ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಪ್ಯೂಟರ್‌ಗಳು ಇನ್ನಷ್ಟು ಅಗ್ಗ ! ಆರೋಗ್ಯಕ್ಷೇತ್ರಕ್ಕೆ ಹಲವು ವಿನಾಯಿತಿ

By Staff
|
Google Oneindia Kannada News

ಕಂಪ್ಯೂಟರ್‌ಗಳು ಇನ್ನಷ್ಟು ಅಗ್ಗ ! ಆರೋಗ್ಯಕ್ಷೇತ್ರಕ್ಕೆ ಹಲವು ವಿನಾಯಿತಿ
ಉತ್ಪಾದನಾ ಸುಂಕದಿಂದ ರೈತಮಿತ್ರ ಟ್ರ್ಯಾಕ್ಟರ್‌ಗಳಿಗೆ ವಿನಾಯಿತಿ

ನವದೆಹಲಿ : ಕೇಂದ್ರ ಸಚಿವ ಪಿ.ಚಿದಂಬರಂ ಗುರುವಾರ ಮಂಡಿಸಿದ 2004-05ರ ಕೇಂದ್ರ ಬಜೆಟ್‌ನ ಇನ್ನಷ್ಟು ಅಂಶಗಳು ಕೆಳಗಿನಂತಿವೆ -
  • ಕೇಂದ್ರದಿಂದ ರಾಜ್ಯಗಳು ಪಡೆಯುವ ಸಾಲದ ಬಡ್ಡಿದರ ಶೇ.10.5ರಿಂದ ಶೇ.9ಕ್ಕೆ ಇಳಿಕೆ.
  • ಬಿಹಾರದ ಸರ್ವತೋಮುಖ ಅಭಿವೃದ್ಧಿಗೆ 3225 ಕೋಟಿ ರುಪಾಯಿ ವಿಶೇಷ ಪ್ಯಾಕೇಜ್‌.
  • ಸಶಸ್ತ್ರ ಪಡೆ ಹಾಗೂ ಅರೆ ಸಶಸ್ತ್ರ ಪಡೆ ಯೋಧರ ವಿಧವೆಯರ ಪಿಂಚಣಿ ಆದಾಯ ತೆರಿಗೆ ವ್ಯಾಪ್ತಿಯಿಂದ ಮುಕ್ತಿ .
  • ಪಿಪಿಎಫ್‌ / ಜಿಪಿಎಫ್‌ ಬಡ್ಡಿ ದರ ಯಥಾಸ್ಥಿತಿಯಲ್ಲಿ . ಹಿರಿಯ ನಾಗರಿಕರ ಉಳಿತಾಯಕ್ಕೆ ಶೇ.9ರ ಬಡ್ಡಿದರ ನೀಡಿಕೆ.
  • ಆಟೊಮೊಬೈಲ್‌ ವಲಯವನ್ನು ಉತ್ತೇಜಿಸಲು ಒಳಾಂಗಣ ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಸವಲತ್ತುಗಳು.
  • ಕಂಪ್ಯೂಟರ್‌ಗಳಿಗೆ ಉತ್ಪಾದನಾ ಸುಂಕದಿಂದ ಪೂರ್ಣ ವಿನಾಯಿತಿ.
  • ವಾಣಿಜ್ಯ ಘಟಕದ ಮ್ಯೂಚುಯಲ್‌ ಫಂಡ್‌ಗಳ ಮೇಲೆ ಶೇ.20 ತೆರಿಗೆ.
  • ಬ್ರೆೃಲಿ, ಬ್ರೆೃಲಿ ಟೈಪ್‌ರೈಟರ್‌ ಹಾಗೂ ಬ್ರೆೃಲಿ ಕಂಪ್ಯೂಟರ್‌ಗಳಿಗೆ ಸೀಮಾ ಸುಂಕದಿಂದ ಪೂರ್ಣ ವಿನಾಯಿತಿ.
  • ಆಮದು ಸುಂಕದಿಂದ ಎಲ್ಲ ಆ್ಯಂಬುಲೆನ್ಸ್‌ಗಳಿಗೆ ವಿನಾಯಿತಿ.
  • ಎಲ್ಲ ವಿಧಧ ಸಾಂಕ್ರಾಮಿಕ ರೋಗಗಳ ತಪಾಸಣಾ ಕಿಟ್‌ಗಳು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗೆ.
  • ಉತ್ಪಾದನಾ ಸುಂಕದಿಂದ ಟ್ರ್ಯಾಕ್ಚರ್‌ಗಳು ಬಚಾವ್‌.
  • ಸೇವಾಶುಲ್ಕ ಶೇ.8ರಿಂದ 10ಕ್ಕೆ ಹೆಚ್ಚಳ.
(ಏಜನ್ಸೀಸ್‌)

ವಾರ್ತಾ ಸಂಚಯ
ಆದಾಯ ತೆರಿಗೆ ಮಿತಿ 1 ಲಕ್ಷಕ್ಕೆ ಏರಿಕೆ, 2005 ಏಪ್ರಿಲ್‌ನೊಳಗೆ ವ್ಯಾಟ್‌
ಕೃಷಿ-ಗ್ರಾಮೀಣ ಅಭಿವೃದ್ಧಿಗೆ ಒತ್ತು, ಅಲ್ಪ ಸಂಖ್ಯಾತರ ಮೂಗಿಗೆ ಬೆಣ್ಣೆ!
ಕೇಂದ್ರಬಜೆಟ್‌ 2004-05 : ಚಿದಂಬರಂ-ಮನಮೋಹನ್‌ ಸರ್ಕಸ್‌

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X