ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ರಹ್ಮಣ್ಯನ ಕುಕ್ಕೆಯಲ್ಲಿ 18 ಅಡಿ ಎತ್ತರದ ಬೃಹತ್‌ ಏಕಶಿಲಾ ಗಣಪತಿ

By Staff
|
Google Oneindia Kannada News

ಸುಬ್ರಹ್ಮಣ್ಯನ ಕುಕ್ಕೆಯಲ್ಲಿ 18 ಅಡಿ ಎತ್ತರದ ಬೃಹತ್‌ ಏಕಶಿಲಾ ಗಣಪತಿ
ಸಾಗರದ ಶಿಲ್ಪಿ ಅಶೋಕ್‌ ಗುಡಿಗಾರ್‌ ಕೈಯಲ್ಲಿ ಅರಳಿದ ಕಲಾಕೃತಿ

ಕುಕ್ಕೆ : ಸುಬ್ರಹ್ಮಣ್ಯ ದೇಗುಲದ ಖ್ಯಾತಿಯ ಕುಕ್ಕೆಯಲ್ಲೀಗ ಮತ್ತೊಂದು ಆಕರ್ಷಣೆ. ಸುಬ್ರಹ್ಮಣ್ಯನ ಬೇಸರ ಕಳೆಯಲೆಂದು ಸೋದರ ಗಣೇಶ ಬಂದಿದ್ದಾನೆ !

ಇವ ಅಂತಿಂಥ ಗಣೇಶನಲ್ಲ . 18 ಅಡಿ ಎತ್ತರದ ಗಣೇಶ. ಏಕಶಿಲೆಯಲ್ಲಿ ಕಡೆಯಲಾದ ಈ ಗಣೇಶ ಮೂರ್ತಿ ಮೇ 31ರ ಸೋಮವಾರದಿಂದ ದೇಗುಲದ ಮತ್ತೊಂದು ಆಕರ್ಷಣೆ, ಭಕ್ತಿಯ ಕೇಂದ್ರ.

ಗಣೇಶ ಮೂರ್ತಿಯ ವಿಗ್ರಹ ವಿಶೇಷ ಗುಣಮಟ್ಟದಿಂದ ಕೂಡಿದೆ. 18 ಅಡಿ ಎತ್ತರದ ಗಣೇಶ ಮೂರ್ತಿಯ ವಿಗ್ರಹವನ್ನು ಏಕಶಿಳೆಯಲ್ಲಿ ಕಡೆಯಲಾಗಿದ್ದು , ಶಿಲೆಯ ತೂಕ 80 ಟನ್‌ಗಳು ಎಂದು ದೇಗುಲದ ವಕ್ತಾರ ಬಿ.ವಿಠ್ಠಲ ರಾವ್‌ ತಿಳಿಸಿದ್ದಾರೆ. ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ಗುಜ್ಜೆಗೌಡನಪುರ ಗ್ರಾಮದಲ್ಲಿ ಈ ಬೃಹತ್‌ ಕಲ್ಲನ್ನು ಪತ್ತೆ ಹಚ್ಚಲಾಗಿತ್ತು .

ಸಾಗರದ ರಾಷ್ಟ್ರಪ್ರಶಸ್ತಿ ವಿಜೇತ ಶಿಲ್ಪಿ ಅಶೋಕ್‌ ಗುಡಿಗಾರ್‌ ಬೃಹತ್‌ ಗಣೇಶ ವಿಗ್ರಹವನ್ನು ರೂಪಿಸಿದ್ದಾರೆ. ಗಣೇಶ ಮೂರ್ತಿಯನ್ನು ಸ್ಥಾಪಿಸಿರುವ ಪಾಣಿಪೀಠ 14 ಅಡಿ ಎತ್ತರವಾಗಿದ್ದು , ಇದರಿಂದಾಗಿ ಮೂರ್ತಿಯ ಒಟ್ಟು ಎತ್ತರ 32 ಅಡಿಗಳಾಗಿದೆ. ಪ್ರವಾಸಿಗರು ಹಾಗೂ ಭಕ್ತಾದಿಗಳನ್ನು ಈ ವಿಗ್ರಹ ಸೆಳೆಯಲಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X