ಸಚಿವ ಲಾಲೂ ಮಾರುವೇಷ ; ರೈಲ್ವೆ ಸಿಬ್ಬಂದಿಗಳಿಗೀಗ ಮೀನಮೇಷ..!
ಸಚಿವ ಲಾಲೂ ಮಾರುವೇಷ ; ರೈಲ್ವೆ ಸಿಬ್ಬಂದಿಗಳಿಗೀಗ ಮೀನಮೇಷ..!
ಬಿಹಾರ: ಒಂದು ವಾರದಲ್ಲಿ ಮೂರು ರೈಲು ದರೋಡೆ ಪ್ರಕರಣಗಳು
ರೈಲ್ವೆ ಇಲಾಖೆಯ ಸಿಬ್ಬಂದಿ ವರ್ಗದವರಂತೂ ಕಾನೂನು ಬಾಹಿರವಾಗಿ ಕೆಲಸ ಮಾಡುತ್ತಿದ್ದರೆ ಮುಗಿಯಿತು. ಮಾರು ವೇಶದಲ್ಲಿ ಬರಲಿರುವ ಲಾಲೂ ಪ್ರಸಾದರ ಕೈಯಲ್ಲಿ ಸಿಕ್ಕುಬಿದ್ದಂತೆ. ಹೌದು, ಪ್ರಯಾಣಿಕರ ಸಮಸ್ಯೆಗಳನ್ನು, ತೊಡಕು ತೊಂದರೆಗಳನ್ನು ಅರಿಯಲು, ರೈಲ್ವೆ ನಿಲ್ದಾಣಗಳಲ್ಲಿನ ವ್ಯವಸ್ಥೆ-ಅವ್ಯವಸ್ಥೆಗಳ ಸ್ಥೂಲ ಚಿತ್ರಣವನ್ನು ವೀಕ್ಷಿಸಲೆಂದು ನೂತನ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಸ್ವತಃ ತಾವೇ ಬಣ್ಣ ಹಚ್ಚಿ ನಿಂತಿದ್ದಾರೆ.
ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ತೊಂದರೆಗಳನ್ನು ಪರಿಹರಿಸಿಯೇ ಸಿದ್ಧ ಎಂದು ಹೊರಟಿರುವ ಲಾಲೂರ ಹೊಸ ಉಪಾಯ ಫಲಿಸಲಿ. ಇಲಾಖೆಯಲ್ಲಿನ ಭ್ರಷ್ಟ ಅಧಿಕಾರಿಗಳ ಬಂಡವಾಳ ಹೊರ ಬರಲಿ. ಆದರೆ ಹೆದರಿಕೆಯ ವಿಷಯವೆಂದರೆ ಮೊದಲೇ ರೈಲ್ವೆ ದರೋಡೆಯ ಸಂಖ್ಯೆ ಹೆಚ್ಚುತ್ತಿದೆ. ಕಳ್ಳರಿಗೆ ಲಾಲೂ ಯಾರೆಂದು ತಿಳಿಯದೆ ಅವರ ಜೋಳಿಗೆಗೇ ಕೈ ಹಾಕದಿದ್ದರೆ ಸಾಕು!
ಲಾಲೂ ಪ್ರಸಾದರ ರಾಜ್ಯ ಬಿಹಾರದಲ್ಲೇ ಇನ್ನೊಂದು ರೈಲ್ವೆ ದರೋಡೆ
ಗಯಾ : ಸಶಸ್ತ ್ರರಾದ ದರೋಡೆಕೋರರು ಜೂನ್ 3ರ ರಾತ್ರಿ ಜಿಲ್ಲೆಯ ಡೆಹ್ರಾಡೂನ್ ಎಕ್ಸ್‌ಪ್ರೆಸ್ ಸ್ಲೀಪರ್ ಕೋಚ್‌ಗೆ ನುಗ್ಗಿ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ ಮೂರು ಲಕ್ಷ ರೂಪಾಯಿ ನಗದು ಮತ್ತು ಒಂದು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.
ಆಕ್ರಮಣದಲ್ಲಿ ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಹತರಾಗಿದ್ದು ಸುಮಾರು ಹತ್ತು ಜನ ಪ್ರಯಣಿಕರುಗಳಿಗೆ ಚಿಕ್ಕ ಪುಟ್ಟ ಚೂರಿ ಇರಿತದ ಗಾಯಗಳಾಗಿವೆ ಎಂದು ಗಯಾ ಸ್ಟೇಷನ್ ಮಾಸ್ಟರ್ ಡಿ.ಎನ್. ಭಗತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕಳೆದ ಒಂದು ವಾರದಲ್ಲಿ, ಇದು ಬಿಹಾರದಲ್ಲಿ ನಡೆದಿರುವ ಮೂರನೇ ರೈಲು ದರೋಡೆಯಾಗಿದೆ.
ದರೋಡೆಕೋರರೂ ಸಹ ತಮ್ಮ ರಾಜ್ಯದ ರೈಲ್ವೆ ಸಚಿವರ ಮರ್ಯಾದೆಯನ್ನು ಅ(ಉ)ಳಿಸುವ ಪ್ರಯತ್ನದಲ್ಲಿ ಭಾರಿ ಕಾರ್ಯ ಪ್ರವೃತ್ತರಾದಂತಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು