ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಲಿದೆ: ಮೊಹಾಂತಿ

By Staff
|
Google Oneindia Kannada News

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಲಿದೆ: ಮೊಹಾಂತಿ
ಚೀನಾದ ನಂತರ ಏಷ್ಯಾದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶ ಭಾರತ

ಬೆಂಗಳೂರು: ಭಾರತವು 2020ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಎಂದು ಜರ್ಮನ್‌ ರಾಯಭಾರಿ ಹೀನ್ಸ್‌ ಕಾಪ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾರತೀಯ ಸರಕು ನಿರ್ವಹಣೆ ಸಂಸ್ಥೆ (ಐಐಎಂಎಂ) ಆಯೋಜಿಸಿರುವ ಮೂರು ದಿನಗಳ ಸ್ಕೇಲ್‌- 04 ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನವನ್ನು ಜೂನ್‌ 17ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತದ ಮಾನವ ಸಂಪನ್ಮೂಲ ಹಾಗೂ ಮಾರುಕಟ್ಟೆ ವ್ಯವಸ್ಥೆ ಬಹುರಾಷ್ಟ್ರೀಯ ಕಂಪನಿಗಳಿಗೆ ಉತ್ತಮ ಕೈಗಾರಿಕಾ ತಾಣ ಒದಗಿಸಿದೆ. ಭಾರತದ ಯುವ ಪೀಳಿಗೆಯ ತಂತ್ರಜ್ಞರು ಮತ್ತು ಕಂಪ್ಯೂಟರ್‌ ವಿಜ್ಞಾನಿಗಳ ಸಾಧನೆ ಇಡೀ ಜಗತ್ತಿಗೇ ಮಾದರಿಯಂತಿದೆ ಎಂದು ಕಾಪ್‌ ಕಾರ್ಯಾಗಾರದಲ್ಲಿ ನುಡಿದರು.

ಚೀನಾದ ನಂತರ ಏಷ್ಯಾದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ದೇಶ ಭಾರತವೇ ಆಗಿದೆ. ಭಾರತದ ತಂತ್ರಜ್ಞರಿಗೆ ಜಗತ್ತಿನ ಎಲ್ಲ ಭಾಗಗಳಲ್ಲೂ ಬೇಡಿಕೆ ಇದೆ. 2020ರ ವೇಳೆಗೆ ಭಾರತವು ಏಷ್ಯಾದಲ್ಲೇ ಬೃಹತ್‌ ಕೈಗಾರಿಕಾ ದೇಶವಾಗುವದರಲ್ಲಿ ಸಂಶಯವೇ ಇಲ್ಲ ಎಂದು ಎಚ್‌ಎಎಲ್‌ ಅಧ್ಯಕ್ಷ ಎನ್‌. ಆರ್‌. ಮೊಹಂತಿ ನುಡಿದರು.

ಜಾಗತಿಕ ಮಟ್ಟದಲ್ಲಿ ಪ್ರತಿಸ್ಪರ್ಧಿಯಾಗಿ ನಿಲ್ಲಲು ಗುಣಮಟ್ಟದ ವಸ್ತುಗಳ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಬೇಕು. ಕೈಗಾರಿಕೆಗಳ ಯಶಸ್ಸು ಅದರ ಉತ್ಪನ್ನಗಳ ಮಾರುಕಟ್ಟೆ ಮತ್ತು ಸರಬರಾಜಿನ ಮೇಲೆ ಅವಲಂಬಿತವಾಗಿದೆ ಎಂದು ಐಐಎಂನ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಭಾರದ್ವಜ್‌ ಸಲಹೆ ನೀಡಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X