ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತರು ದೇಶ ನಿರ್ಮಾಣದಲ್ಲಿ ತೊಡಗುವಂತೆ ಪ್ರೇರೇಪಿಸಲು ಕಲಾಂ ಕರೆ

By Staff
|
Google Oneindia Kannada News

ಭಕ್ತರು ದೇಶ ನಿರ್ಮಾಣದಲ್ಲಿ ತೊಡಗುವಂತೆ ಪ್ರೇರೇಪಿಸಲು ಕಲಾಂ ಕರೆ
ಸರ್ವಧರ್ಮ ಆಧ್ಯಾತ್ಮಿಕ ನಾಯಕರ ಸಮಾವೇಶದಲ್ಲಿ ರಾಷ್ಟ್ರಪತಿ ಕಲಾಂ ಮನವಿ

ನವದೆಹಲಿ: ಪೂಜಾ ಸ್ಥಳಕ್ಕೆ ಆಗಮಿಸುವ ಭಕ್ತಾದಿಗಳನ್ನು ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು, ಸಸಿಗಳನ್ನು ನೆಡಲು ಹಾಗೂ ಹೆಣ್ಣು-ಗಂಡನ್ನು ಸಮಾನ ರೀತಿಯಲ್ಲಿ ಪರಿಗಣಿಸಲು ಬದ್ಧರಾಗುವಂತೆ ಪ್ರತಿಜ್ಞೆ ಮಾಡಿಸಬೇಕು ಎಂದು ರಾಷ್ಟ್ರಪತಿ ಅಬ್ದುಲ್‌ ಕಲಾಂ ಮನವಿ ಮಾಡಿದ್ದಾರೆ.

ಇದು ಪ್ರಜೆಗಳನ್ನು ಉತ್ತಮ ಹಾದಿಯಲ್ಲಿ ಸಾಗುವಂತೆ ಮಾಡುವ ಮಾರ್ಗ. ಇದರಿಂದ ನಾವು ದೇಶವನ್ನು ಕಟ್ಟಬಹುದು. ನಮ್ಮ ದೇಶದಲ್ಲಿ ದಿನವೊಂದಕ್ಕೆ ವಿವಿಧ ಜಾತಿ-ಮತದ ಕನಿಷ್ಠ ಐದು ಲಕ್ಷ ಭಕ್ತಾಧಿಗಳು ಪ್ರಾರ್ಥನೆ-ಪೂಜೆಗೆ ಆಗಮಿಸುತ್ತಾರೆ ಎಂದು ಹೇಳಿದರು.

ಅವರು ಯುನಿಟಿ ಆಫ್‌ ರಿಲೀಜಿಯಸ್‌ ಆ್ಯಂಡ್‌ ಆ್ಯನ್‌ಲೈಟಂಡ್‌ ಸಿಟಿಸನ್‌ಶಿಪ್‌ ಸಂಸ್ಥೆ ಆಯೋಜಿಸಿದ ಸರ್ವಧರ್ಮ ಆಧ್ಯಾತ್ಮಿಕ ನಾಯಕರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ರಾಷ್ಟ್ರಪತಿ ಮಾತನ್ನು ಕಾರ್ಯರೂಪಕ್ಕೆ ತರುವುದಾಗಿ ಅಲ್ಲಿ ನೆರೆದಿದ್ದ ಆಧ್ಯಾತ್ಮಿಕ ನಾಯಕರು ತಿಳಿಸಿದರು.

ಇಲ್ಲಿ ನೆರೆದಿದ್ದವರಲ್ಲಿ ಶೇಕಡಾ 10 ಮಂದಿ ಈ ಕಾರ್ಯವನ್ನು ಅನುಷ್ಠಾನಗೊಳಿಸಿದರೆ ನಾವು ಮಹತ್ತರವಾದ ಬದಲಾವಣೆಯನ್ನು ಕಾಣಬಹುದು ಎಂದು ಕಲಾಂ ಪುನರುಚ್ಚರಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X