ಗುಜರಾತ್: ಮೊಬೈಲ್ ತುಂಬಾ ವಾಜಪೇಯಿ ಅಹಿತಾನುಭವ ಮೆಸೆಜ್
ಗುಜರಾತ್: ಮೊಬೈಲ್ ತುಂಬಾ ವಾಜಪೇಯಿ ಅಹಿತಾನುಭವ ಮೆಸೆಜ್
ಮೆಸೆಜ್ ಮೂಲದ ತನಿಖೆಗೆ ಸರಕಾರದಿಂದ ಆದೇಶ
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೊಬೈಲ್ ತುಂಬಾ ವಾಜಪೇಯಿ ಹಿತಾನುಭವದ ಮೆಸೆಜ್‌ಗಳು ಬರುತ್ತಿದ್ದುವು. ಚುನಾವಣೆ ಸೋಲು ಮತ್ತು ಮೋದಿ ಪದಚ್ಯುತಿ ವಾಗ್ಯುದ್ಧದ ಹಿನ್ನೆಲೆಯಲ್ಲಿ ಈ ಮೆಸೆಜ್‌ಗಳು ರವಾನೆಯಾಗುತ್ತಿರಬಹುದು ಎಂದು ಸಂಶಯಿಸಲಾಗಿದೆ.
‘ವಾಜಪೇಯಿಯನ್ನು ಈ ದೇಶದಿಂದಲೇ ಉಚ್ಚಾಟಿಸಬೇಕು’ಮತ್ತು ಇನ್ನಿತರ ಮೆಸೆಜ್‌ಗಳ ಮೂಲ ಪತ್ತೆ ಹಚ್ಚಲು ಪೊಲೀಸ್ ಮಧ್ಯ ಪ್ರವೇಶಿಸ ಬೇಕೆಂದು ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್‌ಒತ್ತಾಯಿಸಿದ್ದಾರೆ.
ವಾಜಪೇಯಿ ಕುರಿತು ರವಾನೆಯಾಗುತ್ತಿರುವ ಕೀಳುಮಟ್ಟದ ಜಾಹಿರಾತುಗಳ ಮೂಲವನ್ನು ಕಂಡು ಹಿಡಿಯಲಾಗುವುದು ಎಂದು ಗುಜರಾತ್‌ಪೊಲೀಸ್ ಮಹಾನಿರ್ದೇಶಕ ಎ.ಕೆ.ಭಾರ್ಗವ ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications