ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಪ್ರೋ ಹಾದಿಯಲ್ಲಿ ಇನ್ಫೋಸಿಸ್‌! 1000 ಕೋಟಿ ಯೋಜನೆ ವಲಸೆ

By Staff
|
Google Oneindia Kannada News

ವಿಪ್ರೋ ಹಾದಿಯಲ್ಲಿ ಇನ್ಫೋಸಿಸ್‌! 1000 ಕೋಟಿ ಯೋಜನೆ ವಲಸೆ
ಐಟಿ ಕಾರಿಡಾರ್‌ಗಾಗಿ ದಕ್ಕದ ಭೂಮಿ, 3 ವರ್ಷದಿಂದ ಸತಾಯಿಸುತ್ತಿರುವ ಸರ್ಕಾರ

ಬೆಂಗಳೂರು : ಕೊಂಬೆರೆಂಬೆಗಳ ವಿಸ್ತರಣೆಯ ಹಂಬಲದಲ್ಲಿರುವ ವಿಪ್ರೋ ಕರ್ನಾಟಕ-ಬೆಂಗಳೂರಿನಿಂದಾಚೆ ತನ್ನ ದೃಷ್ಟಿ ಹರಿಸಿರುವ ಸುದ್ದಿಯ ಬೆನ್ನಿನಲ್ಲೇ , ಸಿಲಿಕಾನ್‌ ವ್ಯಾಲಿ ಬೆಂಗಳೂರಿನ ಮತ್ತೊಂದು ಪ್ರತಿಷ್ಠಿತ ಕಂಪನಿ ಇನ್ಫೋಸಿಸ್‌ ಕೂಡ ತನ್ನ ವಿಸ್ತರಣೆಗಾಗಿ ಹೊರಗೆ ಕಣ್ಣು ಹಾಯಿಸುತ್ತಿದೆ.

1000 ಕೋಟಿ ರುಪಾಯಿಗಳ ಕ್ಯಾಂಪಸ್‌ ನಿರ್ಮಾಣಕ್ಕೆ ಸೂಕ್ತ ಸ್ಥಳ ದೊರಕದ ಕಾರಣ, ಈ ಯೋಜನೆಯನ್ನು ರಾಜ್ಯದ ಹೊರಗೆ ಕೈಗೊಳ್ಳಲು ಇನ್ಫೋಸಿಸ್‌ ಯೋಚಿಸುತ್ತಿರುವುದಾಗಿ ತಿಳಿದುಬಂದಿದೆ. ಒಂದೆಡೆ ರಾಜ್ಯ ಸರ್ಕಾರದ ದುಬಾರಿ ತೆರಿಗೆಯಿಂದ ಸಾಫ್ಟ್‌ವೇರ್‌ ಡೀಲರ್‌ಗಳು ಕಂಗೆಟ್ಟಿರುವ ಹೊತ್ತಿನಲ್ಲಿ , ಪ್ರತಿಷ್ಠಿತ ಕಂಪನಿಗಳ ಚಟುವಟಿಕೆಗಳ ವಲಸೆಯ ಸುದ್ದಿ ರಾಜ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಿನ್ನಡೆಯ ಆತಂಕ ಮೂಡಿಸಿದೆ.

ಮೂರು ವರ್ಷಗಳ ಹಿಂದೆಯೇ 1000 ಕೋಟಿ ರುಪಾಯಿ ವೆಚ್ಚದಲ್ಲಿ ಕ್ಯಾಂಪಸ್‌ ಸ್ಥಾಪಿಸುವ ಪ್ರಸ್ತಾವನೆಯನ್ನು ಇನ್ಫೋಸಿಸ್‌ ಸಿದ್ಧಪಡಿಸಿತ್ತು . ಉದ್ದೇಶಿತ ಐಟಿ ಕಾರಿಡಾರ್‌ ಯೋಜನೆಗಾಗಿ 110 ಎಕರೆ ಭೂಮಿಯನ್ನು ಗುರ್ತಿಸಿ ನೀಡುವಂತೆ, 10 ಕೋಟಿ ರುಪಾಯಿಗಳನ್ನು ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯಲ್ಲಿ ಠೇವಣಿಯಿಟ್ಟಿತ್ತು .

ಮೂರು ವರ್ಷಗಳಾದರೂ ಭೂಮಿಯನ್ನು ಗುರ್ತಿಸುವ ಕಾರ್ಯದಲ್ಲಿ ಪ್ರಗತಿಯಾಗಿಲ್ಲದ ಕಾರಣ ಇನ್ಫೋಸಿಸ್‌ ಪ್ರಸ್ತುತ ತನ್ನ ಇಡುಗಂಟು ವಾಪಸ್ಸಿಗೆ ಒತ್ತಾಯಿಸುತ್ತಿದೆ. ಇದರಿಂದಾಗಿ ಇನ್ಫೋಸಿಸ್‌ನ ಮಹತ್ವಾಕಾಂಕ್ಷೆಯ ಯೋಜನೆ ರಾಜ್ಯದ ಕೈತಪ್ಪುವ ನಿರೀಕ್ಷೆಯಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X