ರಾಜ್ಯಸಭೆಗೆ ಆಸ್ಕರ್, ವೆಂಕಯ್ಯ, ರಾಮಸ್ವಾಮಿ ಹಾಗೂ ಹರಿಪ್ರಸಾದ್
ರಾಜ್ಯಸಭೆಗೆ ಆಸ್ಕರ್, ವೆಂಕಯ್ಯ, ರಾಮಸ್ವಾಮಿ ಹಾಗೂ ಹರಿಪ್ರಸಾದ್
ತುರುಸಿನ ಸ್ಪರ್ಧೆಯಲ್ಲಿ ಸೋತ ರಾಮಕೃಷ್ಣ ಹೆಗಡೆ ಪತ್ನಿ ಶಕುಂತಲಾ
ಜೂನ್ 28ರ ಸೋಮವಾರ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಸ್ಕರ್, ವೆಂಕಯ್ಯನಾಯ್ಡು , ರಾಮಸ್ವಾಮಿ ಹಾಗೂ ಹರಿಪ್ರಸಾದ್ ಆಯ್ಕೆಯಾದರು. ನಾಲ್ಕನೇ ಸ್ಥಾನಕ್ಕಾಗಿ ನಡೆದ ತುರುಸಿನ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಹರಿಪ್ರಸಾದ್ ಎನ್‌ಡಿಎ ಅಭ್ಯರ್ಥಿ ಶಕುಂತಲಾ ಅವರನ್ನು ಪರಾಭವಗೊಳಿಸಿದರು.
ಆಸ್ಕರ್, ವೆಂಕಯ್ಯ ಹಾಗೂ ರಾಮಸ್ವಾಮಿ ಗೆಲುವು ಚುನಾವಣೆಗೆ ಮುನ್ನವೇ ಖಚಿತವಾಗಿತ್ತು . ಆದರೆ ನಾಲ್ಕನೇ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಹರಿಪ್ರಸಾದ್ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಶಕುಂತಲಾ ಹೆಗಡೆ ತೀವ್ರ ಸ್ಪರ್ಧೆ ಒಡ್ಡಿದ್ದರು. ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಪತ್ನಿ ಶಕುಂತಲಾ ಹೆಗಡೆ ಅವರನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಗೆ ಭಾವುಕತೆಯ ಸ್ಪರ್ಶವನ್ನು ಬಿಜೆಪಿ ನೀಡಿತ್ತು .
ವಿಧಾನಸಭೆಯ ಬಲಾಬಲ
ಬಿಜೆಪಿ- 79, ಕಾಂಗ್ರೆಸ್- 65, ಜಾತ್ಯತೀತ ಜನತಾದಳ-58, ಸಂ.ದ-5, ಪಕ್ಷೇತರರು-13, ಕನ್ನಡನಾಡು, ವಾಟಾಳ್, ಸಿಪಿಐಎಂ ಹಾಗೂ ಆರ್‌ಪಿಐ ತಲಾ ಒಂದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications