ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹದಗೆಟ್ಟ ಖಾತೆ ಹಂಚಿಕೆ ಬಿಕ್ಕಟ್ಟು: ಕಾಂಗ್ರಸ್‌ಗೆ ಗಡುವು ನೀಡಿದ ಜೆಡಿಎಸ್‌

By Staff
|
Google Oneindia Kannada News

ಹದಗೆಟ್ಟ ಖಾತೆ ಹಂಚಿಕೆ ಬಿಕ್ಕಟ್ಟು: ಕಾಂಗ್ರಸ್‌ಗೆ ಗಡುವು ನೀಡಿದ ಜೆಡಿಎಸ್‌
ಪ್ರಮುಖ ಖಾತೆ ಪಡೆಯಲು ಕಾಂಗ್ರೆಸ್‌ ಜಿದ್ದು

ನವದೆಹಲಿ : ‘ಮಹರಾಷ್ಟ್ರ ಮಾದರಿ ಸೂತ್ರ’ ಕ್ಕೆ ಜೂನ್‌.03ರ ಗುರುವಾರ ಸಂಜೆಯ ಮುನ್ನ ಕಾಂಗ್ರೆಸ್‌ ಒಪ್ಪದಿದ್ದಲ್ಲಿ ಸರಕಾರದಿಂದ ತಾನು ಹೊರ ನಡೆಯುವುದಾಗಿ ಜೆಡಿಎಸ್‌ಬೆದರಿಕೆ ಹಾಕಿದೆ. ಈ ಮೂಲಕ ಎರಡೂ ಪಕ್ಷಗಳ ನಡುವಿನ ಖಾತೆ ಹಂಚಿಕೆಯ ಶೀತಲ ಸಮರ ಸ್ಫೋಟಕ ಸ್ಥಿತಿಯನ್ನು ತಲುಪಿದೆ.

ಗೃಹ, ಹಣಕಾಸು, ಗ್ರಾಮೀಣಾಭಿವೃದ್ಧಿ ಮತ್ತು ವಿದ್ಯುತ್‌ ಖಾತೆಗಳಿಗಾಗಿ ಕಾಂಗ್ರೆಸ್‌ ಹಠ ಹಿಡಿದಿರುವುದು ಆಂತರಿಕ ಬಿಕ್ಕಟ್ಟಿಗೆ ಮೂಲ ಕಾರಣ. ಈ ಖಾತೆಗಳಲ್ಲಿ ಒಂದೆರಡು ಖಾತೆಗಳನ್ನು ಬಿಟ್ಟುಕೊಡಲು ತಯಾರಾಗಿದ್ದ ಜೆಡಿಎಸ್‌ ಕಾಂಗ್ರೆಸ್‌ನ ಜಿದ್ದಿನಿಂದ ಇನ್ನಷ್ಟು ಕೆಂಡಮಂಡಲವಾಗಿದೆ.

ಈ ಹಿಂದೆ ‘ಮಹರಾಷ್ಟ್ರ ಮಾದರಿ ಸೂತ್ರ’ ಕ್ಕೆ ಕಾಂಗ್ರೆಸ್‌ ಪಟ್ಟು ಹಿಡಿದು ಮುಖ್ಯಮಂತ್ರಿ ಸ್ಥಾನವನ್ನು ಪಡೆದುಕೊಂಡಿತ್ತು. ಆ ಮಾದರಿಯಂತೆ ಪ್ರಮುಖ ಖಾತೆಗಳು ಜೆಡಿಎಸ್‌ ಪಾಲಾಗುತ್ತವೆ. ಆದರೆ ಈಗ ಪ್ರಮುಖ ಖಾತೆಗಳು ಸಹ ಸಮಪಾಲಗಬೇಕು ಎಂಬುದು ಕಾಂಗ್ರೆಸ್‌ ಹಠ. ಇದರಿಂದ ಉದ್ರೇಕಗೊಂಡ ದೇವೇಗೌಡ ಮತ್ತು ಇತರ ಜೆಡಿಎಸ್‌ ನಾಯಕರು ಸರಕಾರದಿಂದ ಹೊರಬರಲು ನಿರ್ಧರಿಸಿದ್ದಾರೆ.

ಆದರೆ ಮುಖ್ಯಮಂತ್ರಿ ಧರ್ಮಸಿಂಗ್‌ ಮತ್ತು ಸೋನಿಯಾಗಾಂಧಿ ರಾಜಕೀಯ ಕಾರ್ಯದರ್ಶಿ ಅಹ್ಮಮದ್‌ ಪಟೇಲ್‌ ಅವರ ನವದೆಹಲಿಯ ಮನೆಗೆ ಧಾವಿಸಿ ಒಂದು ದಿನ ಕಾಯುವಂತೆ ವಿನಂತಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ ‘ವಚನಭ್ರಷ್ಟತೆ’ಯಿಂದ ಜೆಡಿಎಸ್‌ ಮುಖಂಡರು ಕಿಡಿಕಿಡಿಯಾಗಿರುವುದು ಸ್ಪಷ್ಟವಾಗಿ ತಿಳಿದು ಬಂದಿದೆ.

ಈ ನಡುವೆ ಮಾಜಿ ಸಚಿವ ಡಿಕೆಶಿ ತಮ್ಮ ಬೆಂಬಲಿಗರೊಂದಿಗೆ ಸೋನಿಯಾಗಾಂಧಿ ಭೇಟಿಗಾಗಿ ಕಾದುಕುಳಿತಿದ್ದಾರೆ. ತಮಗೆ ಸಚಿವ ಖಾತೆ ನೀಡಬೇಕೆಂಬುದು ಅವರ ಹಠವಾಗಿದೆ. ಆದರೆ ಮೈತ್ರಿಕೂಟ ಒಪ್ಪಂದದ ಸಂದರ್ಭದಲ್ಲಿ ಕಾಂಗ್ರೆಸ್‌ನ ಕೆಲವು ಮಾಜಿ ಸಚಿವರಿಗೆ ಪ್ರಸ್ತುತ ಸಚಿವ ಸ್ಥಾನ ನೀಡಬಾರದು ಎಂದು ಜೆಡಿಎಸ್‌ ಬೇಡಿಕೆ ಮಂಡಿಸಿತ್ತು.

ಇನ್ನೊಂದೆಡೆ ಮೈತ್ರಿಕೂಟದಲ್ಲಿ ತನ್ನ ಸ್ಥಾನ ತೀವ್ರ ಕುಸಿಯುವ ಸಾಧ್ಯತೆ ಮನಗಂಡ ಮಲ್ಲಿಕಾರ್ಜುನ ಖರ್ಗೆ ತೀರ್ವ ಅಸಮಾಧಾನಗೊಂಡಿದ್ದರು. ಅವರನ್ನು ಸಮಾಧಾನ ಪಡಿಸುವುದು ಧರ್ಮಸಿಂಗ್‌ ಅವರಿಗೆ ದೊಡ್ಡ ಸಂಗತಿಯಾಗಿ ಪರಿಣಮಿಸಿದೆ.

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X