ಗೋಕಾಕದ ಕೊಳವಿ ಶಾಲೇಲಿ ಬಿಸಿಯೂಟ ಉಂಡ 13 ಮಕ್ಕಳು ಅಸ್ವಸ್ಥ
ಗೋಕಾಕದ ಕೊಳವಿ ಶಾಲೇಲಿ ಬಿಸಿಯೂಟ ಉಂಡ 13 ಮಕ್ಕಳು ಅಸ್ವಸ್ಥ
ಚಿಕಿತ್ಸೆ ನಂತರ 11 ಮಕ್ಕಳು ಗುಣಮುಖ; ಇಬ್ಬರ ಸ್ಥಿತಿ ಗಂಭೀರ
ಅಸ್ವಸ್ಥರಾದ ಮಕ್ಕಳನ್ನು ತಕ್ಷಣ ತಾವಗಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯ್ತು. ಊಟ ಮಾಡಿದ ಮಕ್ಕಳಲ್ಲಿ ಅನೇಕರು ಒಂದೇ ಸಮನೆ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಕೆಲವರು ಹೊಟ್ಟೆ ನೋವಿನಿಂದ ನರಳುತ್ತಿದ್ದರು. ತಕ್ಷಣ 13 ಮಕ್ಕಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯ್ತು.
ಸೂಕ್ತ ಚಿಕಿತ್ಸೆಯ ನಂತರ 11 ಮಕ್ಕಳು ಚೇತರಿಸಿಕೊಂಡಿದ್ದಾರೆ. 2ನೇ ತರಗತಿಯ ಸಾಗರ ಹನುಮಂತ ಪೂಜಾರಿ ಮತ್ತು 5ನೇ ತರಗತಿಯ ಶಕುಂತಲಾ ಕಾಂಬ್ಳೆ ಎಂಬ ಇಬ್ಬರ ಸಾಸ್ಥ್ಯ ತುಂಬ ಗಂಭೀರವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳಪೆ ಗುಣಮಟ್ಟದ ಅಕ್ಕಿ ಮತ್ತು ಕಳಪೆ ಅಡುಗೆ ವಿಧಾನದಿಂದ ಹೀಗಾಗಿದೆ ಎಂದು ಅಸ್ವಸ್ಥರಾದ ಮಕ್ಕಳ ಪಾಲಕರು ಶಾಲಾ ಅಧಿಕಾರಿಗಳ ಮೇಲೆ ದೂರು ಸಲ್ಲಿಸಿದ್ದಾರೆ. ಈ ರೀತಿ ಮುಂದೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಪಾಲಕರು ಶಾಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications