ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆಗೆ ಮುಕ್ತಿ ; ಮನಮೋಹನ್‌ ಬಗೆಗೆ ವಿಚ್‌ಪಿ ಹೆಚ್ಚಿನ ನಿರೀಕ್ಷೆ

By Staff
|
Google Oneindia Kannada News

ಅಯೋಧ್ಯೆಗೆ ಮುಕ್ತಿ ; ಮನಮೋಹನ್‌ ಬಗೆಗೆ ವಿಚ್‌ಪಿ ಹೆಚ್ಚಿನ ನಿರೀಕ್ಷೆ
ಕಲಾಂ ಹಾಗೂ ಮನಮೋಹನ್‌ ಸಾತ್ವಿಕ ವ್ಯಕ್ತಿಗಳು -ಸಿಂಘಾಲ್‌ ಬಣ್ಣನೆ

ಬೆಂಗಳೂರು : ಪ್ರಧಾನಿ ಪದದ ನಿಯೋಜಿತ ಅಭ್ಯರ್ಥಿ ಮನಮೋಹನ್‌ಸಿಂಗ್‌ ಓರ್ವ ಸಾತ್ವಿಕ ವ್ಯಕ್ತಿಯಾಗಿದ್ದು , ಅಯೋಧ್ಯೆಯ ರಾಮಮಂದಿರ ಸಮಸ್ಯೆಯನ್ನು ಪರಿಹರಿಸುವ ಸಂಬಂಧ ಅವರ ಬಗ್ಗೆ ಹೆಚ್ಚಿನ ಆಶಾಭಾವನೆ ಇರಿಸಿಕೊಂಡಿರುವುದಾಗಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಹೇಳಿದೆ.

ರಾಷ್ಟ್ರಪತಿ ಕಲಾಂ ಹಾಗೂ ಪ್ರಧಾನಿ ಅಭ್ಯರ್ಥಿ ಮನಮೋಹನ್‌ಸಿಂಗ್‌ ಅತ್ಯುತ್ತಮ ಸಾತ್ವಿಕ ವ್ಯಕ್ತಿಗಳಾಗಿದ್ದಾರೆ. ಇದು ದೇಶದ ಏಳಿಗೆಯ ದೃಷ್ಟಿಯಿಂದ ಶುಭ ಸಂಕೇತ ಎಂದು ಶುಕ್ರವಾರ (ಮೇ 21) ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಹೇಳಿದರು.

ರಾಮಮಂದಿರ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ಮನಮೋಹನ್‌ ಅವರಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ಎಂದ ಸಿಂಘಾಲ್‌- ತಮ್ಮ ನಿರೀಕ್ಷೆಯ ವಿವರಗಳನ್ನು ನೀಡಲು ನಿರಾಕರಿಸಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪತನದಿಂದಾಗಿ ರಾಮಜನ್ಮಭೂಮಿ ಚಳವಳಿಗೆ ಹಿನ್ನಡೆ ಉಂಟಾಗಿದೆ ಎನ್ನುವ ಅಭಿಪ್ರಾಯಗಳನ್ನು ಅಶೋಕ್‌ ಸಿಂಘಾಲ್‌ ತಳ್ಳಿಹಾಕಿದರು. ರಾಮಜನ್ಮಭೂಮಿ ಚಳವಳಿ ದೇಶದ ಧರ್ಮಗುರುಗಳು ಪ್ರಾರಂಭಿಸಿದ ಆಂದೋಲನವೇ ಹೊರತು ರಾಜಕೀಯ ಚಳವಳಿಯಲ್ಲ ಎಂದು ಸಿಂಘಾಲ್‌ ಸ್ಪಷ್ಟಪಡಿಸಿದರು.

ರಾಮಜನ್ಮಭೂಮಿ ಪ್ರಕರಣವನ್ನು ಕೆಲವು ರಾಜಕೀಯ ಪಕ್ಷಗಳು ಮುಸ್ಲಿಮರನ್ನು ಓಲೈಸುವ ದೃಷ್ಟಿಯಿಂದ ರಾಜಕೀಯದ ವಿಷಯವನ್ನಾಗಿಸಿವೆ ಎಂದು ಸಿಂಘಾಲ್‌ ಆರೋಪಿಸಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X