ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸಾಕು ಸಾಕಾಯ್ತಪ್ಪ ! ವಿಪ್ರೋ ಕಣ್ಣು ಇತರ ನಗರಗಳತ್ತ !

By Staff
|
Google Oneindia Kannada News

ಬೆಂಗಳೂರು ಸಾಕು ಸಾಕಾಯ್ತಪ್ಪ ! ವಿಪ್ರೋ ಕಣ್ಣು ಇತರ ನಗರಗಳತ್ತ !
ಕರ್ನಾಟಕ- ಬೆಂಗಳೂರಿನ ಹೊರಗೆ ಚಟುವಟಿಕೆಗಳ ವಿಸ್ತರಿಸಲು ವಿಪ್ರೋ ಹೆಜ್ಜೆ

ಬೆಂಗಳೂರು : ಸಿಲಿಕಾನ್‌ ವ್ಯಾಲಿ ಶಿಖರಗಳಲ್ಲೊಂದಾದ ವಿಪ್ರೋ ಲಿ.ಗೆ ಬೆಂಗಳೂರು ಸಾಕೆನ್ನಿಸಿತೆ ? ವಿಪ್ರೋ ಅಧ್ಯಕ್ಷ ಅಜೀಂ ಪ್ರೇಂಜಿ ಮಾತುಗಳ ಜಾಡು ಹಿಡಿದರೆ ಹಾಗೆನ್ನಿಸದಿರದು.

ಬೆಂಗಳೂರು ಸಾಕಾಯ್ತು ಎಂದು ಅಜೀಂ ಹೇಳುವುದಿಲ್ಲ . ಪ್ರೇಂಜಿ ಹೇಳುವುದಿಷ್ಟು : ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಪ್ರಗತಿಯೆನ್ನುವುದು ಮಡುಗಟ್ಟಿದೆ. ಇತ್ತೀಚಿನ ದಿನಗಳಂತೂ ಪ್ರಗತಿಯ ಮಾತೇ ಇಲ್ಲ . ಹೀಗಾಗಿ ಹೊಸ ನೆಲೆಗಳತ್ತ ಕಣ್ಣು ಹಾಯಿಸುವುದು ಅನಿವಾರ್ಯ.

ಪ್ರಸ್ತುತ ಬೆಂಗಳೂರಿನ ವಿಪ್ರೋ ಕೇಂದ್ರಗಳಲ್ಲಿ 11 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಆದರೆ, ಇನ್ನುಮುಂದೆ ಬೆಂಗಳೂರಿನಲ್ಲಿ ಕೊಂಬೆರೆಂಬೆಗಳ ವಿಸ್ತರಿಸಲು ವಿಪ್ರೋಗೆ ಮನಸ್ಸಿಲ್ಲ . ಮೂಲಭೂತ ಸೌಕರ್ಯಗಳಿಗೇ ಕೊರೆಯಾದರೆ, ಬೆಳವಣಿಗೆಯ ಮಾತು ಎಲ್ಲಿಂದ ಎನ್ನುವುದು ವಿಪ್ರೋದ ಕೊರಗು. ಹಾಗಾಗಿ ಸಾಧ್ಯವಾದಷ್ಟೂ ಬೆಂಗಳೂರಿನ ಹೊರಗೆ ಕಣ್ಣು ಹಾಯಿಸುತ್ತಿದ್ದೇವೆ ಎನ್ನುತ್ತಾರೆ ವಿವೇಕ್‌ ಪೌಲ್‌, ವಿಪ್ರೋದ ಉಪಾಧ್ಯಕ್ಷ .

ಹೈದರಾಬಾದ್‌, ಚೆನ್ನೈ , ಪುಣೆ, ಕೋಲ್ಕತ್ತಾ ಹಾಗೂ ಕೊಚ್ಚಿ . ಇವುಗಳು ವಿಪ್ರೋ ಸದ್ಯಕ್ಕೆ ಕಣ್ಣು ಹಾಯಿಸುತ್ತಿರುವ ನೆಲೆಗಳು. ಕೋಲ್ಕತ್ತಾದಲ್ಲಿ ಆಗಸ್ಟ್‌ ತಿಂಗಳಿಂದಲೇ ನಮ್ಮ ಚಟುವಟಿಕೆ ಪ್ರಾರಂಭಿಸುತ್ತೇವೆ ಎನ್ನುತ್ತಾರೆ ಅಜೀಂ ಪ್ರೇಂಜಿ. ಕೆಲವು ಹೊಸ ಲೆಕ್ಕಗಳನ್ನು ಅಲ್ಲಿ ಪ್ರಾರಂಭಿಸುವುದು ಮಾತ್ರವಲ್ಲದೆ, ಬೆಂಗಳೂರಿನ ಒಂದಷ್ಟು ಹೊರೆಯೂ ಕೊಲ್ಕತ್ತಾದಲ್ಲಿ ಹಗುರಗೊಳ್ಳಲಿದೆ ಎಂದು ಪ್ರೇಂಜಿ ಮುಂದಿನ ನಡೆಗಳ ಬಣ್ಣಿಸುತ್ತಾರೆ.

ಬೆಂಗಳೂರು ಒತ್ತಡದಿಂದಾಗಿ ಸವೆಯುತ್ತಿದೆ. ಈ ಒತ್ತಡದಲ್ಲಿ ಸಮಯವೂ ಪೋಲು. ಅಷ್ಟೇ ಅಲ್ಲ , ಇತರ ರಾಜ್ಯ-ನಗರಗಳಲ್ಲಿಯೂ ಉತ್ತಮ ಇಂಜಿನಿಯರ್‌ಗಳು, ತಂತ್ರಜ್ಞರು ದೊರೆಯುತ್ತಿದ್ದಾರೆ, ಸಂಬಳದ ಬೇಡಿಕೆಗಳೂ ಅಲ್ಲಿ ಇಲ್ಲಷ್ಟಿಲ್ಲ . ವಾಸ್ತವ ಏನಪ್ಪಾ ಅಂದರೆ- ಕರ್ನಾಟಕ ಹಾಗೂ ಬೆಂಗಳೂರಿನ ಹೊರಗೇ ಅವಕಾಶಗಳು ಉಜ್ವಲವಾಗಿವೆ ಎಂದು ಅಜೀಂ ಪ್ರೇಂಜಿ ಹೇಳುತ್ತಾರೆ.

ಅಯ್ಯೋ ಬೆಂಗಳೂರೇ....!

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X