ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಬೆಳೆಯಲು ವಿದ್ವತ್ತಿನ ಜೊತೆ ಹೋರಾಟ ಆಗಬೇಕು : ದೇಜಗೌ

By Staff
|
Google Oneindia Kannada News

ಕನ್ನಡ ಬೆಳೆಯಲು ವಿದ್ವತ್ತಿನ ಜೊತೆ ಹೋರಾಟ ಆಗಬೇಕು : ದೇಜಗೌ
ದೇಶ ಉಳಿಯಬೇಕಾದರೆ ಮೊದಲು ಭಾಷೆಯನ್ನು ಉಳಿಸಿ ಬೆಳೆಸಬೇಕು..

ಮೈಸೂರು: ಜಾಗತೀಕರಣ ಅನ್ತೀರಲ್ಲ, ಇಡೀ ಜಗತ್ತಿನ ವಿವಿಧ ಭಾಷೆಗಳ ಸಾಹಿತ್ಯ ಕನ್ನಡಕ್ಕೆ ತರುವುದು ಬೇಡವೇ? ಕನ್ನಡದ ಕೆಲಸಕ್ಕೆ ಬರೇ ವಿದ್ವತ್ತಿದ್ದರೆ ಸಾಲದು, ಹೋರಾಟವಾಗಬೇಕು, ಕ್ರಾಂತಿಯಾಗಬೇಕು ಎಂದು ವಿಶ್ರಾಂತ ಕುಲಪತಿ ಡಾ. ದೇಜಗೌ ಅವರು ಭಾವೋದ್ವೇಗವಾಗಿ ನುಡಿದರು.

ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಮೈಸೂರು ವಿಶ್ವವಿದ್ಯಾಲಯದ ಆಶ್ರದಲ್ಲಿ ನಡೆದ ಜಾಗತೀಕರಣದ ಸಂದರ್ಭದಲ್ಲಿ ಜನಸಂಸ್ಕೃತಿಗಳು ಕುರಿತ ವಿಷಯದ ಮೇಲೆ ನಡೆದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಡಾ. ದೇಜಗೌ ಅವರು ಮಾತನಾಡುತ್ತಿದ್ದರು.

ಜಗತ್ತಿನ ಉದ್ಧಾರ ಎನ್ನವುದು ಆಗುವುದೇ ಆದರೆ ಅದು ಶೂದ್ರಾತಿಶೂದ್ರರಿಂದ ಮಾತ್ರಸಾಧ್ಯ. ಅವರು ಅನ್ನ, ಮುದ್ದೆ ಹಾಕದಿದ್ದರೆ ನಾವು ಪಾಠ ಮಾಡಲು ಆಗದು. ಅವರೇ ನಮ್ಮ ಅನ್ನದಾತರು. ಆದರೆ ದೇಶದಲ್ಲಿ ಕೃಷಿಗೆ ಆದ್ಯತೆ ನೀಡುತ್ತಲೇ ಇಲ್ಲ.ಕೃಷಿಕರ ಬಗ್ಗೆ ಚ್ಚಿನ ಕಾಳಜಿ ವಹಿಸಿದ, ಅದನ್ನು ವ್ಯಕ್ತಪಡಿಸಿದ ಏಕೈಕ ಕವಿ ಕುವೆಂಪು. ಅವರಂತೆ ಪುುರೋತಶಾಹಿಯನ್ನು ಧಿಕ್ಕರಿಸಿದ ಗಂಡು ಕವಿ ಇನ್ನೆಬ್ಬರಿಲ್ಲ ಎಂದು ದೇಜಗೌ ಹೇಳಿದರು.

ಜಗತ್ತಿನ ಎಲ್ಲಾ ಕಲೆಗಳಿಗೂ ಜನಪದವೇ ಮೂಲ. ಜನಪದದ ಪ್ರಜ್ನೆ ಗೊತ್ತಿರದವನಿಗೆ ಭವಿಷ್ಯದ ಪ್ರಜ್ಞೆ ಇರುವುದಿಲ್ಲ. ಪ್ರಪಂಚದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಭಾಷೆಗಳಿದ್ದರೆ, ಭಾರತದಲ್ಲಿ 1,800 ಭಾಷೆಗಳಿವೆ. ಪ್ರತಿಯಾಂದು ಪ್ರದೇಶದ ಭಾಷೆಯೂ ಆಯಾ ಪ್ರದೇಶದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಮೆಕಾಲೆ ಬಂದು ಇಲ್ಲಿಯ ಸ್ಥಳೀಯ ಭಾಷೆಗಳನ್ನು ನಾಶಪಡಿಸಿ, ತನ್ನದೇ ಆದ ಏಕರೂಪದ ಸಂಸ್ಕೃತಿಯನ್ನು ನೆಲೆಯೂರಿಸಿ, ಇಲ್ಲಿ ಶಾಶ್ವತವಾಗಿ ಅಧಿಕಾರ ಹಿಡಿಯುವ ಸಂಚು ಮಾಡಿದ್ದ ಎಂದು ದೇಜಗೌ ತಿಳಿಸಿದರು.

ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ. ಹಿ.ಶಿ. ರಾಮಚಂದ್ರೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ. ಎ.ಸಿ.ಲಲಿತ ನಿರೂಪಣೆಮಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X