ತವರ ಋಣ : ಗುಲ್ಬರ್ಗಾ ನಗರಕ್ಕೆ 10 ಕೋಟಿ ರು. ವಿಶೇಷ ಪ್ಯಾಕೇಜ್
ತವರ ಋಣ : ಗುಲ್ಬರ್ಗಾ ನಗರಕ್ಕೆ 10 ಕೋಟಿ ರು. ವಿಶೇಷ ಪ್ಯಾಕೇಜ್
ಮುಖ್ಯಮಂತ್ರಿಗಳಲ್ಲಿ ಧರ್ಮ-ಸಂಕಟ ತೋಡಿಕೊಂಡ ಆರ್ಥಿಕ ಬಿಕ್ಕಟ್ಟಿನ ನಗರಪಾಲಿಕೆ
ನಗರದ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ-ಕಾಮಗಾರಿಗಳನ್ನು ಹಮ್ಮಿಕೊಳ್ಳಲು ಮುಖ್ಯಮಂತ್ರಿ ಧರ್ಮಸಿಂಗ್ ಭರವಸೆ ನೀಡಿದ್ದಾರೆ. ಗುಲ್ಬರ್ಗಾ ನಗರಪಾಲಿಕೆ ನಿಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಆಶ್ವಾಸನೆ ದೊರೆಯಿತು ಎಂದು ಮೇಯರ್ ಅಮೃತರಾವ್ ಪಾಟೀಲ್ ಹಾಗೂ ಉಪ ಮೇಯರ್ ಮಾಲಿಪಾಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗದ ಮುಂದಾಳತ್ವವನ್ನು ಅಮೃತರಾವ್ ಹಾಗೂ ಮಾಲಿಪಾಟೀಲ್ ವಹಿಸಿದ್ದರು.
ಪ್ರಮುಖ ರಸ್ತೆಗಳ ದುರಸ್ತಿ , ಸಂಪರ್ಕ ರಸ್ತೆಗಳ ನಿರ್ಮಾಣ, ಒಳಚರಂಡಿ ಸವಲತ್ತಿನ ಉತ್ತಮೀಕರಣ, ಕುಡಿಯುವ ನೀರಿನ ಯೋಜನೆಗಳಿಗಾಗಿ ಮುಖ್ಯಮಂತ್ರಿಗಳು ನೀಡುವ ವಿಶೇಷ ಪ್ಯಾಕೇಜ್ ಬಳಕೆಯಾಗಲಿದೆ.
ವಿಶೇಷ ಪ್ಯಾಕೇಜ್‌ನ ಹಣ ಏಳೆಂಟು ದಿನಗಳಲ್ಲಿ ಕೈಸೇರುವುದೆಂದು ನಗರಪಾಲಿಕೆ ನಿರೀಕ್ಷಿಸಿದೆ. ನಗರಪಾಲಿಕೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು , ಇದರ ಕುರಿತು ಮುಖ್ಯಮಂತ್ರಿ ಧರ್ಮಸಿಂಗ್ ಗಮನ ಸೆಳೆಯಲಾಗಿದೆ ಎಂದು ಮೇಯರ್ ಅಮೃತರಾವ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications