ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯಿ, ಮಗುವಿನ ಜೀವ ನುಂಗಿದ ಖಾಸಗಿ ಶಾಲೆಯ ಡೊನೇಶನ್‌ ಭೂತ

By Staff
|
Google Oneindia Kannada News

ತಾಯಿ, ಮಗುವಿನ ಜೀವ ನುಂಗಿದ ಖಾಸಗಿ ಶಾಲೆಯ ಡೊನೇಶನ್‌ ಭೂತ
ಶಾಲೆಯ ಡೊನೇಶನ್‌ ಕೊಡಲಾಗದ ಕಾರಣಕ್ಕೆ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ನಾರಿ..

ಬೆಂಗಳೂರು: ನಗರದ ರಾಜಾಜಿನಗರ ಬಡಾವಣೆಯ ಕಹಳೆ ಟ್ಯಾಬ್ಲಾಯ್ಡ್‌ ಪತ್ರಿಕೆಯ ಸಂಪಾದಕರಾದ ಸತ್ಯನಾರಾಯಣ ಅವರ ಮಡದಿ ತನ್ನ ನಾಲ್ಕು ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಖಾಸಗಿ ಶಾಲೆಯಾಂದಕ್ಕೆ ಮಗಳನ್ನು ಸೇರಿಸಲು ಹೋದ ರೂಪಾ , ಶಾಲೆಯಯವರು ಕೇಳಿದ ಡೊನೇಶನ್‌ ಕೊಡಲು ಆಗಲಿಲ್ಲ. ಅದೇ ಕಾರಣಕ್ಕೆ ಆಕೆ ಮಗುವನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ರೂಪಾ ಮತ್ತು ಸತ್ಯನಾರಾಯಣ ದಂಪತಿಗಳು ತಮ್ಮ ಒಬ್ಬಳೇ ಮಗಳನ್ನು ಖಾಸಗಿ ಶಾಲೆಗೆ ಸೇರಿಸಲು ಹೋದಾಗ, ಶಾಲಾ ಸಿಬ್ಬಂದಿ ವರ್ಗ 5,000 ರೂಪಾಯಿ ಡೊನೇಶನ್ನನ್ನು ಕೇಳಿತ್ತು. ಅದಕ್ಕೆ ಅವರಿಬ್ಬರೂ ಒಪ್ಪಿದ್ದರು. ಮನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಅವರಿಗೆ ಈವರೆವಿಗೂ ಹಣ ಪಾವತಿಸಲು ಆಗಿರಲಿಲ್ಲ.

ಜೂನ್‌ 14ರ ಸೋಮವಾರ ರೂಪಾ ಮಗಳನ್ನು ಬಿಟ್ಟುಬರಲು ಶಾಲೆಗೆ ಹೋದಾಗ ಶಾಲೆಯ ಅಧಿಕಾರಿಗಳು ಡೊನೇಶನ್ನಿನ ಬಗ್ಗೆ ವಿಚಾರಿಸಿದರು. ಇತರ ಅನೇಕ ಪಾಲಕರ ಎದುರೇ ರೂಪಾಳಿಗೆ ಅವಮಾನವಾಗುವಂತೆ ತುಂಬ ಕೆಟ್ಟದಾಗಿ ಮಾತನಾಡಿದ್ದಾರೆ. ನೇರವಾಗಿ ಮಗಳನ್ನು ಕರೆದುಕೊಂಡು ರೂಪಾ ಮನೆಗೆ ಬಂದು ಗಂಡ ಸತ್ಯನಾರಾಯಣನಿಗೆ ವಿಷಯ ಹೇಳಿದ್ದಾಳೆ. ಆದರೆ ಗಂಡನೂ ಆ ಸಮಯದಲ್ಲಿ ಅಸಹಾಯಕನಾಗಿದ್ದರಿಂದ, ನಾನಾದರೂ ಏನು ಮಾಡಲಿ ಎಂದು ಹೇಳಿ ಹೊರಟು ಬಿಟ್ಟಿದ್ದಾನೆ. ಮನಸ್ಸಿಗಾದ ನೋವನ್ನು ತಡೆಲಾಗದ ರೂಪಾ, ಮಗಳನ್ನೂ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇಲ್ಲಿ, ತಪ್ಪು ಯಾರದ್ದು? ಶಾಲಾ ಸಿಬ್ಬಂದಿ ವರ್ಗದ್ದೋ? ಗಂಡ ಸತ್ಯನಾರಾಯಣನದ್ದೋ? ರೂಪಾಳ ಅವಮಾನಿತ ಮನಸ್ಸಿನದ್ದೋ? ಅವರ ಪರಿಸ್ಥಿತಿಯದ್ದೋ? ನೀವೇ ಹೇಳಿ? ತಪ್ಪು ಯಾರದ್ದಾದರೂ ಏನೂ ಅರಿಯದ ನಾಲ್ಕು ವರ್ಷದ ಮುಗ್ಧ ಮಗು, 28ರ ಹರೆಯದ ರೂಪಾ ಮರಳಿ ಬರುವರೇ?!

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X