ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ಗೆ 132 ಸ್ಥಾನ, ಇದು ಮುಖ್ಯಮಂತ್ರಿ ಎಸ್ಸೆಂ. ಕೃಷ್ಣರ ಸಮೀಕ್ಷೆ..

By Staff
|
Google Oneindia Kannada News

ಕಾಂಗ್ರೆಸ್‌ಗೆ 132 ಸ್ಥಾನ, ಇದು ಮುಖ್ಯಮಂತ್ರಿ ಎಸ್ಸೆಂ. ಕೃಷ್ಣರ ಸಮೀಕ್ಷೆ..
ಪ್ರತಿಪಕ್ಷಗಳ ಟೀಕೆಗಳ ಕುರಿತು ನಿಷ್ಪಾಪಿ ಮುಖ್ಯಮಂತ್ರಿ ಆಕ್ಷೇಪ

ಬೆಂಗಳೂರು : ಮಾಧ್ಯಮಗಳ ಚುನಾವಣಾ ಸಮೀಕ್ಷೆಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ , ತಮ್ಮ ವಿರುದ್ಧ ಚುನಾವಣಾ ಅಕ್ರಮಗಳ ಆರೋಪ ಹೊರಿಸುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಮುನ್ನ ವಾಜಪೇಯಿ ಅಲೆ ಇದೆ ಎಂದು ನೀವೇ ಹೇಳಿದ್ದಿರಿ. ಈಗ ಕಾಂಗ್ರೆಸ್‌ಗೆ ಪರಿಸ್ಥಿತಿ ಅನುಕೂಲಕರವಾಗಿದೆ ಎಂದು ಹೇಳುತ್ತಿದ್ದೀರಿ ಎಂದು ಚುನಾವಣಾ ಸಮೀಕ್ಷೆಗಳ ಕುರಿತು ಮಾತನಾಡುತ್ತಿದ್ದ ಕೃಷ್ಣ ಮಾಧ್ಯಮ ಪ್ರತಿನಿಧಿಗಳನ್ನು ಛೇಡಿಸಿದರು. ಅವರು ಏ.29ರ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ನಾನು ನನ್ನದೇ ಆದ ಸ್ವಂತ ಸಮೀಕ್ಷೆಯಾಂದನ್ನು ನಡೆಸಿದ್ದೇನೆ. ಈ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ 132 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಮರಳಲಿದೆ ಎಂದು ಕೃಷ್ಣ ಹೇಳಿದರು.

ರಾಜ್ಯದಲ್ಲಿನ ಪರಿಸ್ಥಿತಿ ಆಡಳಿತ ಪಕ್ಷಕ್ಕೆ ಅನುಕೂಲಕರವಾಗಿದೆ. ಅದರಲ್ಲೂ, ಏಪ್ರಿಲ್‌ 26ರಂದು 13 ಲೋಕಸಭೆ ಹಾಗೂ 104 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಮತದಾನದ ಸಂದರ್ಭದಲ್ಲಂತೂ ಜನತೆ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚಿನ ಒಲವು ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.

ನಾನು ನಿಷ್ಪಾಪಿ : ಮತಪಟ್ಟಿಯಲ್ಲಿ ಮತದಾರರ ಹೆಸರು ಬಿಟ್ಟುಹೋಗಿರುವ ಕುರಿತು ಪ್ರತಿಪಕ್ಷಗಳು ತಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದ ಕೃಷ್ಣ , ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮನ್ನು ಟೀಕಿಸಿದ ಪ್ರತಿಪಕ್ಷಗಳನ್ನು , ವಿಶೇಷವಾಗಿ ಜಾತ್ಯತೀತ ಜನತಾದಳದ ನಾಯಕರನ್ನು ಕೃಷ್ಣ ತರಾಟೆಗೆ ತೆಗೆದುಕೊಂಡರು.

ಮತಪಟ್ಟಿಯಲ್ಲಿ ಗೊಂದಲಗಳಿರುವುದಕ್ಕೆ ತಾವು ಜವಾಬ್ದಾರರಲ್ಲ . ಮತಪಟ್ಟಿಯನ್ನು ರಚಿಸುವಲ್ಲಿ ಎಲ್ಲ ರಾಜ್ಯಗಳಲ್ಲೂ ಒಂದೇರೀತಿಯ ಕ್ರಮವನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಅನುಸರಿಸಲಾಗಿದೆ. ಮತಪಟ್ಟಿಯನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಆಯೋಗ ಅಪೇಕ್ಷಿಸಿದ ಎಲ್ಲ ಸೌಲಭ್ಯ ಹಾಗೂ ನೆರವನ್ನು ರಾಜ್ಯ ಸರ್ಕಾರ ಒದಗಿಸಿತ್ತು ಎಂದು ಕೃಷ್ಣ ಹೇಳಿದರು.

ತಮ್ಮ ವಿರುದ್ಧದ ಪ್ರತಿಪಕ್ಷಗಳ ನಾಯಕರ ಟೀಕೆಗಳು ದುರುದ್ದೇಶದಿಂದ ಕೂಡಿವೆ ಹಾಗೂ ರಾಜಕೀಯ ಪ್ರೇರಿತ ಎಂದು ಕೃಷ್ಣ ಬಣ್ಣಿಸಿದರು.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X