ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್‌ವೇರ್‌ ರಫ್ತಿನಲ್ಲಿ ರಾಜ್ಯದ ದಾಖಲೆ ವ್ಯವಹಾರ, ಶೇ.46 ರ ಪ್ರಗತಿ

By Staff
|
Google Oneindia Kannada News

ಸಾಫ್ಟ್‌ವೇರ್‌ ರಫ್ತಿನಲ್ಲಿ ರಾಜ್ಯದ ದಾಖಲೆ ವ್ಯವಹಾರ, ಶೇ.46 ರ ಪ್ರಗತಿ
ದೇಶೀಯ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್‌

ಬೆಂಗಳೂರು: 2003-04ನೇ ಸಾಲಿನ ಹಣಕಾಸು ವರ್ಷದಲ್ಲಿ ಸಾಫ್ಟ್‌ವೇರ್‌ ರಫ್ತಿನಲ್ಲಿ ರಾಜ್ಯ ರೂ. 18, 100 ಕೋಟಿ ವ್ಯವಹಾರ ನಡೆಸಿದ್ದು, ರಾಜ್ಯದ ಸಾಫ್ಟ್‌ವೇರ್‌ ಪ್ರಗತಿಯ ಪ್ರಮಾಣ 46% ಏರಿದೆ. ಕಳೆದ ಬಾರಿ 12,500 ಕೋಟಿ ರು.ರಫ್ತು ನಡೆಸಲಾಗಿತ್ತು . ದೇಶೀಯ ಸಾಫ್ಟ್‌ವೇರ್‌ ಕ್ಷೇತ್ರದ ಬೆಳವಣಿಗೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.

ಭಾರತೀಯ ಸಾಫ್ಟ್‌ವೇರ್‌ ರಫ್ತಿನ ಬಹುದೊಡ್ಡ ಗ್ರಾಹಕ (64%) ಅಮೇರಿಕಾ. ಯೂರೋಪ್‌ ದೇಶಗಳಿಗೆ 24%, ಏಷ್ಯಾ ಖಂಡದ ರಾಷ್ಟ್ರಗಳಿಗೆ 2%, ಜಪಾನ್‌ ರಾಷ್ಟ್ರಗಳಿಗೆ 4% ರಫ್ತನ್ನು ಮಾಡಲಾಗಿದೆ ಎಂದು ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ, ಬೆಂಗಳೂರು(ಎಸ್‌ಟಿಪಿಐ-ಬಿ) ನಿರ್ದೇಶಕ ಬಿ.ವಿ. ನಾಯ್ಡು ತಿಳಿಸಿದ್ದಾರೆ.

ಮುಂದಿನ 12 ರಿಂದ 18 ತಿಂಗಳೊಳಗೆ ಬಿಪಿಒ ಮತ್ತು ಐಟಿಇಎಸ್‌ ಕ್ಷೇತ್ರದಲ್ಲಿ ಭಾರತ ಜಾಗತಿಕವಾಗಿ ನಾಯಕ ಸ್ಥಾನ ಪಡೆಯಲಿದೆ. ಬಿಪಿಒ/ ಐಟಿಇಎಸ್‌ ಕ್ಷೇತ್ರದ ಮೂರು ಹೆಚ್ಚುವರಿ ಕಂಪನಿಗಳನ್ನು ಕರ್ನಾಟಕ 2003-04ರ ಅವಧಿಯಲ್ಲಿ ಹೊಂದಿದೆ.

(ಇನ್ಫೋ ವಾರ್ತೆ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X