ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಸರಸರನೆ ಹಾರಿದ ‘ಸರಸ್‌’ ! ಪಾಕ್‌ನಲ್ಲಿ ಕ್ಷಿಪಣಿ ಪರೀಕ್ಷೆ

By Staff
|
Google Oneindia Kannada News

ಬೆಂಗಳೂರಲ್ಲಿ ಸರಸರನೆ ಹಾರಿದ ‘ಸರಸ್‌’ ! ಪಾಕ್‌ನಲ್ಲಿ ಕ್ಷಿಪಣಿ ಪರೀಕ್ಷೆ
14 ಆಸನಗಳ ವಿಮಾನದ ತಯಾರಿಕೆಯಲ್ಲಿ ಎನ್‌ಎಎಲ್‌

ಬೆಂಗಳೂರು : ಸ್ವದೇಶಿ ನಿರ್ಮಿತ ಭಾರತದ ಮೊಟ್ಟಮೊದಲ ನಾಗರಿಕ ವಿಮಾನ ಸರಸ್‌ ಮೇ 29ರಂದು ಪ್ರಾಯೋಗಿಕ ಹಾರಾಟ ನಡೆಸಿತು.

ಬೆಂಗಳೂರಿನ ಎಚ್‌.ಎ.ಎಲ್‌. ವಿಮಾನ ನಿಲ್ದಾಣದಿಂದ ಪ್ರಪ್ರಥಮ ಬಾರಿಗೆ ಗಗನಕ್ಕೆ ಏರುವುದರೊಂದಿಗೆ ಸರಸ್‌ನ ಯಶಸ್ವಿ ಹಾರಾಟಕ್ಕೆ ಚಾಲನೆ ದೊರೆಯಿತು. ಸರಸ್‌ ಸುಮಾರು 20 ನಿಮಿಷಗಳ ಯಶಸ್ವೀ ಹಾರಾಟ ನಡೆಸಿತು. ಭಾರತೀಯ ವಾಯು ಸೇನೆಯ ಕಿರಣ್‌ ವಿಮಾನದ ತರಬೇತುದಾರರ ನೇತೃತ್ವದಲ್ಲಿ ಸರಸ್‌ನ ಹಾರಾಟ ನಡೆಯಿತು.

ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ ಸರಸ್‌ ವಿಮಾನದ ವಿನ್ಯಾಸ ಮತ್ತು ತಯಾರಿಯ ಹೊಣೆ ಹೊತ್ತು , ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರೈಸಿದೆ. ಇದೊಂದು ಉತ್ತಮ ವಿಮಾನ. ಅಲ್ಲದೇ ಇದರ ಹಾರಾಟದ ವೇಗ, ಬಲ ಎಲ್ಲವೂ ತುಂಬ ಚೆನ್ನಾಗಿಯೇ ಇದೆ ಎಂದು ಎನ್‌.ಎ.ಎಲ್‌.ನ ನಿರ್ದೇಶಕರಾದ ಬಿ.ಆರ್‌. ಪೈ ಸುದ್ದಿಗಾರರಿಗೆ ತಿಳಿಸಿದರು.

ಇಂಜಿನ್‌ನ ತೂಕ 5,118 ಕೆ.ಜಿ. ಇದ್ದು, ಐದು ಆಸನಗಳ ವ್ಯವಸ್ಥೆಯನ್ನು ಸರಸ್‌ ಹೊಂದಿದೆ. ಭೂಮಿಯಿಂದ 8,000 ಫೀಟುಗಳ ಎತ್ತರದವರೆಗೆ ಹಾರಬಲ್ಲ ಸಾಮರ್ಥ್ಯ ಸರಸ್‌ಗೆ ಇದೆ. ಎನ್‌.ಎ.ಎಲ್‌. 14 ಆಸನಗಳ ವ್ಯವಸ್ತೆಯುಳ್ಳ ಸರಸ್‌ಅನ್ನು ಹೊರ ತರಲು ಪ್ರಯೋಗ ನಡೆಸುತ್ತಿದೆ.

ಪಾಕ್‌ ಕ್ಷಿಪಣಿ ಪರೀಕ್ಷೆ : ಬೆಂಗಳೂರಿನಲ್ಲಿ ಸರಸ್‌ನ ಪ್ರಾಯೋಗಿಕ ಹಾರಾಟದ ಪರೀಕ್ಷೆ ನಡೆದಿದ್ದರೆ, ಅತ್ತ ಪಾಕಿಸ್ತಾನ ಮಧ್ಯಮಗಾಮಿ ಕ್ಷಿಪಣಿ ಪರೀಕ್ಷೆ ನಡೆಸಿದೆ.

ಘೋರಿ-5 ಎನ್ನುವ ಹೆಸರಿನ ಅಣ್ವಸ್ತ್ರ ಸಿಡಿತಲೆಗಳನ್ನು ಕೊಂಡೊಯ್ಯಬಲ್ಲ ಮಧ್ಯಮಗಾಮಿ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಪಾಕಿಸ್ತಾನ ಶನಿವಾರ ನಡೆಸಿತು. ಈ ಕ್ಷಿಪಣಿ 900 ಕಿಮೀ ವ್ಯಾಪ್ತಿಯ ಪ್ರದೇಶವನ್ನು ಕ್ರಮಿಸಬಲ್ಲದು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X