ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಮಾರುಕಟ್ಟೇಲಿ 2010ರೊಳಗೆ 14000 ಮೆ.ಟನ್‌ ವೆನಿಲ್ಲಾ ಬೇಡಿಕೆ

By Staff
|
Google Oneindia Kannada News

ವಿಶ್ವಮಾರುಕಟ್ಟೇಲಿ 2010ರೊಳಗೆ 14000 ಮೆ.ಟನ್‌ ವೆನಿಲ್ಲಾ ಬೇಡಿಕೆ
ವೆನಿಲ್ಲಾ ದರ ನಿಯಂತ್ರಣಕ್ಕೆ ಅಧ್ಯಯನ ನಡೆಯುತ್ತಿದೆ....

ಶಿರಸಿ : ಜಾಗತಿಕ ಮಾರುಕಟ್ಟೆಯಲ್ಲಿ 2010ರ ಸಮಯಕ್ಕೆ ವೆನಿಲ್ಲಾ ಬೇಡಿಕೆ 14, 000 ಮೆಟ್ರಿಕ್‌ ಟನ್‌ಗೆ ತಲುಪಲಿದೆ ಎಂದು ಅಧ್ಯಯನಗಳು ತಿಳಿಸಿವೆ.

ಭಾರತದಲ್ಲಿ ವೆನಿಲ್ಲಾ ಬೆಳೆಯ ಭವಿಷ್ಯ ಎನ್ನುವ ವಿಷಯದ ಕುರಿತು ಶಿರಸಿಯಲ್ಲಿ ಜರುಗಿದ ಎರಡು ದಿನಗಳ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಸಾಂಬಾರ ಪದಾರ್ಥಗಳ ಮಂಡಳಿ ನಿರ್ದೇಶಕ ಟಿ.ಡಿ. ಜಾನ್‌ ಈ ವಿಷಯ ತಿಳಿಸಿದರು. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ 5,000 ಮೆಟ್ರಿಕ್‌ ಟನ್‌ಗಳಷ್ಟು ವೆನಿಲ್ಲಾ ಬೇಡಿಕೆಯಿದೆ. ಪ್ರಕೃತಿ ಜನ್ಯ ಆಹಾರಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು , 2010ರೊಳಗೆ ವೆನಿಲ್ಲಾದ ಬೇಡಿಕೆ 14 ಸಾವಿರ ಮೆಟ್ರಿಕ್‌ ಟನ್‌ಗೆ ಹೆಚ್ಚಲಿದೆ ಎಂದು ಜಾನ್‌ ಹೇಳಿದರು.

ಬಹು ಬೇಡಿಕೆಯ ಕಾರಣದಿಂದ ವೆನಿಲ್ಲಾ ದರವೂ ಹೆಚ್ಚಿದೆ ಮತ್ತು ಹೆಚ್ಚುತ್ತಿದೆ. ದರದಲ್ಲಿ ಅನಿರೀಕ್ಷಿತ ಏರುಪೇರಾಗುವುದನ್ನು ತಡೆಯಲೆಂದೇ ಅಧ್ಯಯನ ನಡೆಸಲಾಗುತ್ತಿದೆ. ಇದರಿಂದ ಸೂಕ್ತ ದರ ನಿಗದಿ ಮಾಡಬಹುದು. ಸಾಂಬಾರ ಪದಾರ್ಥಗಳ ಮಂಡಳಿಯು ಮಿಶ್ರ ಬೆಳೆಯ ಬೇಸಾಯಕ್ಕೆ ಒತ್ತು ಕೊಡುತ್ತಿದೆ ಎಂದು ಜಾನ್‌ ತಿಳಿಸಿದರು.

ಎರಡನೆಯ ತಲೆಮಾರಿನ ರೈತರು ಉತ್ತಮ ಗುಣಮಟ್ಟದ ವೆನಿಲ್ಲಾ ಬೆಳೆ ತೆಗೆಯುವಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿಲ್ಲ. ಉತ್ತಮ ಗುಣಮಟ್ಟದ ವೆನಿಲ್ಲಾ ಉತ್ತಮ ದರ ತರುವಲ್ಲಿ ಸಹಕಾರಿ ಎಂದು ಗೋಷ್ಠಿಯನ್ನು ಉದ್ಘಾಟಿಸಿದ ಕರ್ನಾಟಕ ತೋಟಗಾರಿಕಾ ಮಂಡಳಿ ನಿರ್ದೇಶಕ ಡಾ. ಜಿ.ಕೆ. ವಸಂತಕುಮಾರ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸುಮಾರು 220 ಪ್ರತಿನಿಧಿಗಳು ವೆನಿಲ್ಲಾ ಗೋಷ್ಠಿಗೆ ಆಗಮಿಸಿದ್ದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಶಿರಸಿಯಲ್ಲಿ ಏಪ್ರಿಲ್‌ 29 ರಿಂದ 2 ದಿನ ವೆನಿಲ್ಲಾ ವೆನಿಲ್ಲಾ ಬೇರೇನಿಲ್ಲ !

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X