ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಲರಾ ಕಾಲರಾ: ಕಪ್ಪು ಪಟ್ಟಿಯಲ್ಲಿ ಮಂಗಳೂರಿನ ಆರು ಪ್ರದೇಶಗಳು

By Staff
|
Google Oneindia Kannada News

ಕಾಲರಾ ಕಾಲರಾ: ಕಪ್ಪು ಪಟ್ಟಿಯಲ್ಲಿ ಮಂಗಳೂರಿನ ಆರು ಪ್ರದೇಶಗಳು
ಶುಚಿತ್ವಕ್ಕೆ ಒತ್ತು , ಕಾಲರಾ ಮಾರಿ ನಿಯಂತ್ರಣಕ್ಕೆ ಸಕಲ ಪ್ರಯತ್ನ

ಮಂಗಳೂರು : ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯ 4 ಪ್ರದೇಶ ಹಾಗೂ ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಎರಡು ಪ್ರದೇಶಗಳನ್ನು ಕಾಲರಾ ಪೀಡಿತ ಪ್ರದೇಶಗಳೆಂದು ಜಿಲ್ಲಾಡಳಿತ ಪ್ರಕಟಿಸಿದೆ.

ಕಾಲರಾ ಪೀಡಿತ ಎನ್ನುವ ಕಪ್ಪುಪಟ್ಟಿಗೊಳಗಾದ ಪ್ರದೇಶಗಳು ಇಂತಿವೆ : ನಗರ ಪಾಲಿಕೆ ವ್ಯಾಪ್ತಿಯ ನಂತೂರು, ಜೆಲ್ಲಿಗುಡ್ಡೆ , ಕುಲಶೇಖರ ಹಾಗೂ ಕೊಡಿಕಲ್‌. ಗ್ರಾಮಾಂತರ ವ್ಯಾಪ್ತಿಯ ಹರೇಕಲ ಹಾಗೂ ಪಾವೂರು. ಈ ಆರೂ ಪ್ರದೇಶಗಳನ್ನು ಕಾಲರಾ ಪೀಡಿತ ಪ್ರದೇಶಗಳೆಂದು ಜಿಲ್ಲಾಧಿಕಾರಿ ಅರವಿಂದ್‌ ಶ್ರೀವಾತ್ಸವ ಘೋಷಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವರದಿ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ರದೇಶಗಳಲ್ಲಿನ ಎಲ್ಲ ಕ್ಯಾಂಟೀನು, ಬೇಕರಿ, ಹೊಟೇಲ್‌ಗಳಲ್ಲಿ ಸ್ವಚ್ಛತೆಯನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸುವಂತೆ ಆದೇಶ ನೀಡಲಾಗಿದೆ. ಸ್ವಚ್ಛತೆಯ ಕ್ರಮಗಳನ್ನು ಉಲ್ಲಂಘಿಸಿದಲ್ಲಿ ಅವುಗಳ ಪರವಾನಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗಡಿ ಮುಂಗಟ್ಟುಗಳು, ಕೈಗಾರಿಕಾ ಪ್ರದೇಶಗಳು, ಆಸ್ಪತ್ರೆಗಳು ಹಾಗೂ ಇನ್ನಿತರ ಕಟ್ಟಡಗಳು ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವಂತೆಯೂ ಸೂಚಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X