ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ‘ಅಂತರ್ದೃಷ್ಟಿ’ ; ಮುಂದೆ ಬಾಬ್ರಿಧ್ವಂಸ ಕುರಿತು ಪುಸ್ತಕ -ಪಿವಿಎನ್‌

By Staff
|
Google Oneindia Kannada News

ನಾಳೆ ‘ಅಂತರ್ದೃಷ್ಟಿ’ ; ಮುಂದೆ ಬಾಬ್ರಿಧ್ವಂಸ ಕುರಿತು ಪುಸ್ತಕ -ಪಿವಿಎನ್‌
ಯಾರನ್ನೂ ಟೀಕಿಸುವ- ವಿಮರ್ಶಿಸುವ ಉದ್ದೇಶ ಲೇಖಕ ನರಸಿಂಹರಾಯರಿಗಿಲ್ಲ !

ಬೆಂಗಳೂರು : ಬಾಬ್ರಿ ಮಸೀದಿ ನೆಲಸಮ ಪ್ರಕರಣದ ಒಳಹೊರಗನ್ನು ಚಿತ್ರಿಸುವ ಪುಸ್ತಕವೊಂದನ್ನು ರಚಿಸುವುದಾಗಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಹೇಳಿದ್ದಾರೆ.

ಅಯೋಧ್ಯೆ ವಿವಾದ, ಬಾಬ್ರಿ ಮಸೀದಿ ನೆಲಸಮ ಪ್ರಕರಣದ ಕುರಿತು ನಾನು ಪ್ರತ್ಯೇಕ ಪುಸ್ತಕ ಬರೆಯುವೆ ಎಂದು ಮಂಗಳವಾರ (ಜುಲೈ 27) ಬೆಂಗಳೂರಿನಲ್ಲಿ ಪಿ.ವಿ.ನರಸಿಂಹರಾವ್‌ ಹೇಳಿದರು. ತಮ್ಮ ‘ಇನ್‌ಸೈಡರ್‌’ ಪುಸ್ತಕದ ಕನ್ನಡ ಅವತರಣಿಕೆಯ ಬಿಡುಗಡೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ನರಸಿಂಹರಾವ್‌ ಪುಸ್ತಕದ ಕುರಿತು ಬುದ್ಧಿಜೀವಿಗಳೊಂದಿಗೆ ಮಾತನಾಡಿದ ಸಂದರ್ಭದಲ್ಲಿ , ಸುದ್ದಿಗಾರರೊಂದಿಗೆ ಔಪಚಾರಿಕವಾಗಿ ಮಾತನಾಡುವಾಗ ಈ ವಿಷಯ ತಿಳಿಸಿದರು. ಪುಸ್ತಕ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಕುರಿತು ನರಸಿಂಹರಾವ್‌ ಏನನ್ನೂ ಹೇಳಲಿಲ್ಲ .

ನರಸಿಂಹರಾವ್‌ ಪ್ರಧಾನಿಯಾಗಿದ್ದ ದಿನಗಳಲ್ಲೇ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ನೆಲಸಮಗೊಂಡಿದ್ದು , ಈ ಘಟನೆ ದೇಶಾದ್ಯಂತ ಕ್ಷೋಭೆಗೆ ಕಾರಣವಾಗಿತ್ತು .

‘ಇನ್‌ಸೈಡರ್‌’ ಪುಸ್ತಕದ ಕನ್ನಡ ಅವತರಣಿಕೆ ‘ಅಂತರ್ದೃಷ್ಟಿ’ ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ನಲ್ಲಿ ಬಿಡುಗಡೆಯಾಗಲಿದೆ. ರಾಜ್ಯಪಾಲ ಟಿ.ಎನ್‌.ಚತುರ್ವೇೕದಿ ಪುಸ್ತಕ ಬಿಡುಗಡೆ ಮಾಡುವರು. ಭಾರತೀಯ ವಿದ್ಯಾಭವನದ ಕಾರ್ಯ ನಿರ್ವಾಹಕ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಕನ್ನಡಕ್ಕೆ ಅನುವಾದಿಸಿರುವ ‘ಅಂತರ್ದೃಷ್ಟಿ’ಯನ್ನು ಲೋಕಶಿಕ್ಷಣ ಟ್ರಸ್ಟ್‌ ಪ್ರಕಟಿಸಿದೆ. 720 ಪುಟಗಳ (ಬೆಲೆ-250 ರು.) ನರಸಿಂಹರಾಯರ ಕೃತಿ- 1970 ಹಾಗೂ 80ರ ದಶಕದ ಸಂಘರ್ಷಗಳು ಹಾಗೂ ವಿವಾದಗಳ ಕುರಿತು ಬೆಳಕುಬೀರಿದೆ.

ಇನ್ನು ಐದಾರು ತಿಂಗಳಲ್ಲಿ ‘ಇನ್‌ಸೈಡರ್‌’ನ ಎರಡನೇ ಅವತರಣಿಕೆ ಬಿಡುಗಡೆಯಾಗಲಿದೆ. ಆತ್ಮಚರಿತ್ರೆ ಬರೆಯುವ ಸಾಧ್ಯತೆಗಳನ್ನು ರಾವ್‌ ತಳ್ಳಿಹಾಕಿದರು. ‘ಇನ್‌ಸೈಡರ್‌’ನ ಎರಡನೇ ಅವತರಣಿಕೆ ದೇಶದ ಆತ್ಮಚರಿತ್ರೆಯಾಗಲಿದೆ ಎಂದು ನರಸಿಂಹರಾವ್‌ ಬಣ್ಣಿಸಿದರು.

‘ಇನ್‌ಸೈಡರ್‌’ ಪುಸ್ತಕದಲ್ಲಿ ನಾನು ಕಂಡದ್ದನ್ನು ಬರೆದಿದ್ದೇನೆ. ಅನುಭವಿಸಿದ್ದನ್ನು , ಹೃದಯದಿಂದ ಒಡಮೂಡಿದ್ದನ್ನು ಚಿತ್ರಿಸಿದ್ದೇನೆ. ಯಾರನ್ನೂ ನಕಲು ಮಾಡಲು ಪ್ರಯತ್ನಿಸಿಲ್ಲ , ಯಾರನ್ನೂ ಟೀಕಿಸುವ- ವಿಮರ್ಶಿಸುವ ಉದ್ದೇಶವೂ ಇಲ್ಲ ಎಂದು ಮಾಜಿ ಪ್ರಧಾನಿ ನರಸಿಂಹರಾವ್‌ ಹೇಳಿದರು.

(ಪಿಟಿಐ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X