ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಮಂತ್ರಿಯಾಗೋದು ಗ್ಯಾರಂಟಿ ; ಮಹಿಮಾ ಪಟೇಲ್‌ ವಿಶ್ವಾಸ

By Staff
|
Google Oneindia Kannada News

ನಾನು ಮಂತ್ರಿಯಾಗೋದು ಗ್ಯಾರಂಟಿ ; ಮಹಿಮಾ ಪಟೇಲ್‌ ವಿಶ್ವಾಸ
ಅಪ್ಪನಿಗೆ ತಕ್ಕ ಮಗ - ಮಾತುಗಾರಿಕೆಯಲ್ಲೂ , ಗತ್ತಿನಲ್ಲೂ

ದಾವಣಗೆರೆ : ನಾನು ಮಂತ್ರಿಯಾಗೋದು ಗ್ಯಾರಂಟಿ. ಹೀಗೆಂದವರು ಜಾತ್ಯತೀತ ಜನತಾದಳದ ಅಭ್ಯರ್ಥಿಯಾಗಿ ಚನ್ನಗಿರಿ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿಬಂದಿರುವ ಯುವ ಶಾಸಕ ಮಹಿಮಾ ಪಟೇಲ್‌.

ಇತ್ತೀಚೆಗೆ ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮುಖಾಮುಖಿಯಾದ ಮಹಿಮಾ ಪಟೇಲ್‌ ತಾವು ಸಚಿವರಾಗುವ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಸಚಿವ ಸ್ಥಾನ ನೀಡುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಉಪ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೇಳಿದ್ದೇನೆ. ಅವರಿಬ್ಬರೂ ಒಪ್ಪಿಕೊಂಡಿದ್ದಾರೆ. ಮುಂಬರುವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ಸಿಗೋದು ಗ್ಯಾರಂಟಿ ಎಂದು ಮಹಿಮಾ ಪಟೇಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಅಂದಹಾಗೆ, ಮಹಿಮಾ ಪಟೇಲ್‌ರ ಅಗ್ಗಳಿಕೆ, ಅವರು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌.ಪಟೇಲರ ಮಗ ಎನ್ನೋದು. ತತ್ವ ಸಿದ್ಧಾಂತಗಳ ವಿಷಯ ಗೊತ್ತಿಲ್ಲ , ಮಾತಿನಲ್ಲಂತೂ ಅಪ್ಪನಿಗೆ ತಕ್ಕ ಮಗ.

ಮಹಿಮಾ ಪಟೇಲ್‌ ಮಾತನಾಡೋದೆ ಹಾಗೆ, ನೇರಾನೇರ. ಚುನಾವಣೆಗೂ ಮುನ್ನ ಟೀವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಹಿಮಾ ಪಟೇಲ್‌ರ ಗತ್ತುಗಾರಿಕೆ ಹಾಗೂ ಮಾತುಗಾರಿಕೆಯನ್ನು ರಾಜ್ಯದ ಜನ ಮೆಚ್ಚುಗೆಯಿಂದ ನೋಡಿ ಪಟೇಲರ ನೆನಪಿಸಿಕೊಂಡಿದ್ದರು. ಇತರ ಪಕ್ಷಗಳವರು ಟಿಕೇಟಿಗಾಗಿ ಪಡಿಪಾಟಲು ಪಡುವ ಕುರಿತು ಅಯ್ಯೋ ಎಂದಿದ್ದ ಮಹಿಮಾ ಪಟೇಲ್‌- ತಮ್ಮ ಪಕ್ಷದಲ್ಲಿ ತಾವೇ ಟಿಕೇಟು ನೀಡೋದು (ಅರ್ಥಾತ್‌ ಅಂತದೊಂದು ಸ್ಥಾನದಲ್ಲಿ ತಾನಿದ್ದೇನೆ) ಎಂದಿದ್ದರು.

ಈ ಪರಿಯ ಮಹಿಮಾ ಪಟೇಲರಿಗೀಗ ಮಂತ್ರಿಯಾಗುವ ಹುಕಿ ಬಂದಿದೆ. ಮಂತ್ರಿಯಾದರೆ ಮಹಿಮಾ ಯಾವ ಖಾತೆ ಬಯಸುತ್ತಾರೆ ? ಹಿಂದೆಮುಂದೆ ನೋಡದೆ ಮಹಿಮಾ ಉತ್ತರಿಸುತ್ತಾರೆ- ಶಿಕ್ಷಣ ಖಾತೆ. ಶೈಕ್ಷಣಿಕ ಕ್ಷೇತ್ರದಲ್ಲಿ ಒಂದಷ್ಟು ಬದಲಾವಣೆಗಳು ತುರ್ತಾಗಿ ಆಗಬೇಕಿದೆ. ಈ ಕುರಿತು ನನ್ನಲ್ಲಿ ಒಂದಷ್ಟು ಚಿಂತನೆಗಳಿವೆ. ಆ ಕಾರಣದಿಂದಾಗಿ ಶಿಕ್ಷಣ ಖಾತೆಯಾದರೆ ಒಳ್ಳೆಯದು ಎಂದು ಮಹಿಮಾ ಕನಸು ತೋಡಿಕೊಳ್ಳುತ್ತಾರೆ.

ಮಹಿಮಾ ಮಂತ್ರಿಯಾಗುತ್ತಾರಾ ? ಗೊತ್ತಿಲ್ಲ . ಸದ್ಯಕ್ಕಂತೂ ಸಂಪುಟ ವಿಸ್ತರಣೆಯ ಕುರಿತು ಯಾರೂ ಮಾತಾಡುತ್ತಿಲ್ಲ . ಸಮ್ಮಿಶ್ರ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರವೇ ಇನ್ನೂ ನಿಗದಿಯಾಗಿಲ್ಲ . ಆದರೆ, ಮಹಿಮಾರಂಥ ಯುವಕರು ಮಂತ್ರಿಯಾಗುವುದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X