ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವರು-ಇವರು ಸೇರಿ ಹತ್ತು ಸಚಿವರು : ಜೂ.7ಕ್ಕೆ ಖಾತೆ ಹಂಚಿಕೆ ಕ್ಯಾತೆ

By Staff
|
Google Oneindia Kannada News

ಅವರು-ಇವರು ಸೇರಿ ಹತ್ತು ಸಚಿವರು : ಜೂ.7ಕ್ಕೆ ಖಾತೆ ಹಂಚಿಕೆ ಕ್ಯಾತೆ
ನೂತನ ಸಚಿವರ ಸಾಲಿನಲ್ಲಿರದ ಎಚ್‌.ಕೆ.ಪಾಟಿಲ್‌

ಬೆಂಗಳೂರು: ರಾಜ್ಯ ಸರಕಾರದ ಹತ್ತು ಸಚಿವರು ಜೂನ್‌5ರ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದ ಸಮ್ಮಿಶ್ರ ಸರಕಾರಕ್ಕೆ ಕಾಡಿದ ಬಹುದಿನದ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಂತಾಗಿದೆ.

ವಿಧಾನ ಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿಗಳ ಹೊರತಾಗಿ ಇದೇ ಮೊದಲ ಬಾರಿಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಮಧ್ಯಾಹ್ನ 1:00ರಿಂದ 1:30ಗಂಟೆಯವರೆಗೆ ನಡೆದ ಸಮಾರಂಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ತಲಾ ಐವರು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಪ್ರಮಾಣ ವಚನ ಭೋದಿಸಿದರು.

ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ ಸ್ವೀಕರಿಸಿದ ಮೊದಲಿಗರಾದರೆ ಎಚ್‌.ಡಿ.ರೇವಣ್ಣ ತಂದೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನಿರೀಕ್ಷಿತ ಸಚಿವ ಎಚ್‌.ಕೆ.ಪಾಟಿಲ್‌ ನೂತನ ಸಚಿವರ ಸಾಲಿನಲ್ಲಿರಲಿಲ್ಲ. ಇದರಿಂದ ಅವರು ವಿಧಾನ ಪರಿಷತ್‌ ಅಧ್ಯಕ್ಷರಾಗುವ ಸಾಧ್ಯತೆ ಸ್ಪಷ್ಟವಾಗಿದೆ.

ಈ ನಡುವೆ ಮಹತ್ವದ ಬೆಳವಣಿಗೆಯಲ್ಲಿ ವಿಲಾಸ್‌ರಾವ್‌ ದೇಶ್‌ಮುಖ್‌ ಅವರನ್ನು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸ್ಥಾನದಿಂದ ತೆಗೆದು ಹಾಕಲಾಗಿದೆ. ಅವರು ಎಸ್‌.ಎಂ.ಕೃಷ್ಣ ಮತ್ತು ಡಿಕೆಶಿ ಪರ ತೀವ್ರ ಲಾಬಿ ನಡೆಸುತ್ತಿದ್ದ ಆರೋಪವಿದೆ. ಅವರ ಸ್ಥಾನದಲ್ಲಿ ಕೆ.ಅಹ್ಮದ್‌ ಪಟೇಲ್‌ನ್ನು ನೇಮಕ ಮಾಡಲಾಗಿದೆ.

ನೂತನ ಸಚಿವರುಗಳಿಗೆ ಜೂ.7ರ ಸೋಮವಾರ ಖಾತೆ ಹಂಚಿಕೆ ಮಾಡಲಾಗುವುದೆಂದು ಮುಖ್ಯಮಂತ್ರಿ ಧರ್ಮಸಿಂಗ್‌ ತಿಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ಸಚಿವರುಗಳು:

ಹೆಸರು ಪಕ್ಷ ಸಚಿವ ಸ್ಥಾನ ಪ್ರತಿನಿಧಿಸಿದ ಕ್ಷೇತ್ರ
ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ಸಂಪುಟ ಗುರುಮಿಠಕಲ್‌
ಪಿ.ಜಿ.ಆರ್‌.ಸಿಂಧ್ಯಾ ಜೆಡಿಎಸ್‌ ಸಂಪುಟ ಕನಕಪುರ
ಎಂ.ಪಿ.ಪ್ರಕಾಶ್‌ ಜೆಡಿಎಸ್‌ ಸಂಪುಟ ಹೂವಿನ ಹಡಗಲಿ
ಡಿ.ಮಂಜುನಾಥ್‌ ಜೆಡಿಎಸ್‌ ಸಂಪುಟ ಹಿರಿಯೂರು ಮೀಸಲು
ಪ್ರಾಕಾಶ್‌ ಬಾಬಣ್ಣ ಹುಕ್ಕೇರಿ ಕಾಂಗ್ರೆಸ್‌ ಸಂಪುಟ ಸದಲಗ
ಎಸ್‌.ಆರ್‌. ಮೋರೆ ಕಾಂಗ್ರೆಸ್‌ ಸಂಪುಟ ಧಾರವಾಡ ನಗರ
ಕೆ.ಶ್ರೀನಿವಾಸ ಗೌಡ ಕಾಂಗ್ರೆಸ್‌ ಸಂಪುಟ ಕೋಲಾರ
ಎಚ್‌.ಡಿ.ರೇವಣ್ಣ ಜೆಡಿಎಸ್‌ ಸಂಪುಟ ಹೊಳೆ ನರಸೀಪುರ
ಮಿರಾಜುದ್ದೀನ್‌ ಪಟೇಲ್‌ ಜೆಡಿಎಸ್‌ ಸಂಪುಟ ಹುಮ್ನಾಬಾದ್‌
ತನ್ವೀರ್‌ ಸೇಠ್‌ ಕಾಂಗ್ರೆಸ್‌ ರಾಜ್ಯ ನರಸಿಂಹ ರಾಜ

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X