ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ-ಹರಕೆ,ಆನ್‌ಲೈನ್‌-ಆಶೀರ್ವಾದ!ಇದು ಔಟ್‌ಸೋರ್ಸಿಂಗ್‌ ಮಹಾತ್ಮೆ

By Staff
|
Google Oneindia Kannada News

ಇ-ಹರಕೆ,ಆನ್‌ಲೈನ್‌-ಆಶೀರ್ವಾದ!ಇದು ಔಟ್‌ಸೋರ್ಸಿಂಗ್‌ ಮಹಾತ್ಮೆ
ಔಟ್‌ಸೋರ್ಸಿಂಗ್‌ ಅಳವಡಿಸಲಿರುವ ಪಾಶ್ಚಾತ್ಯ ರೋಮನ್‌ಚರ್ಚುಗಳು

ನ್ಯೂಯಾರ್ಕ್‌: ಇನ್ನು ಮುಂದೆ ಅಮೇರಿಕಾದಲ್ಲಿ ದೇವರನ್ನು ಪ್ರಾರ್ಥಿಸಿದರೆ, ಭಾರತದಿಂದ ಪೂಜೆ-ಆಶೀರ್ವಾದ ದೊರೆಯಲಿದೆ. ಇದು ಔಟ್‌ ಸೋರ್ಸಿಂಗ್‌ ಮಹಾತ್ಮೆ!

ಪಾಶ್ಚಾತ್ಯ ದೇಶಗಳ ಪ್ರಮುಖ ಕ್ಯಾಥೋಲಿಕ್‌ ರೋಮನ್‌ ಚರ್ಚ್‌ಗಳಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳಿದ್ದಾರೆ. ಆದರೆ ಧರ್ಮಗುರುಗಳ ಸಂಖ್ಯೆ ಕಡಿಮೆಯಿದೆ. ಇದರಿಂದ ಧರ್ಮಗುರುಗಳಿಗೆ ಕೆಲಸದೊತ್ತಡ ವಿಪರೀತವಾಗಿದೆ. ಆಗಮಿಸಿದ ಎಲ್ಲಾ ಭಕ್ತಾಧಿಗಳನ್ನು ಆಶೀರ್ವದಿಸಲು ಸಮಯ ಸಾಲದಾಗಿದೆ.

ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಶ್ಚನರು ಕೇರಳದಲ್ಲಿದ್ದಾರೆ.ಇಲ್ಲಿಯ ಚರ್ಚ್‌ಗಳಲ್ಲಿ ಭಾರತೀಯರು ಮಾತ್ರವಲ್ಲದೆ ವಿದೇಶಿಯರೂ ಹರಕೆ-ಅರ್ಚನೆ ಸಲ್ಲಿಸುತ್ತಾರೆ. ಮಗು ಹುಟ್ಟಿದಾಗ ಬ್ಯಾಬ್ಟೈಸ್‌, ಹುಶಾರಿಲ್ಲದಾಗ ಹರಕೆ, ದೇವನಿಗೆ ಧನ್ಯವಾದ, ಆತ್ಮಕ್ಕೆ ಶಾಂತಿದೊರೆಯಲು ವಿವಿಧ ವಿಧಿವಿಧಾನಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ. ಇವೆಲ್ಲ ಮಲಯಾಳಿ ಭಾಷೆಯಲ್ಲೇ ನಡೆದರೂ ವಿಶ್ವವಿಖ್ಯಾತ.

ಸ್ಥಳೀಯರು ಅರ್ಚನೆ ಮಾಡಿಸಿದಾಗ 40ಸೆಂಟ್‌ ಕೊಟ್ಟರೆ ವಿದೇಶಿಯರು ಅದೇ ಅರ್ಚನೆಗೆ 5 ಡಾಲರ್‌ ನೀಡುತ್ತಾರೆ. ವಿದೇಶದಿಂದ ತಿಂಗಳಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ಪೂಜೆಗಳು ಬರುತ್ತವೆ ಎಂದು ಕೊಚ್ಚಿನ್‌ನಲ್ಲಿರುವ ಎರ್ನಾಕುಲಮ್‌-ಅಂಗಮಾಲಿ ಚರ್ಚ್‌ನ ಧರ್ಮಗುರು ಸೆಬಾಸ್ಟಿಯನ್‌ ಅದಾಯಂತ್ರತ್‌ ಹೇಳಿದ್ದಾರೆ.

ಪ್ರಸ್ತುತ ಹರಕೆ-ಅರ್ಚನೆ ಮಾಡಲು ನಿವೇದನೆಗಳು ಇ-ಪತ್ರ, ದೂರವಾಣಿ ಮೂಲಕ ಬರುತ್ತಿದೆ. ಕೆಲವು ಭಕ್ತರು ಇಲ್ಲಿಗೆ ಪ್ರಯಾಣ ಬೆಳಸುತ್ತಾರೆ. ಈ ವ್ಯರ್ಥ ಶ್ರಮ ಮತ್ತು ಕೆಲಸದೊತ್ತಡ ಕಡಿಮೆ ಮಾಡುವ ಸಲುವಾಗಿ ಔಟ್‌ಸೋರ್ಸಿಂಗ್‌ ಪ್ರಯೋಜನ ಪಡೆದುಕೊಳ್ಳಲು ಧರ್ಮಸಂಸ್ಥೆಗಳು ನಿರ್ಧರಿಸುತ್ತಿವೆ. ಆದ್ದರಿಂದ ಭಾರತಕ್ಕೆ ಔಟ್‌ಸೋರ್ಸಿಂಗ್‌ ಮಾಡಲು ಪಾಶ್ಚಾತ್ಯ ರಾಷ್ಟ್ರಗಳು ಸನ್ನದ್ಧವಾಗಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X