ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಸಂಪುಟದಲ್ಲಿ ಎಚ್ಕೆಯವರಿರದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ..!

By Staff
|
Google Oneindia Kannada News

ಸಚಿವ ಸಂಪುಟದಲ್ಲಿ ಎಚ್ಕೆಯವರಿರದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟ..!
ಇದು ದಕ್ಷಿಣ ಕರ್ನಾಟಕದವರ ಪೂರ್ವಯೋಜಿತ ಸಂಚು...

ಕೊಪ್ಪಳ: ಸಚಿವ ಸಂಪುಟದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ಧುರೀಣ ಎಚ್‌.ಕೆ. ಪಾಟೀಲ್‌ ಅವರಿಗೆ ಸೂಕ್ತ ಪ್ರಾತಿನಿಧ್ಯ ಸಿಗದಿದ್ದರೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಜಿ. ಪಂ. ಅಧ್ಯಕ್ಷ ಎಚ್‌. ಎಲ್‌. ಹಿರೇಗೌಡ ಅವರು ಕೋಪೋದ್ರಿಕ್ತರಾಗಿ ನುಡಿದರು. ಅವರು ಜೂನ್‌ 8ರಂದು ಕೊಪ್ಪಳ ಜಿಲ್ಲಾ ಪಂಚಾಯಿತಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ವಿಧಾನ ಪರಿಷತ್‌ ಸದಸ್ಯ ಕರಿಯಣ್ಣ ಸಂಗಟಿ ಮುಂತಾದವರೂ ಕೂಡ ಎಚ್‌. ಎಲ್‌. ಹಿರೇಗೌಡರ ಅಭಿಪ್ರಾಯವನ್ನೇ ಅನುಮೋದಿಸಿದರು. ಎಲ್ಲರ ಮಾತಿನಲ್ಲೂ ಆಕ್ರೋಷ ಎದ್ದು ಕಾಣುತ್ತಿತ್ತು. ಎಲ್ಲರ ಮುಖಗಳೂ ಕಳೆಗುಂದಿತ್ತು. ಇದರಲ್ಲಿ ಏನೋ ಕುತಂತ್ರವಿದೆಯೆಂಬುದು ಸ್ಪಷ್ಟವಾಗಿ ಕಂಡುಬರುತ್ತಿತ್ತು.

ಸಹನೆಗೂ ಒಂದು ಮಿತಿಯಿದೆ : ರಾಮಣ್ಣ ಭಜಂತ್ರಿ

ಈಗ ಕಾಲ ಕೂಡಿ ಬಂದಿದೆ. ಉತ್ತರ ಕರ್ನಾಟಕವನ್ನು ಬಹಳ ಸಮಯದಿಂದಲೂ ನಿರ್ಲಕ್ಷಿಸುತ್ತಾ ಬರಲಾಗಿದೆ. ಎಚ್‌. ಕೆ. ಪಾಟೀಲರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿರುವುದು ಇದು ಇನ್ನೂ ಸ್ಪಷ್ಟವಾಗಿದೆ. ಸಹನೆಗೂ ಒಂದು ಒಂದು ಮಿತಿಯೆಂಬುದಿರುತ್ತದೆ. ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಜಿ. ಪಂ. ಮಾಜಿ ಅಧ್ಯಕ್ಷ ರಾಮಣ್ನ ಭಜಂತ್ರಿ ಕುಪಿತರಾದರು.

ರಕ್ತದ ರುಜು

ನೂತನ ಸಚಿವ ಸಂಪುಟದಲ್ಲಿ ಪಾಟೀಲರಿಗೆ ಸೂಕ್ತ ಸ್ಥಾನ ನೀಡದಿರುವುದನ್ನು ವಿರೋಧಿಸಿ ರಕ್ತದಿಂದ ಸಹಿ ಮಾಡಿದ ಮನವಿ ಪತ್ರವನ್ನು ಕೆಪಿಸಿಸಿ, ಎಐಸಿಸಿಗೆ ನೀಡುತ್ತೇವೆ ಎಂದು ಜಿ. ಪಂ. ಅಧ್ಯಕ್ಷ ಎಚ್‌. ಎಲ್‌. ಹಿರೇಗೌಡ ಅವರು ತಿಳಿಸಿದರು. ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಸದಸ್ಯರು, ಕಾಂಗ್ರೆಸ್‌ ನಾಯಕರೂ ಸಹ ರಕ್ತದಿಂದ ಸಹಿ ಮಾಡಿದ ಮನವಿ ಸಲ್ಲಿಸಲು ತಯಾರಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಮೂಹಿಕ ರಾಜೀನಾಮೆ

ಹಾವೇರಿ ಜಿ. ಪಂ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಸೇರಿದಂತೆ 23 ಜನ ಕಾಂಗ್ರೆಸ್‌ ಸದಸ್ಯರು ತಮ್ಮ ಸ್ತಾನಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದಾರೆ. ಹಾವೇರಿಯಲ್ಲಿ ಜೂನ್‌ 8ರಂದು ನಡೆದ ತುರ್ತು ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯ್ತು ಎಂದು ಜಿ.ಪಂ. ಅಧ್ಯಕ್ಷ ಎಸ್‌. ಸಿ. ಶಿಡೇನೂರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X