ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶನಿವಾರ ಪ್ರಧಾನಿಯಾಗಿ ಮನಮೋಹನ್‌? ಷೇರುಪೇಟೇಲಿ ಚೇತರಿಕೆ

By Staff
|
Google Oneindia Kannada News

ಶನಿವಾರ ಪ್ರಧಾನಿಯಾಗಿ ಮನಮೋಹನ್‌? ಷೇರುಪೇಟೇಲಿ ಚೇತರಿಕೆ
ಸರ್ಕಾರದಲ್ಲಿ ಸೇರುವಂತೆ ಎಲ್ಲ ಮಿತ್ರಪಕ್ಷಗಳಿಗೂ ಆಗ್ರಹ

ನವದೆಹಲಿ : ಬದಲಾದ ರಾಜಕೀಯ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ನಿಯೋಜಿತ ಪ್ರಧಾನಿ ಅಭ್ಯರ್ಥಿ ಮನಮೋಹನ ಸಿಂಗ್‌ ನೇತೃತ್ವದ ಕೇಂದ್ರಸರ್ಕಾರ ಮೇ 22ರ ಶನಿವಾರ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.

ಶನಿವಾರ ಅಥವಾ ಅದಕ್ಕೂ ಮುನ್ನ ಸರ್ಕಾರ ರಚಿಸುವ ಪ್ರಯತ್ನಗಳನ್ನು ನಡೆಸಲಾಗುವುದು. ಇನ್ನೊಂದೆರಡು ದಿನಗಳಲ್ಲಿ ಸಂಪುಟದ ಸದಸ್ಯರ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಮನಮೋಹನ್‌ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು. ವಿತ್ತ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳುವ ಕುರಿತು ಸದ್ಯಕ್ಕೆ ಯೋಚಿಸಿಲ್ಲ ಎಂದು ಪ್ರಶ್ನೆಯಾಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಸಮಾಜವಾದಿ ಪಕ್ಷ ಹಾಗೂ ಎಡಪಕ್ಷಗಳು ಸೇರಿದಂತೆ ಎಲ್ಲ ಮಿತ್ರಪಕ್ಷಗಳು ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಸೇರ್ಪಡೆಯಾಗಬೇಕು ಎಂದು ಮನಮೋಹನ್‌ಸಿಂಗ್‌ ಸಲಹೆ ಮಾಡಿದರು.

ಸೆನ್ಸೆಕ್ಸ್‌ ಚೇತರಿಕೆ : ಪ್ರಧಾನಿ ಅಭ್ಯರ್ಥಿಯಾಗಿ ಸೋನಿಯಾ ಸ್ಥಾನದಲ್ಲಿ ಮನಮೋಹನ್‌ಸಿಂಗ್‌ ಅವರ ಹೆಸರು ಪ್ರಕಟವಾಗುತ್ತಿರುವಂತೆಯೇ ಷೇರುಪೇಟೆಯಲ್ಲಿ ಚೇತರಿಕೆ ಕಾಣಿಸಿಕೊಂಡಿದೆ. ಸೋನಿಯಾ ಪ್ರಧಾನಿಯಾಗುವ ಆತಂಕದಲ್ಲಿ ಹೂಡಿಕೆದಾರರು ಅಧೀರರಾದ್ದರಿಂದ ಷೇರುಪೇಟೆ ಭಾರೀ ಕುಸಿತ ಕಂಡಿತ್ತು . ಮೇ 20ರ ಬೆಳಗ್ಗೆ ಷೇರುಪೇಟೆಯಲ್ಲಿ ಉತ್ಸಾಹ ಕಾಣಿಸಿಕೊಂಡಿದ್ದು , ವಿವಿಧ ಷೇರುಗಳ ಸೂಚ್ಯಂಕಗಳಲ್ಲಿ ಏರಿಕೆ ಕಾಣಿಸಿಕೊಂಡಿದೆ.

(ಪಿಟಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X