Get Updates
Get notified of breaking news, exclusive insights, and must-see stories!

ದಾಂಡೇಲಿಯ ‘ಕಾಳಿ’ಯಲ್ಲಿ ಸಿಕ್ಕ ಗಣೇಶ! ಕುತೂಹಲವೂ ಪ್ರಶ್ನೆಗಳೂ

ದಾಂಡೇಲಿಯ ‘ಕಾಳಿ’ಯಲ್ಲಿ ಸಿಕ್ಕ ಗಣೇಶ! ಕುತೂಹಲವೂ ಪ್ರಶ್ನೆಗಳೂ
ನದಿಯ ಗರ್ಭದಲ್ಲಿ ಸಿಕ್ಕ ಕಪ್ಪು ಗ್ರಾನೈಟ್‌ ಗಣೇಶ....

ದಾಂಡೇಲಿ : ರಮೇಶ್‌ ಕದಂ ಅವರ ಮನೆಯೀಗ ದೇಗುಲವಾಗಿದೆ ; ಎಲ್ಲವೂ ಗಣೇಶನ ಮಹಿಮೆ !

ಈ ಮುನ್ನ ಸ್ಥಳೀಯ ಕಾರ್ಖಾನೆಯಾಂದರ ಉದ್ಯೋಗಿಯಾಗಿದ್ದ ರಮೇಶ್‌ ಕದಂ ಸದ್ಯಕ್ಕೆ ನಿರುದ್ಯೋಗಿ. ಕಾರ್ಖಾನೆ ಮುಚ್ಚಿದ ನಂತರ ಆತನ ದಿನಗಳು ಅಷ್ಟೇನೂ ಸುಖಕರವಾಗಿರಲಿಲ್ಲ . ಇಂಥ ಸಂದರ್ಭದಲ್ಲಿ ಆತನಿಗೆ ತುಸು ನೆಮ್ಮದಿ ಕೊಡುತ್ತಿದ್ದುದು ಆಗಾಗ ಕೈಗೊಳ್ಳುತ್ತಿದ್ದ ಮೀನು ಶಿಕಾರಿ.

ಮೀನು ಹಿಡಿಯುವುದು ಕದಂರ ನೆಚ್ಚಿನ ಹವ್ಯಾಸಗಳಲ್ಲೊಂದು. ಮೊನ್ನೆಯಾಂದು ದಿನ ಮೀನು ಹಿಡಿಯಲು ಕಾಳಿ ನದಿಗಿಳಿದಿದ್ದ ಕದಂಗೆ ಸಿಕ್ಕಿದ್ದು ಭಾರೀ ಬೇಟೆ ! ಮೀನಿಗೆ ಗಾಳ ಹಾಕುತ್ತಾ ದಾಂಡೇಲಿಯಿಂದ ಸುಮಾರು 5 ಕಿಮೀ ಕ್ರಮಿಸಿದ ಕದಂಗೆ ಒಂದು ಭಾರೀ ಮೀನು ಸಿಕ್ಕಿತ್ತು . ಆದರೆ ಆ ಹಠಮಾರಿ ಮೀನು ಕದಂಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಯಿತು. ಆ ಬೇಸರದಲ್ಲೇ ಮುಂದೆ ಸಾಗಿದಾಗ ಕದಂಗೆ ಸಿಕ್ಕಿದ್ದು ಗಣೇಶ !

ಕಾಳಿ ನದಿಯಲ್ಲಿ ನೀರು ತೆಳ್ಳಗಿತ್ತು . ಆ ಕಾರಣದಿಂದ ನದಿಯ ಮಧ್ಯಭಾಗ್ಯಕ್ಕೆ ನಡೆದೇ ತೆರಳಿದ ಕದಂ, ಅಲ್ಲೊಂದು ಕಡೆ ಮರಳ ಮೇಲೆ ಮಲಗಿದ ಗಣೇಶ ಮೂರ್ತಿಯನ್ನು ಕಂಡರು. ಸುತ್ತಲೂ ಕಪ್ಪು ಕಲ್ಲುಗಳಿದ್ದವು. ಕಪ್ಪು ಗ್ರಾನೈಟ್‌ ಶಿಲೆಯ ಗಣೇಶಮೂರ್ತಿಯ ಎತ್ತರ 2 ಅಡಿಗಳು. ಮೂರ್ತಿಯ ತಲೆಗೆ ಚಾಮರವಾಗಿ ಹೆಡೆಬಿಚ್ಚಿದ ನಾಗನಿದ್ದಾನೆ. ಅಂದಹಾಗೆ, ಈ ಗಣೇಶನಿಗೆ 6 ಕೈಗಳು.

ಸದ್ಯಕ್ಕೆ ಕದಂರ ಮನೆಯೇ ಕಾಳಿಯಲ್ಲಿ ಸಿಕ್ಕ ಗಣೇಶನಿಗೆ ಮಂಟಪವಾಗಿದೆ. ಜನ ತಂಡೋಪತಂಡವಾಗಿ ಬಂದು ಗಣೇಶನಿಗೆ ನಮೋ ಎನ್ನುತ್ತಿದ್ದಾರೆ. ಗಣೇಶನಿಗೊಂದು ಆಲಯ ಕಟ್ಟುವ ಯೋಚನೆ ಕದಂರ ತಲೆಯಲ್ಲಿ ಮೊಳೆತಿದೆ.

ಈ ನಡುವೆ ವಿಗ್ರಹದ ಕುರಿತು ಹಲವು ಪ್ರಶ್ನೆಗಳೂ ಎದ್ದಿವೆ : ಕಾಳಿ ನದಿಯಲ್ಲಿ ಸಿಕ್ಕ ಗಣೇಶ ವಿಗ್ರಹ ಯಾವ ಕಾಲದ್ದು ? ಅದು ನದಿ ಸೇರಿದ್ದು ಹೇಗೆ ? ವಿಗ್ರಹದ ಇತಿಹಾಸ ಏನು ? ಇತ್ಯಾದಿ.... ಇತಿಹಾಸ ತಜ್ಞರು ಹಾಗೂ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಕಣ್ಣು ಇನ್ನೂ ಇತ್ತ ಬಿದ್ದಂತಿಲ್ಲ ...

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+