ಸಿಕ್ಕಿಂ ಭಾರತದ ಅವಿಭಾಜ್ಯಅಂಗ ; ಕೊನೆಗೂ ಒಪ್ಪಿಕೊಂಡಿತು ಚೀನಾ!
ಸಿಕ್ಕಿಂ ಭಾರತದ ಅವಿಭಾಜ್ಯಅಂಗ ; ಕೊನೆಗೂ ಒಪ್ಪಿಕೊಂಡಿತು ಚೀನಾ!
ಚೀನಾದ ‘ವಿಶ್ವ ವ್ಯವಹಾರ ವಾರ್ಷಿಕ ಸಂಚಿಕೆಯಲ್ಲಿ ಸಿಕ್ಕಿಂ ಭಾರತದ ನಕ್ಷೆಯಲ್ಲಿ
ಬೀಜಿಂಗ್ : ಇದೇ ಮೊದಲ ಬಾರಿಗೆ ಚೀನಾ ತನ್ನ ವಿಶ್ವನಕ್ಷೆಯಲ್ಲಿ ಸಿಕ್ಕಿಂ ರಾಜ್ಯವನ್ನು ಭಾರತದ ಭಾಗವೆಂದು ಚಿತ್ರಿಸಿದ್ದು , ಉಭಯ ದೇಶಗಳ ನಡುವಣ ಬಾಂಧವ್ಯ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ ಇರಿಸಿದೆ.
ಚೀನಾ ಮೇ 6ರ ಗುರುವಾರ ಬಿಡುಗಡೆಗೊಳಿಸಿದ ತನ್ನ ‘ವಿಶ್ವ ವ್ಯವಹಾರ ವಾರ್ಷಿಕ ಸಂಚಿಕೆ 2003/2004’ರಲ್ಲಿ ಸಿಕ್ಕಿಂ ಭಾರತದ ಅವಿಭಾಜ್ಯ ಅಂಗವೆಂದು ಗುರುತಿಸಿದೆ. ಅದೇ ಪುಸ್ತಕದ ಏಷ್ಯಾ ರಾಷ್ಟ್ರಗಳ ಹೆಸರಿನ ಪಟ್ಟಿಯಿಂದ ‘ಸಿಕ್ಕಿಂ’ನ್ನು ತೆಗೆದುಹಾಕಿದೆ. ಈ ಹಿಂದಿನ ಎಲ್ಲಾ ಚೀನೀ ಸರಕಾರಿ ಪ್ರಕಟಣೆಗಳಲ್ಲಿ ಸಿಕ್ಕಿಂ ಸ್ವತಂತ್ರ ರಾಷ್ಟ್ರವೆಂದು ನಮೂದಿಸಲಾಗಿತ್ತು.
2003ರ ಜೂನ್‌ನಲ್ಲಿ ಪ್ರಧಾನಿ ವಾಜಪೇಯಿ ಚೀನಾ ಪ್ರವಾಸ ಕೈಗೊಂಡಿದ್ದರು. ಆಗ ಸಿಕ್ಕಿಂ ಸಮಸ್ಯೆ, ಆರ್ಥಿಕ ಸಹಾಯ, ವಾಣಿಜ್ಯ ವ್ಯವಹಾರ ಮುಂತಾದ ಮಹತ್ತರ ವಿಷಯಗಳ ಕುರಿತು ಮಾತುಕತೆ ನಡೆದಿತ್ತು. ಇದರಿಂದ ಚೀನಾ ಭಾರತ-ಚೀನಾ ಗಡಿರೇಖೆಯನ್ನು ಒಪ್ಪಿಕೊಂಡಂತಾಗಿದೆ. ಹಾಗೂ ಭಾರತ ಚೀನಾ ಸ್ನೇಹ ಸಂಬಂಧಗಳ ಅಭಿವೃದ್ಧಿಗೆ ಪುಷ್ಠಿ ದೊರೆತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು