ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು

By Staff
|
Google Oneindia Kannada News

ರಾಯಚೂರಲ್ಲಿ ಮಳೆಯ ಚಿತ್ರಗಳು ಗೈರು, ಒಕ್ಕಲು ಮಕ್ಕಳು ಕಂಗಾಲು
ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ !

ರಾಯಚೂರು : ಮಳೆ ಮಳೆ ಮಳೆ. ರಾಜ್ಯದೆಲ್ಲೆಡೆಯೂ ಮಳೆಯದೇ ಸುದ್ದಿ . ಆದರೆ ರಾಯಚೂರಿನಲ್ಲಿ ಮಾತ್ರ ಮಳೆ ಮಾಯವಾಗಿದೆ. ಕಳೆದ ಮೂರು ವರ್ಷಗಳಿಂದ ರಾಜ್ಯದ ಭೂಪಟದಿಂದ ಅಳಿಸಿಹೋಗಿದ್ದ ಮಳೆಯ ಚಿತ್ರಗಳು ಈ ಬಾರಿ ಮರುಕಳಿಸಿದರೂ, ರಾಯಚೂರಿನಲ್ಲಿ ಮಾತ್ರ ಮಳೆ ಗುಳೆ ಹೊಂಟಿದೆ.

ಮೋಡ ಕವಿದ ವಾತಾವರಣವಿದೆ. ಮೋಡಗಳೂ ತೂಗುತ್ತವೆ. ಮಳೆ ಇನ್ನೇನು ಧೋ ಎಂದೀತು ಎಂದು ಕಣ್ಣುಗಳು ಮುಗಿಲಿಗೆ ನೆಡುತ್ತವೆ. ಆದರೆ ಮಳೆ ಸುರಿಯುವುದಿಲ್ಲ ! ಇದು ರಾಯಚೂರಿನ ಇಂದಿನ ಚಿತ್ರಣ. ಪರಿಣಾಮವಾಗಿ ರೈತರು ತಲ್ಲಣ.

ಅಂದಹಾಗೆ, ರಾಯಚೂರು ಜಿಲ್ಲೆಯಲ್ಲಿ ಮಳೆಯ ದರ್ಶನವೇ ಆಗಿಲ್ಲ ಎಂದಲ್ಲ . ಮೇ ಮೊದಲ ವಾರದಲ್ಲಿ ಕೊಂಚ ಮಳೆ ಬಿದ್ದಿತ್ತು . ಜೂನ್‌ 6ರಂದು ನೆಲ ತೇವವಾಗಿತ್ತು . ಮಳೆ ಮುಂದುವರಿಯುತ್ತದೆ ಎಂದು ಒಕ್ಕಲು ಮಕ್ಕಳು ಉತ್ತಲಿಕ್ಕೆ ಬಿತ್ತಲಿಕ್ಕೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಳೆ ಮುನಿಸಿಕೊಂಡಿತ್ತು .

ಜಿಲ್ಲೆಯ ಕೆಲಭಾಗದ ಭೂಮಿಗೆ ತುಂಗಭದ್ರಾ ಎಡದಂಡೆ ಯೋಜನೆಯಿಂದಾಗಿ ಹಸುರು ಕಾಣುತ್ತದೆ. ಕೃಷ್ಣಾನದಿಯ ನೀರೂ ಕೆಲಭಾಗವನ್ನು ತಣಿಸುತ್ತದೆ. ಆದರೆ ಬಹುಸಂಖ್ಯೆಯ ರೈತರು ನೆಚ್ಚಿಕೊಂಡಿರುವುದು ಮಳೆರಾಯನನ್ನು . ಈ ರೈತರು ಹುಯ್ಯೋ ಹುಯ್ಯೋ ಮಳೆರಾಯ ಎಂದು ಮುಗಿಲು ನೋಡುತ್ತಿದ್ದಾರೆ. ಮಳೆರಾಯನಿಗೂ ಭೇದಭಾವವಾ ? ತರವಲ್ಲ ತಗಿ.....

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X