ಶ್ರೀನಿವಾಸ ಕಲರ್‌ ಲ್ಯಾಬ್‌ :: ಸರಸ್ವತೀ ವೆಂಕಟೇಷ್‌ :: ಕೆ. ಪಿ. ಗಾಯತ್ರಿ
ಚಂದ್ರಕಲಾ ಎಸ್‌ :: ಶಶಿರೇಖಾ - ಲಕ್ಷ್ಮಿ :: ಅರ್ಚನಾ :: ಡಾ. ಮನೋಹರ್‌
ಮಂಜುಳಾ :: ಲಕ್ಷ್ಮಣ್‌. ಎನ್‌

ಕೃತಜ್ಞತೆಗಳು :
ಹೆಚ್‌. ಎಸ್‌. ನಾರಾಯಣರಾವ್‌ :: ನ. ಅಶ್ವಥ್‌ ನಾರಾಯಣರಾವ್‌ :: ಎಂ. ಎಲ್‌. ಕೃಷ್ಣಸ್ವಾಮಿ
ಸುಂದರರಾಜು :: ರಾಧಾ ಶ್ರೀಕಾಂತ್‌

*

ತಮಗೆ ಆದರದ ಸ್ವಾಗತ

- ಮಡಿಕೇರಿ ನಾಗೇಂದ್ರ
(ನಿರ್ದೇಶಕರು, ಗುರುಕೃಪಾ ಸಂಗೀತ ಕೇಂದ್ರ)

*

ಮಡಿಕೇರಿ ನಾಗೇಂದ್ರ ಮತ್ತು ಗುರುಕೃಪಾ ಸಂಗೀತ ಕೇಂದ್ರ : ಒಂದು ಪರಿಚಯ ಲೇಖನ

ಗುರುಕೃಪಾ ಸಂಗೀತ ಕೇಂದ್ರವು (139, 4ನೇ ಮುಖ್ಯ ರಸ್ತೆ, ದಟ್ಟಗಳ್ಳಿ ಎಂ ಬ್ಲಾಕ್‌, ಕುವೆಂಪು ನಗರ, ಮೈಸೂರು -570023:: ದೂರವಾಣಿ: 0821-256 8558) 2001 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಕರ್ನಾಟಕ ಪ್ರಖ್ಯಾತ ಸುಗಮ ಸಂಗೀತ ಗಾಯಕರಾದ ಮಡಿಕೇರಿ ನಾಗೇಂದ್ರ ಅವರ ಕನಸಿನ ಶಾಲೆಯಲ್ಲಿ ಈಗ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಗೀತಾಭ್ಯಾಸಿಗಳಾಗಿದ್ದಾರೆ.

ಹುಟ್ಟಿನಿಂದಲೇ ಗಾಯಕನಾಗಿ ಸುಗಮ ಸಂಗೀತ ಕ್ಷೇತ್ರವನ್ನು ಆಯ್ದುಕೊಂಡ ಮಡಿಕೇರಿ ನಾಗೇಂದ್ರ ಕರ್ನಾಟಕದ ಹಿರಿಯ ಗಾಯಕರುಗಳಲ್ಲೊಬ್ಬರು. ಗಮಕ ಸಾಹಿತ್ಯ, ಸಂಗೀತದ ಮನೆತನದಲ್ಲಿ ಹುಟ್ಟಿದ ಶ್ರೀಯುತರು ಪ್ರಸಿದ್ಧ ಗಮಕಿ ದಿ। ಮೈ ಶೇ ಅನಂತಪದ್ಮನಾಭರಾಯರ ಪುತ್ರರು. 1972ರಿಂದ ಆಕಾಶವಾಣಿ ಕಲಾವಿದರಾಗಿದ್ದು, ಬೆಂಗಳೂರು, ಮೈಸೂರು, ಹಾಗೂ ಗುಲ್ಬರ್ಗಾ ಕೇಂದ್ರದ ಮೂಲಕ ಗಾಯನ ಪ್ರಸ್ತುತ ಪಡಿಸುತ್ತಿದ್ದಾರೆ. ದೂರದರ್ಶನದಲ್ಲಿ ಇವರ ಕಾರ್ಯಕ್ರಮಗಳು ನಡೆದಿವೆ.

ತಿರುಪತಿ ಬ್ರಹ್ಮೋತ್ಸವ, ಮೈಸೂರು ದಸರಾ (ಅರಮನೆ), ವ್ಯಾಸರಾಜ, ಪೇಜಾವರ ಹಾಗೂ ಉತ್ತರಾದಿ ಮಠಾಧೀಶರ ಚಾತುರ್ಮಾಸದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮತ್ತು ಸುತ್ತೂರು ದೇಶಿಕೇಂದ್ರೀಯ ಸ್ವಾಮಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಉದ್ಯಮಿಯಾಗಿದ್ದ ನಾಗೇಂದ್ರರವರು ಸ್ವಯಂ ನಿವೃತ್ತಿ ಪಡೆದು ತಮ್ಮ ಜೀವನವನ್ನು ಸಂಗೀತ ಬೋಧನೆಗಾಗಿ ಮುಡಿಪಿಟ್ಟಿದ್ದಾರೆ.

ದಾಸರ ಪದಗಳು, ವಚನ ಸಂಗೀತ, ಗಮಕ, ಹಾಗೂ ಸುಗಮ ಸಂಗೀತದ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ಭೋದಿಸುತ್ತಿರುವ ಗುರುಕೃಪಾ ಸಂಗೀತ ಶಾಲೆ ಮೈಸೂರಿನಲ್ಲಿ ಇಂದು ಮನೆ ಮಾತು.

ಮನೆ ಮನೆಯಲ್ಲಿ ಸಂಗೀತ, ಮಕ್ಕಳಿಗೆ, ಹಿರಿಯರಿಗೆ ಸಂಗೀತ ಶಿಬಿರಗಳು, ನಾಡ ಹಬ್ಬಗಳ ಆಚರಣೆ, ದಾಸವರೇಣ್ಯರ ಆರಾಧನೆಗಳು, ಹಿರಿಯ ವಿದ್ವಾಂಸರ ಶತಮಾನೋತ್ಸವಗಳು, ಕವಿ ಸಮ್ಮೇಳನಗಳು, ಸ್ಪರ್ಧೆಗಳು ಇತ್ಯಾದಿಗಳನ್ನು ತನ್ನ ಸ್ವಪ್ರಯತ್ನದಿಂದ ನಡೆಸಿಕೊಂಡು ಬರುತ್ತಿದೆ. ಈ ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಂದ ಹಾಡಿಸಿ ಅವರಲ್ಲಿದ್ದ ಭಯ ನಿವಾರಿಸಿ ಆತ್ಮ ವಿಶ್ವಾಸವನ್ನು ಬೆಳೆಸಿಕೊಡುತ್ತಿದೆ. ಆಕಾಶವಾಣಿ ಶ್ರೇಣಿಯ ಅನೇಕ ಕಲಾವಿದರಿಗೆ ಧ್ವನಿ ಸಂಸ್ಕರಣ ತರಬೇತಿ ನೀಡುತ್ತಿದೆ. ಸತತ ಅಭ್ಯಾಸ ನೀಡುವಲ್ಲಿ ಸಫಲವಾಗಿದೆ. ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಮಾಧ್ಯಮಗಳು ನಡೆಸುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿ, ಪ್ರಸಿದ್ಧರಾಗಿದ್ದಾರೆ.

ಪುರಂದರದಾಸರ ಆರಾಧನಾ ಸಮಿತಿ, ಕರ್ನಾಟಕ ಗಾನ ಕಲಾ ಪರಿಷತ್‌, ತ್ಯಾಗರಾಜ ಗಾನ ಸಭಾ, ಹೊಂಬಾಳೆ ಪ್ರತಿಭಾ ರಂಗ, ಕರ್ನಾಟಕ ಗಮಕ ಕಲಾ ಪರಿಷತ್‌, ಕರ್ನಾಟಕ ಸುಗಮ ಸಂಗೀತ ಪರಿಷತ್‌ ಇದರ ನಿಕಟ ಸಂಪರ್ಕದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ನೀಡಲಾಗುತ್ತಿದೆ.

‘ಶೃಂಗಾರಭಾವ ಅಂತಃಪುರಗೀತೆಗಳು’ (ನಮನ ಕ್ರಿಯೇಶನ್ಸ್‌), ‘ಯತಿವರ ಬಂದ ರಾಘವೇಂದ್ರ’ (ಪರಿಮಳ ಕ್ರಿಯೇಶನ್ಸ್‌), ‘ನಿಮಿಷಾಂಬ ನಿತ್ಯ ವೈಭವ’, ‘ದಾಸ ಸಮ್ಮೋಹ’ (ಸ್ವರಾಂಜಲಿ), ‘ಸ್ತೋತ್ರ ಸೌರಭ’ ಮತ್ತು ‘ಮೌನಧ್ವನಿ’ ಮುಂತಾದ ಧ್ವನಿ ಸುರುಳಿಗಳು ಲಹರಿ ಸಂಸ್ಥೆಯ ಮೂಲಕ ಹೊರಬಂದು, ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧವಾಗಿವೆ.

ಮೈಸೂರು ಸಾಂಸ್ಕೃತಿಕ ಕ್ಷೇತ್ರದ ತವರೂರು, ಕಲೆಯ ಈ ತವರಿನಲ್ಲಿ ಗುರುಕೃಪಾ ತನ್ನ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ. ಮೈಸೂರಿನ ನವಿಲು ರಸ್ತೆ, ಕೃಷ್ಣಮೂರ್ತಿಪುರಂ ಹಾಗೂ ವಿವೇಕಾನಂದನಗರಗಳಲ್ಲಿ ತನ್ನ ಶಾಖೆಯನ್ನು ವಿಸ್ತರಿಸಿದೆ. ಸ್ಥಳೀಯ ಸಂಸ್ಥೆಗಳಾದ ನಮನ ಕಲಾ ವೇದಿಕೆ, ನೃತ್ಯಾಲಯ, ನೂಪುರ, ಮೈಸೂರು ಸಾಂಸ್ಕೃತಿಕ ಕೇಂದ್ರ, ನೃತ್ಯಗಿರಿ, ಲಯ ಲಹರಿ ಮುಂತಾದ ಸಂಸ್ಥೆಗಳ ಸ್ನೇಹ ಸಂಬಂಧವಿರಿಸಿ ತನ್ಮೂಲಕ ಸಾಹಿತ್ಯ ಸಂಗೀತದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.


ಮುಖಪುಟ / ವಾರ್ತೆಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more