ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸೋರಿಕೆಗೆ ತಡೆ-ಪ್ರಗತಿಗೆ ಆದ್ಯತೆ’, ಇದು ರಾಜ್ಯಬಜೆಟ್‌ 2004-05

By Staff
|
Google Oneindia Kannada News

‘ಸೋರಿಕೆಗೆ ತಡೆ-ಪ್ರಗತಿಗೆ ಆದ್ಯತೆ’, ಇದು ರಾಜ್ಯಬಜೆಟ್‌ 2004-05
ಆನ್‌ಲೈನ್‌ ಲಾಟರಿ ನಿಷೇಧದ ಬಗೆಗೆ ಉಪ ಮುಖ್ಯಮಂತ್ರಿ ಜಾಣ ಉತ್ತರ

ಬೆಂಗಳೂರು : ಅನಗತ್ಯ ವೆಚ್ಚಗಳಿಗೆ ಕಡಿವಾಣ, ತೆರಿಗೆ ಸಾಧ್ಯತೆಗಳ ವಿಸ್ತರಣೆ ಹಾಗೂ ಆದಾಯ ಸೋರಿಕೆಗೆ ತಡೆ, ಈ ಮೂರು ಅಂಶಗಳಿಗೆ 2004-05ನೇ ಸಾಲಿನ ರಾಜ್ಯ ಬಜೆಟ್‌ ಒತ್ತು ನೀಡುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಬಜೆಟ್‌ ಪ್ರಗತಿಪರವಾಗಿರುತ್ತದೆ. ಅಭಿವೃದ್ಧಿಗೆ ಒತ್ತು ನೀಡಲಾಗುತ್ತದೆ. ರೈತರು ಹಾಗೂ ಬಡ ಜನತೆಯ ಹಿತಾಸಕ್ತಿಯನ್ನು ಉದ್ದೇಶವಾಗಿಟ್ಟುಕೊಂಡಿರುತ್ತದೆ ಎಂದು ಸಿದ್ಧರಾಮಯ್ಯ ಹೇಳಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 2004-05ನೇ ಸಾಲಿನ ರಾಜ್ಯ ಬಜೆಟ್‌ನ ದಿಕ್ಕುದೆಸೆಗಳ ಸ್ಥೂಲನೋಟ ಮುಂದಿಟ್ಟರು.

ವೈಜ್ಞಾನಿಕ ಹಾಗೂ ವಸ್ತುನಿಷ್ಠ ದೃಷ್ಟಿಕೋನಕ್ಕೆ ನಮ್ಮ ಸರ್ಕಾರದ ಆದ್ಯತೆ. ಆದಾಯ ಸೋರಿಕೆಯಾಗುತ್ತಿರುವ ವಾಣಿಜ್ಯ ತೆರಿಗೆ, ಸಾರಿಗೆ, ಸ್ಟಾಂಪ್ಸ್‌ ಇತ್ಯಾದಿ ಕ್ಷೇತ್ರಗಳ ಕುರಿತು ಬಜೆಟ್‌ನಲ್ಲಿ ವಿಶೇಷ ಗಮನ ಹರಿಸಲಾಗುವುದು ಎಂದು ಸಿದ್ಧರಾಮಯ್ಯ ಹೇಳಿದರು.

ಆನ್‌ಲೈನ್‌ ಲಾಟರಿ ನಿಷೇಧದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ- ಆನ್‌ಲೈನ್‌ ಲಾಟರಿ ನಿಷೇಧದ ವಿಷಯ ಜಾತ್ಯತೀತ ಜನತಾದಳದ ಪ್ರಣಾಳಿಕೆಯಲ್ಲಿದೆ. ಆದರೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಈ ವಿಷಯದ ಪ್ರಸ್ತಾಪವಿಲ್ಲ . ಹೀಗಿದ್ದಾಗ್ಯೂ ಲಾಟರಿ ನಿಷೇಧದ ಕುರಿತು ಕಾನೂನು ತಜ್ಞರ ಅಭಿಪ್ರಾಯ ಕೇಳಲಾಗುವುದು ಎಂದರು.

ಆಗಸ್ಟ್‌ನಿಂದ ಪ್ರಾರಂಭವಾಗುವ ನೂತನ ಅಬಕಾರಿ ವರ್ಷದಿಂದ ಅನ್ವಯವಾಗುವಂತೆ ಕೆಲವು ಬದಲಾವಣೆಗಳನ್ನು ಅಬಕಾರಿ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುವುದು ಎಂದು ಸಿದ್ಧರಾಮಯ್ಯ ಹೇಳಿದರು. ನಿಕಟಪೂರ್ವ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವ ಕುರಿತು ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ- ಕಾನೂನು ವಿರುದ್ಧವಾದ ಪ್ರತಿ ವಿಷಯದ ಕುರಿತೂ ತನಿಖೆ ನಡೆಸಲಾಗುವುದು ಎಂದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X