ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲೋಕ್‌ ಮ್ಯಾಜಿಕ್‌ : ದಾವಣಗೆರೇಲಿ ಅರ್ಧ ರಾತ್ರಿ ದಂಧೆ ಬಂದ್‌!

By Staff
|
Google Oneindia Kannada News

ಅಲೋಕ್‌ ಮ್ಯಾಜಿಕ್‌ : ದಾವಣಗೆರೇಲಿ ಅರ್ಧ ರಾತ್ರಿ ದಂಧೆ ಬಂದ್‌!
ಶಾಂತಿ-ಸುವ್ಯವಸ್ಥೆ ರಕ್ಷಣೆಗೆ ಪೊಲೀಸ್‌ ವರಿಷ್ಠರ ಕಟ್ಟುನಿಟ್ಟು ಕ್ರಮ

ದಾವಣಗೆರೆ : ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲೊಂದಾದ ದಾವಣಗೆರೆಯಲ್ಲಿನ್ನು ಮುಂದೆ ಅರ್ಧರಾತ್ರಿ ವ್ಯವಹಾರಗಳು ಬಂದ್‌ ! ಜಿಲ್ಲೆಯ ನೂತನ ಎಸ್‌ಪಿ ಅಲೋಕ್‌ಕುಮಾರ್‌ ಇಂಥದೊಂದು ಆದೇಶ ಹೊರಡಿಸಿದ್ದಾರೆ.

ಅಲೋಕ್‌ ಕುಮಾರ್‌ ರಾಜ್ಯದ ಪ್ರಾಮಾಣಿಕ ಐಪಿಎಸ್‌ ಅಧಿಕಾರಿಗಳಲ್ಲೊಬ್ಬರೆಂದು ಹೆಸರು ಪಡೆದವರು. ಹಾಗಾಗಿಯೇ ಅಲೋಕ್‌ ದಾವಣಗೆರೆಗೆ ಬರುತ್ತಾರೆಂದಾಗ ಮನಸ್ಸಿನಲ್ಲೇ ಸ್ವಾಗತ ಕೋರಿದ ನಾಗರಿಕರ ಸಂಖ್ಯೆ ದೊಡ್ಡದು. ಅಲೋಕ್‌ಕುಮಾರ್‌ ನಾಗರಿಕರ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ . ಇತ್ತೀಚೆಗಷ್ಟೇ ದಾವಣಗೆರೆ ಜಿಲ್ಲಾ ಪೊಲೀಸ್‌ ವರಿಷ್ಠರಾಗಿ ಅಧಿಕಾರ ವಹಿಸಿಕೊಂಡಿರುವ ಅಲೋಕ್‌ ಕುಮಾರ್‌, ಮೊದಲ ದಿನದಿಂದಲೇ ತಮ್ಮ ವರಸೆ ಆರಂಭಿಸಿದ್ದಾರೆ. ಅಂಥ ಗತ್ತಿನ ಆದೇಶಗಳಲ್ಲೊಂದು- ಅರ್ಧರಾತ್ರಿಯ ವ್ಯವಹಾರಗಳಿನ್ನು ಬಂದ್‌ !

ಸಿನಿಮಾ ಮಂದಿರ, ಹೊಟೇಲು, ಬಾರ್‌, ಮನರಂಜನಾ ಕೇಂದ್ರ- ಪ್ರತಿಯಾಂದೂ ರಾತ್ರಿ 11.30ರೊಳಗೆ ಕಡ್ಡಾಯವಾಗಿ ಮುಚ್ಚಬೇಕು ಎನ್ನುವುದು ಅಲೋಕ್‌ ಆದೇಶ. ದರೋಡೆ, ದೊಂಬಿ ಹಾಗೂ ಕುಡುಕರ ಹಾವಳಿ ತಡೆಗೆ ಈ ಮುಂಜಾಗರೂಕತಾ ಕ್ರಮ ಅಗತ್ಯ ಎಂದು ತಮ್ಮ ಆದೇಶವನ್ನವರು ಸಮರ್ಥಿಸಿಕೊಳ್ಳುತ್ತಾರೆ.

ದಂಧೆಗಳ ಮಾತು ಪಕ್ಕಕ್ಕಿರಲಿ ; ಜನತೆ ಕೂಡ ಶಿಸ್ತನ್ನು ರೂಢಿಸಿಕೊಳ್ಳಬೇಕು. ಅರ್ಧರಾತ್ರಿಯಾಳಗೆ ಜನ ಮನೆ ಸೇರಬೇಕು. ಇಲ್ಲದೆ ಹೋದಲ್ಲಿ ಗಸ್ತು ತಿರುಗುವ ಪೊಲೀಸರ ಪ್ರಶ್ನೆಗಳ ಕಣ್ಣಿಗೆ ಒಳಗಾಗಬೇಕಾದೀತು ಎಂದು ಅಲೋಕ್‌ ಎಚ್ಚರಿಸಿದ್ದಾರೆ. ಮದುವೆ-ಮುಂಜಿ-ಆಸ್ಪತ್ರೆಯಂಥ ಪ್ರಕರಣಗಳಲ್ಲಿ ಮೂಗು ತೂರಿಸೊಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಿರುವುದರಿಂದ, ರಾತ್ರಿ ಗಸ್ತನ್ನು ಪರಿಷ್ಕರಿಸಲಾಗುತ್ತಿದೆ. ನಗರದ ಟ್ರಾಫಿಕ್‌ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಡ್ಡಾದಿಡ್ಡಿ ಡ್ರೆೃವ್‌ ಮಾಡುವವರ (ವಿಶೇಷವಾಗಿ ವಿದ್ಯಾರ್ಥಿಗಳು) ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇದಿಷ್ಟೂ ಅಲೋಕ್‌ ಆಡಳಿತದ ಒಂದು ಮುಖ. ನೋಡಿ ಕಲಿಯುವ ಬುದ್ಧಿ ನಮ್ಮ ಇತರ ಅಧಿಕಾರಿಗಳಿಗೆ ಬರಬಾರದೆ ?

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X