ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ವಿವಿ ಗರ್ಭಪಾತ, ಹೊಸ ವಿವಿ ಯೋಜನೆಗೆ ಎಳ್ಳುನೀರು

By Staff
|
Google Oneindia Kannada News

ತುಮಕೂರು ವಿವಿ ಗರ್ಭಪಾತ, ಹೊಸ ವಿವಿ ಯೋಜನೆಗೆ ಎಳ್ಳುನೀರು
ಜುಲೈ 8ರಿಂದ ಸಿಇಟಿ ಸೀಟು ಹಂಚಿಕೆ ಪ್ರಾರಂಭ

ಬೆಂಗಳೂರು : ತುಮಕೂರಿನಲ್ಲಿ ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಯೋಜನೆಯನ್ನು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ನೇತೃತ್ವದ ಸರ್ಕಾರ ಕೈಬಿಟ್ಟಿದೆ.

ತುಮಕೂರು ವಿಶ್ವವಿದ್ಯಾಲಯವನ್ನು ಪ್ರಾರಂಭಿಸುವ ಯೋಜನೆಯನ್ನು ಸರ್ಕಾರ ಸದ್ಯಕ್ಕೆ ಕೈ ಬಿಟ್ಟಿದೆ. ಹಲವಾರು ಕಾರಣಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಿಕ್ಷಣ ಸಚಿವ ಡಿ.ಮಂಜುನಾಥ್‌ ಗುರುವಾರ ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದ ಸಂದರ್ಭದಲ್ಲಿ ತಿಳಿಸಿದರು.

ಕೋಲಾರದ ಜನತೆ ತುಮಕೂರು ವಿಶ್ವವಿದ್ಯಾಲಯದ ಕುರಿತು ಆಸಕ್ತಿ ಹೊಂದಿಲ್ಲ . ಅಲ್ಲದೆ ಮೂಲಭೂತ ಸೌಕರ್ಯಗಳ ಕೊರತೆ, ನಿವೇಶನ ಈವರೆಗೂ ದೊರೆಯದಿರುವುದು, ನಿಧಿಯ ಸಮಸ್ಯೆ- ಮುಂತಾದ ಕಾರಣಗಳಿಂದಲೂ ತುಮಕೂರು ವಿವಿ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ ಎಂದು ಮಂಜುನಾಥ್‌ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವೃತ್ತಿಪರ ಕೋರ್ಸುಗಳ ಪ್ರವೇಶವನ್ನು ಆಗಸ್ಟ್‌ ತಿಂಗಳಲ್ಲಿ ಪ್ರಾರಂಭಿಸಲಾಗುವುದು. ಈ ಬಾರಿ ಸಿಇಟಿ ಸೀಟು ಹಂಚಿಕೆಯ ಕಾರ್ಯ ವಿಳಂಬವಾಗಿದ್ದು, ಜುಲೈ 8ರಿಂದ ಸೀಟು ಹಂಚಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಸಚಿವ ಮಂಜುನಾಥ್‌ ಹೇಳಿದರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X