ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಶಿಕ್ಷಣ ಪದ್ಧತಿಗೆ ವಿದಾಯ ; ಟ್ರೈಮಿಸ್ಟರ್‌ ಎಂಬ ಹೊಸ ಅಧ್ಯಾಯ

By Staff
|
Google Oneindia Kannada News

ಹಳೆ ಶಿಕ್ಷಣ ಪದ್ಧತಿಗೆ ವಿದಾಯ ; ಟ್ರೈಮಿಸ್ಟರ್‌ ಎಂಬ ಹೊಸ ಅಧ್ಯಾಯ
ವರ್ಷಕ್ಕೆ ಮೂರು ಬಾರಿ ಪರೀಕ್ಷೆ !

ಬೆಂಗಳೂರು : ಲಾರ್ಡ್‌ ಮೆಕಾಲೆ ಹೆಸರು ಯಾರಿಗೆ ಗೊತ್ತಿಲ್ಲ ? ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ ಬ್ರಿಟಿಷ್‌ ಶಿಕ್ಷಣ ಪದ್ಧತಿಯನ್ನು ಭಾರತಕ್ಕೆ ಪರಿಚಯಿಸಿದವನು, ಮೆಕಾಲೆ. ಆ ಶಿಕ್ಷಣ ಪದ್ಧತಿಯೇ ಇಂದಿಗೂ ನಡೆದು ಬಂದಿದೆ. ಆದರೀಗ ಮೆಕಾಲೆ ಶಿಕ್ಷಣ ಪದ್ಧತಿಗೆ ಗುಡ್‌ ಬೈ ಹೇಳುವ ಕಾಲ ಸನಿಹವಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಿಂತ ನೀರಂತಾಗಿರುವ ಶೈಕ್ಷಣಿಕ ಪದ್ಧತಿಗೆ ಹೊಸರೂಪು ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ. ಸದ್ಯಕ್ಕೆ ಎಲ್ಲೆಡೆಯೂ ಇದೇ ವಿಷಯದ ಚರ್ಚೆ.

ವಾರ್ಷಿಕ ಪರೀಕ್ಷೆ ಎಂದು ಶೈಕ್ಷಣಿಕ ವರ್ಷದ ಅಂತ್ಯಕ್ಕೊಂದು ಪರೀಕ್ಷೆ ನಡೆಸಿ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ತುಲನೆ ಮಾಡಲಾಗುತ್ತಿದ್ದ ವ್ಯವಸ್ಥೆಗೆ ಈಗ ತೆರೆ ಬಿದ್ದಿದೆ. ಇದೀಗ ಟ್ರೈಮಿಸ್ಟರ್‌(3 ಸೆಮಿಸ್ಟರ್‌) ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಇದರಲ್ಲಿ ಶೈಕ್ಷಣಿಕ ವರ್ಷವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು, ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಇನ್ನೂ ಹೆಚ್ಚಿನ ಸವಲತ್ತು ಒದಗಿಸಲು ಮುಂದಾಗಿದೆ.

ಅಧ್ಯಾಪಕರುಗಳಿಗೂ ಸೂಕ್ತ ತರಬೇತಿ ವ್ಯವಸ್ಥೆಯನ್ನು ಮಾಡಲಾಗಿದ್ದು, ಟ್ರೈಮಿಸ್ಟರ್‌ ಪದ್ಧತಿ ಎಲ್ಲರಿಗೂ ಹೊಸದಾಗಿರುವುದರಿಂದ ಈ ವರ್ಷ ಇದು ಸಂಪೂರ್ಣ ಯಶಸ್ವಿ ಫಲಿತಾಂಶ ಕೊಡುವುದೆಂಬ ನಿರೀಕ್ಷೆ ಶಿಕ್ಷಣ ಇಲಾಖೆಗಿಲ್ಲ. ಆದರೂ ಮೊದಲ ಅವಧಿಯನ್ನು ಪ್ರಾಯೋಗಿಕ ಅವಧಿಯೆಂದು ಪರಿಗಣಿಸಿ 2ನೇ ಅವಧಿಯಿಂದ ಸೂಕ್ತವಾಗಿ ಜಾರಿಗೆ ತರಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಅಲ್ಲದೇ ಈ ಪದ್ಧತಿಯನ್ನು ಖಾಸಗಿ ಶಾಲೆಗಳೂ ಕಡ್ಡಾಯವಾಗಿ ಅನುಸರಿಸಬೇಕೆಂದು ಸರ್ಕಾರ ಸೂಚಿಸಿದೆ.

ಹೊಸ ಶಿಕ್ಷಣ ಪದ್ಧತಿ ಜಾರಿಯಾಗುತ್ತಿದ್ದರೂ ಪಠ್ಯ ಹಳೆಯದೇ ಎಂಬುದು ಕೊಂಚ ಬೇಸರದ ಸಂಗತಿ. ಪಠ್ಯದ ಪಾಠಗಳನ್ನು ಮೂರು ಭಾಗಗಳಾಗಿ ವಿಂಗಡಿಸುವ ಕೆಲಸವನ್ನು ಶಾಲಾ ಮುಖ್ಯೋಪಾಧ್ಯಾಯರುಗಳಿಗೇ ಒದಗಿಸಲಾಗಿದೆ. ಶಿಕ್ಷಣ ವ್ಯವಸ್ಥೆ ಸುಧಾರಿಸ ಹೊರಟಿರುವ ಶಿಕ್ಷಣ ಇಲಾಖೆಯ ಮಾರ್ಗ ಸುಗಮವಾಗಲಿ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X