ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಾಮಾನ್ಯ ಕನಿಷ್ಠ ಕಾರ್ಯಕ್ರಮ : ಅಬ್ದುಲ್ ಕಲಾಂ ಹೇಳುವುದೇನು ?
ಸಾಮಾನ್ಯ ಕನಿಷ್ಠ ಕಾರ್ಯಕ್ರಮ : ಅಬ್ದುಲ್ ಕಲಾಂ ಹೇಳುವುದೇನು ?
ಜಂಟಿ ಅಧಿವೇಶನ ಉದ್ದೇಶಿಸಿ ಕಲಾಂ ಭಾಷಣ
ಇದು ಅವರ ನಾಲ್ಕನೇ ಜಂಟಿ ಅಧಿವೇಶನದ ಭಾಷಣವಾಗಿದೆ. ಅವರು ಜುಲೈ 2002ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು. ಅವರ ಭಾಷಣದ ಬಳಿಕ ಮೂರು ದಿನಗಳ ಕಾಲ ಲೋಕಸಭೆ ಮತ್ತು ರಾಜ್ಯಸಭೆ ರಾಷ್ಟ್ರಪತಿಗಳಿಗೆ ಸಲ್ಲಿಸುವ ವಂದನಾ ನಿರ್ಣಯದ ಕುರಿತು ಚರ್ಚಿಸಲಿದೆ.
ರಾಷ್ಟ್ರಪತಿ ಭಾಷಣದ ಪ್ರಮುಖ ಅಂಶಗಳು:
- ಜಾತ್ಯತೀತ ಮೌಲ್ಯಗಳ ರಕ್ಷಣೆ, ಕಾಪಾಡುವುದು ಮತ್ತು ಉದ್ಧರಿಸುವುದು. ಮೂಲಭೂತವಾದಿಗಳ ವಿರೋಧ ಲೆಕ್ಕಿಸದೆ ಈ ಕುರಿತ ಕಾನೂನು ಜಾರಿ. ಈ ಕಾನೂನು ಜಾರಿಗೊಳಿಸಲು ರಾಜ್ಯಗಳಿಗೂ ಸೂಚನೆ
- 7-8 ಶೇಕಡಾ ಅಭಿವೃದ್ಧಿ, ಕೃಷಿರಂಗದಲ್ಲಿ ಹೂಡಿಕೆಗೆ ಆದ್ಯತೆ ಮತ್ತು ಕೆಲವೇ ಆಯ್ದ ಉದ್ದಿಮೆಗಳ ಖಾಸಾಗಿಕರಣ
- ಸಣ್ಣ ಹೂಡಿಕೆದಾರರ ಹಿತರಕ್ಷಣೆ. ನಿರ್ಧಿಷ್ಟ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸ್ವಾಗತ
- ಜನಪರ ತೆರಿಗೆ ಪದ್ಧತಿ. ಬಡವರ ಕಾರ್ಯಕ್ರಮಗಳಿಗೆ ಸಬ್ಸಿಡಿ.
- ಬೆಲೆ ವ್ಯತ್ಯಯ ಮತ್ತು ಕಳ್ಳ ಮಾರುಕಟ್ಟೆ ತಡೆಹಿಡಿಯುವ ಪ್ರಯತ್ನ. ಮೂಲಭೂತ ವಸ್ತುಗಳ ಬೆಲೆ ಏರಿಕೆಗೆ ತಡೆ
- ಫೋಟೋ ಕಾಯಿದೆ ಹಿಂತೆಗೆತ. ಭಯೋತ್ಪಾದನೆ ವಿರುದ್ಧ ಹೊರಾಟ ಮುಂದುವರಿಕೆ.
- ಕಪ್ಪು ಹಣ ತಡೆಗೆ ಸೂಕ್ತ ಕ್ರಮ, ರಫ್ತುಗೆ ಉತ್ತೇಜನ , ಬಟ್ಟೆ ಮತ್ತು ಸೆಣಬು ಕಾಖಾನೆಗಳ ಪುನಶ್ಚೇತನಕ್ಕೆ ಕ್ರಮ.
- ಸರಕಾರದಿಂದ National Manufacturing and Competitiveness Council ಸ್ಥಾಪನೆ
- ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ
- ಅಯೋಧ್ಯೆ ಸಮಸ್ಯೆಗೆ ಸುಪ್ರಿಮ್ ಕೋರ್ಟ್ ಆದೇಶವೇ ಪರಿಹಾರ
- ಅಲ್ಪಸಂಖ್ಯಾತರ ಶಿಕ್ಷಣದಲ್ಲಿ ತಾಂತ್ರಿಕ ಮತ್ತು ಆಧುನಿಕ ವಿಷಯಗಳಿಗೆ ಪ್ರಾಮುಖ್ಯತೆ. ಉರ್ದು ಭಾಷಾ ಬೆಳವಣಿಗೆಗೆ ಪ್ರೋತ್ಸಾಹ.
- ಶಿಕ್ಷಣದ ಕೋಮುವಾದಿಕರಣವನ್ನು ಬೇರು ಸಹಿತ ಕಿತ್ತೆಸೆಯಲು ಪ್ರಯತ್ನ. ಶೈಕ್ಷಣಿಕ ಸಂಸ್ಥೆಗಳಿಗೆ ಹಿಂದಿನ ಸ್ವಾಯುತ್ತತೆ . ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಾಂಗದಿಂದ ವಂಚಿತರಾಗದಂತೆ ಕ್ರಮ. -ಸಾಲ, ವಿದ್ಯಾರ್ಥಿ ವೇತನ ಇತ್ಯಾದಿ.
- ಕಾವೇರಿ ಸೇರಿದಂತೆ ನೀರು ಹಂಚಿಕೆಯ ಇತ್ಯರ್ಥಕ್ಕೆ ಸೂಕ್ತ ಕ್ರಮ. ನದಿ ಜೋಡಣೆ ಕಾರ್ಯಯೋಜನೆಗೆ ಚಾಲನೆ
- ಕಾರ್ಮಿಕರಿಗೆ ಮತ್ತು ರೈತರಿಗೆ ಸಂಬಳದ ಮಿತಿ ನಿಗದಿ. World Trade Organisation ನಲ್ಲಿ ರೈತರ ಹಿತಾಸಕ್ತಿ ಆಧಾರಿತ ವಿಚಾರಗಳ ಪ್ರತಿಪಾದನೆ.
- ಖಾಸಗಿ ವಲಯದಲ್ಲಿ ಮೀಸಲಾತಿ. ಎಸ್‌ಸಿಎಸ್‌ಟಿ ಗಳ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಬೆಳವಣಿಗೆಯತ್ತ ಹೆಜ್ಜೆ
- ಕಾಯಿದೆ 370ನ್ನು ಯಥಾಸ್ಥಿತಿ ಕಾಯ್ದುಕೊಂಡು ಬರಲಾಗುವುದು
- ಬಡವರು, ಭೂರಹಿತರು, ಎಸ್‌ಸಿಎಸ್‌ಟಿಗಳ ಆಸ್ತಿ ಸಂರಕ್ಷಣೆಗೆ ವಿಶೇಷ ಆಸ್ಥೆ
- ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ. ಎಂಟನೇ ಪರಿಛೇಧದಲ್ಲಿ ಬರುವ ಭಾಷೆಗಳಿಗೆ ಆಡಳಿತ ಸ್ಥಾನಮಾನ ನೀಡುವ ಯತ್ನ
- ಮಿಲಿಟರಿಯ ಆಧುನಿಕರಣ. ಮಾಜಿ ಯೋಧರ ಹಿತಾಸಕ್ತಿ ಕಾಪಾಡುವುದು.
- ಅಶಕ್ತರಿಗೆ ವಿಶೇಷ ಸವಲತ್ತುಗಳು. ಸ್ಲಮ್ ನಿವಾಸಿಗಳಿಗೆ ಮನೆ
- ಚೀನಾ ಜೊತೆ ವ್ಯಾಪಾರ ವ್ಯವಹಾರ ಅಭಿವೃಧ್ಧಿ. ನೆರೆಹೊರೆ ದೇಶಗಳ ಜೊತೆಗಿನ ಬಾಂಧವ್ಯ ಅಭಿವೃದ್ಧಿಗೆ ಯತ್ನ. ಶ್ರಿಲಂಕಾ ಶಾಂತಿ ಮಾತುಕತೆಗೆ ಬೆಂಬಲ
ಮುಖಪುಟ / ವಾರ್ತೆಗಳು