ಸಮ್ಮಿಶ್ರ ಸರಕಾರದ ಸಂತುಲಿತ ಯೋಜನೆಗೆ ರಾಜ್ಯಪಾಲರಿಂದ ಚಾಲನೆ
ಸಮ್ಮಿಶ್ರ ಸರಕಾರದ ಸಂತುಲಿತ ಯೋಜನೆಗೆ ರಾಜ್ಯಪಾಲರಿಂದ ಚಾಲನೆ
ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಟಿ.ಎನ್.ಚತುರ್ವೇದಿ
ಅವರು ವಿಧಾನಸಭೆ ಮತ್ತು ವಿಧಾನ ಪರಿಷತ್‌ನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಆ ಮೂಲಕ ಅವರು ರಾಜ್ಯದ ಪ್ರಪ್ರಥಮ (ಕಾಂಗ್ರೆಸ್-ಜೆಡಿಎಸ್) ಸಮ್ಮಿಶ್ರ ಸರಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳಿಗೆ ಚಾಲನೆ ನೀಡಿದಂತಾಗಿದೆ.
ರಾಜ್ಯಪಾಲರ ಭಾಷಣದ ಪ್ರಮುಖ ಅಂಶಗಳು :
- ಸ್ವಆಡಳಿತ ನಡೆಸುವ ನಿಟ್ಟಿನಲ್ಲಿ (ವಿಕೇಂದ್ರೀಕರಣ) ರೈತರ ಮತ್ತು ಹಳ್ಳಿಜನರ ಸಶಕ್ತೀಕರಣ
- ಬರಗಾಲ ಪರಿಹಾರಕ್ಕಾಗಿ ದೀರ್ಘಕಾಲೀನ ಯೋಜನೆಗಳು
- ಹಳ್ಳಿ ಮತ್ತು ಸಣ್ಣ-ಶಹರುಗಳ ವಿದ್ಯಾವಂತ ಯುವಜನತೆಗೆ ಉದ್ಯೋಗ
- ಐಟಿ ಮೂಲಕ ರಾಜ್ಯದಲ್ಲಿ ಒಂದು ಮಿಲಿಯ ಉದ್ಯೋಗ ಸೃಷ್ಟಿ
- ಉದ್ಯೋಗ ಹೆಚ್ಚಳಕ್ಕಾಗಿ ‘ ಬಿಪಿಒ’ ಗೆ ಆದ್ಯತೆ
- ಬಂಡವಾಳ ಹೂಡಿಕೆಗೆ ಆಹ್ವಾನ
- ಪ್ರಮುಖ ಮಾರುಕಟ್ಟೆ ಮತ್ತು ಉತ್ಪಾದನಾ ಸ್ಥಳಗಳಿಗೆ ಹಾಗೂ ಬಂದರಿಗೆ ರೈಲು ಸಂಪರ್ಕ
- ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭ
- ಕೃಷಿ ಆಧಾರಿತ ಕೈಗಾರಿಕೆಗಳ ಹೆಚ್ಚಳಕ್ಕೆ ಕ್ರಮ
- ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮ ಆದ್ಯತೆ, ಶಾಲೆ -ಶಿಕ್ಷಕರ ಸಂಖ್ಯೆ ಹೆಚ್ಚಳ
- ಬೆಂಗಳೂರಿಗೆ ಕಾವೇರಿ ನೀರು ಸರಬರಾಜಿಗಾಗಿ 3,500 ಕೋಟಿ ಯೋಜನೆ
- ವಿದ್ಯುತ್‌ಶಕ್ತಿ ಹೆಚ್ಚಳಕ್ಕೆ ಯೋಜನೆ
- ಮೊದಲ ಹಂತದಲ್ಲಿ 20 ಮತ್ತು ಎರಡನೇ ಹಂತದಲ್ಲಿ 19 ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ
ಮುಖಪುಟ / ಧರ್ಮ-ಕಾರಣ












Click it and Unblock the Notifications