ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ ರ್ಯಾಂಕ್‌ ಗಳಿಸುವುದಕ್ಕೆ ಇಂಗ್ಲಿಷ್‌ ಮಾಧ್ಯಮ ಅನಿವಾರ್ಯವಲ್ಲ

By Staff
|
Google Oneindia Kannada News

ಸಿಇಟಿ ರ್ಯಾಂಕ್‌ ಗಳಿಸುವುದಕ್ಕೆ ಇಂಗ್ಲಿಷ್‌ ಮಾಧ್ಯಮ ಅನಿವಾರ್ಯವಲ್ಲ
ಬಿಜಾಪುರದ ಕನ್ನಡಪೋರ ಶರಣಪ್ಪನಿಗೆ ಶುಭಾಶಯಗಳು

ಬಿಜಾಪುರ: ಜಿಲ್ಲೆಯ ಶರಣಪ್ಪ ಚನ್ನಪ್ಪ ಇಚೇರಿ ಎಂಬ ಕನ್ನಡ ಮಾಧ್ಯಮದ ವಿದ್ಯಾರ್ಥಿ ಪ್ರತಿಭೆ, ಸತತ ಪರಿಶ್ರಮದಿಂದ ಸಿಇಟಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‌ಗಳಿಸಿದ್ದಾನೆ. ರ್ಯಾಂಕ್‌ ಪಡೆಯುವುದಕ್ಕೆ ಟ್ಯೂಷನ್ನು, ಇಂಗ್ಲೀಷ್‌ ಮೀಡಿಯಮ್ಮು ಅನಿವಾರ್ಯವಲ್ಲ ಎಂದು ಸಾಧಿಸಿ ತೋರಿಸಿದ್ದಾನೆ.

ವಿದ್ಯಾ ವಿನಯೇನ ಶೋಭತೆ ಎಂಬ ಮಾತೊಂದಿದೆ. ಆ ಮಾತಿಗೆ ಪೂರಕವಾದುದು ಶರಣಪ್ಪನ ವ್ಯಕ್ತಿತ್ವ. ನಿಗರ್ವಿ, ಸರಳ ಸ್ವಭಾವದ ಶರಣಪ್ಪನಿಗೆ ಹತ್ತು ರ್ಯಾಂಕ್‌ಗಳಲ್ಲಿ ಒಂದು ಬರಬಹುದೆಂಬ ನಿರೀಕ್ಷೆ ಮೊದಲೇ ಇತ್ತಂತೆ. ಆದರೆ ಮೊದಲನೇ ರ್ಯಾಂಕ್‌ ಬಂದಿರುವುದು ಮನೆಯವರಿಗೂ ನನಗೂ ತುಂಬ ಸಂತೋಷ ತಂದಿದೆ ಎಂದು ಶರಣಪ್ಪ ತನ್ನ ಸಂತೋಷನ್ನು ಗುರುವಾರ ಸುದ್ದಿಗಾರರೊಂದಿಗೆ ಹಂಚಿಕೊಂಡನು.

ಐಎಸ್‌ (Indian Administrative Service) ಪರೀಕ್ಷೆ ಬರೆಯುವ ಆಕಾಂಕ್ಷೆಯನ್ನು ಹೊಂದಿರುವ ಶರಣಪ್ಪನಿಗೆ ಸಧ್ಯದಲ್ಲಿ ಇಂಜಿನಿಯರಿಂಗ್‌ ಮಾಡುವಾಸೆ. ಸಿಇಟಿ ಪರೀಕ್ಷೆಯ ಮುನ್ನ ಈತ ಯಾವುದೇ ಟ್ಯೂಷನ್‌ಗಳಿಗೆ ಹೋದವನಲ್ಲ. ಪ್ರತಿದಿನ 8 ಗಂಟೆಗಳ ಅಧ್ಯಯನ. ಸ್ನೇಹಿತರು ಒತ್ತಾಯಿಸಿದ್ದರಿಂದ ಬೆಂಗಳೂರಿನ ಟ್ಯುಟೋರಿಯಲ್‌ ಒಂದರಲ್ಲಿ 15 ದಿನದ ಸಿಇಟಿ ಸಂಬಂಧಿಸಿದ ಕೋರ್ಸ್‌ ತೆಗೆದುಕೊಂಡಿದ್ದನಂತೆ.

ಶರಣಪ್ಪ ಪ್ರಾಥಮಿಕ ಶಿಕ್ಷಣವನ್ನಾಗಲೀ, ಮಾಧ್ಯಮಿಕ ಶಿಕ್ಷಣವನ್ನಾಗಲೀ ಯಾವುದೇ ಹೈ ಗ್ರೇಡ್‌ ಆಂಗ್ಲ ಮಾಧ್ಯಮ ಸಂಸ್ಥೆಗಳಲ್ಲಿ ಮಾಡಿಲ್ಲ. ಬಿಜಾಪುರ ಜಿಲ್ಲೆ ತಾಸಬಾವಾಡಿಯ ಸಾಯಿಬಾಬಾ ಪ್ರಾಥಮಿಕ ಶಾಲೆಯಲ್ಲಿ ಓದಿ, ತದನಂತರ ರುಕ್ಮಾಂಗ ಮಾಧ್ಯಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ. ಆಧುನಿಕ ಪರಿಸರದಲ್ಲಿ ವಿದ್ಯಾರ್ಜನೆ ಮಾಡುವ ಬೆಂಗಳೂರು, ಮಂಗಳೂರು, ಮೈಸೂರು, ಬೆಳಗಾವಿಯ ವಿದ್ಯಾರ್ಥಿಗಳನ್ನು ಹಿಂದೆಹಾಕಿ ಪ್ರಥಮ ರ್ಯಾಂಕ್‌ ಗಳಿಸಿರುವ ಶರಣಪ್ಪನಿಗೆ ದಟ್ಸ್‌ ಕನ್ನಡ ಬಳಗದ ಶುಭಾಶಯಗಳು.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X