ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆವಿಷ್ಕಾರ ’ದ ಬೀದಿನಾಟಕೋತ್ಸವ

By Staff
|
Google Oneindia Kannada News

‘ಆವಿಷ್ಕಾರ ’ದ ಬೀದಿನಾಟಕೋತ್ಸವ
ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಆವಿಷ್ಕಾರ ದ 8ನೇ ಬೀದಿ ನಾಟಕೋತ್ಸವ, ಮೇ28 ರಿಂದ 30 ರವರೆಗೆ.

  • ದಟ್ಸ್‌ಕನ್ನಡ ಡೆಸ್ಕ್‌
ನಾವು ಬೆವರನು ಹರಿಸಿ ದುಡಿಯುವ ಜನ,
ನಮ್ಮ ಬೆವರಿನ ಪಾಲನು ಕೇಳುವೆವು...

ಅದು ಆತನ ಜೀವನದ ಸಂಭ್ರಮದ-ದುಖಃತಪ್ತ ದಿನ . ಮಗ ಉತ್ತಮ ಶ್ರೇಣಿಯಲ್ಲಿ ಪಾಸಾಗಿ ಡಾಕ್ಟರಾಗುವ ಹಂಬಲದಲ್ಲಿದ್ದಾನೆ. ಈ ಸಂಭ್ರಮ ಆಚರಿಸೋಣವೆಂದರೆ ತೀರಿಸಲಾರದ ಸಾಲದ ಬಾಧೆ. ಹೇಳಿ-ಕೇಳಿ ಆತ ರೈತ!

ಆತನ ಸಂಕಟವನ್ನು ಬೀದಿಬದಿಯಲ್ಲಿ ಕೂತ ಪ್ರೇಕ್ಷಕರ ಕಣ್ಣಲ್ಲಿ ಕಾಣುತ್ತೀರಿ. ಕುಂತವರು ಅಖಾಡಕ್ಕೆ ಇಳಿಯುವುದು ಮಾತ್ರ ಬಾಕಿ...

Street play festivalಕಳೆದ ಒಂದೂವರೆ ದಶಕದಲ್ಲಿ ಸಮಕಾಲೀನ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಸಂಘಟನೆ, ‘ಆವಿಷ್ಕಾರ ’. ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತು ನಾಟಕ ರಚಿಸಿ ಪ್ರದರ್ಶಿಸುತ್ತಾ ಬಂದಿದೆ. ಸಾಮಾಜಿಕ ಪರಿವರ್ತನೆ ಮಾಡುವುದು ಆವಿಷ್ಕಾರದ ಧ್ಯೇಯ. ಪ್ರತೀ ನಾಟಕವು ಒಂದೊಂದು ಸಂದೇಶ ವಾಹಕ. ಪ್ರಸ್ತುತ ಸಮಸ್ಯೆಗಳಾದ ರೈತರ ಆತ್ಮಹತ್ಯೆ, ಶಿಕ್ಷಣದ ವಾಣಿಜ್ಯೀಕರಣ, ಖಾಸಗೀಕರಣದ ಪರಿಣಾಮ, ಮಹಿಳಾ ಜಾಗೃತಿ... ಕುರಿತು ನಾಡಿನಾದ್ಯಂತ ನಾಟಕ ಪ್ರದರ್ಶಿಸಿದೆ.

1998ರಲ್ಲಿ ರಾಜ್ಯದೆಲ್ಲೆಡೆ ರೈತರ ಆತ್ಮಹತ್ಯೆ ಅಧಿಕವಾಗಿತ್ತು. ನಾವೂ ಕೇಳಿದ್ದೇವೆ. ನಮ್ಮ ಮನಸ್ಸೂ ಕರಗಿದೆ. ಆದ್ರೆ ನಾವು ಕಾರ್ಯಗತರಾಗಲಿಲ್ಲ. ಪ್ರಯೋಜನ?

ಆದರೆ ಸಮಸ್ಯೆಗೆ ಸ್ಪಂದಿಸಿದ ಅವಿಷ್ಕಾರ ಆ ವರ್ಷ ಉತ್ಸವದಲ್ಲಿ ಪ್ರದರ್ಶಿಸಿದ ನಾಟಕ ‘ಮಣ್ಣಿನಲ್ಲಿ ಮಣ್ಣಾದ ಮಕ್ಕಳು’. ನಾಟಕ ರಾಜ್ಯದ ವಿವಿಧೆಡೆ ನೂರು ಪ್ರದರ್ಶನ ಕಂಡಿತು. ಹೇಳುತ್ತಾ ಹೋದರೆ... ನಿದರ್ಶನಗಳು ಹಲವು. ಜನ ಸ್ಪಂದನೆಗೆ ಇನ್ಯಾವ ಸಾಕ್ಷಿ ಬೇಕು?

ಮೊದಲ ಬಾರಿಗೆ ಅವಿಷ್ಕಾರ ‘ಬೀದಿನಾಟಕೋತ್ಸವ’ ಪ್ರದರ್ಶಿಸಿದ್ದು 1997ರ ಮೇ ತಿಂಗಳಿನಲ್ಲಿ. ಮಲ್ಲೇಶ್ವರದ ಮೈದಾನದಲ್ಲಿ ಪ್ರಾರಂಭವಾದ ಈ ಉತ್ಸವ ರಾಜ್ಯದ ಸಾಂಸ್ಕೃತಿಕ ರಂಗಕ್ಕೆ ವಿಶಿಷ್ಠ ಮೆರುಗು ತಂದಿದೆ. ಉತ್ಸವದಲ್ಲಿ ರಾಜ್ಯದ ಹಲವು ತಂಡಗಳು ಬಂದು ಅಭಿನಯಿಸಿವೆ. ನಾಡಿನ ಹಿರಿಯ ಕಲಾವಿದರಾದ ಶಿವಮೊಗ್ಗ ಸುಬ್ಬಣ್ಣ, ಹಡಪದ್‌, ಆರ್‌.ನಾಗೇಶ್‌, ಪ್ರಕಾಶ್‌ ಬೆಳವಾಡಿ, ಕಾ.ವೆಂ. ರಾಜಗೋಪಾಲ್‌, ನಾಗಾಭರಣ ಮುಂತಾದವರು ಬಂದು ಪ್ರಶಂಸೆಗೈದಿದ್ದಾರೆ.

‘8ನೇ ಬೀದಿ ನಾಟಕೋತ್ಸವ’ವು ಮಲ್ಲೇಶ್ವರ ಮೈದಾನದಲ್ಲಿ ಮೇ 28ರ ಶುಕ್ರವಾರದಿಂದ ಮೇ 30ರ ವರೆಗೆ ನಡೆಯಲಿದೆ. ಈ ವರ್ಷ ಎಸ್‌.ಎನ್‌.ಸ್ವಾಮಿ ನಿರ್ದೇಶನದ ‘ವಿದ್ಯಾದಾನವ’, ಸುನಿತ್‌ ಕುಮಾರ್‌ ಶೆಟ್ಟಿ ನಿರ್ದೇಶನದ ‘ಏಕಾಂತ’, ಕುಮಾರ್‌ ನಿರ್ದೇಶನದ ‘ಆಕ್ಟೋಪಸ್‌’, ‘ಆ್ಯಸಿಡ್‌ ಮಹಿಳೆ’, ‘ನಾವು ಮನುಜರು’, ‘ಜನಮರುಳು’, ‘ಕುರುಡು ಕಾಂಚಾಣ’ ಮುಂತಾದ ನಾಟಕಗಳನ್ನು ವಿವಿಧ ತಂಡಗಳು ಪ್ರಸ್ತುತ ಪಡಿಸಲಿವೆ. ಆವಿಷ್ಕಾರದ ಯಶಸ್ಸಿನ ಹಿಂದೆ ಡಾ.ಸುನಿತ್‌ ಕುಮಾರ್‌ ಶೆಟ್ಟಿ, ಡಾ। ಮಂಜುನಾಥ್‌, ರಾಧಾಕೃಷ್ಣ, ಡಾ.ಜಯಲಕ್ಷ್ಮಿ, ಉಮಾ, ಪ್ರಕಾಶ್‌ ಅರಸ್‌ ಅವರ ಪರಿಶ್ರಮವಿದೆ. ತನ್ನ ಉದಾತ್ತ ಗುರಿ ಸಾಧನೆಗೋಸ್ಕರ ಬೀದಿ ನಾಟಕೋತ್ಸವದಂತಹ ದಾರಿಗಳನ್ನು ಆಯ್ದುಕೊಂಡಿರುವ ಆವಿಷ್ಕಾರ ಅಭಿನಂದನಾರ್ಹ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X