ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಗ್ರಾಸ ಚಂದ್ರಗ್ರಹಣ : 76 ನಿಮಿಷ ಮರೆಯಾಗಲಿರುವ ಚಂದಮಾಮ

By Staff
|
Google Oneindia Kannada News

ಖಗ್ರಾಸ ಚಂದ್ರಗ್ರಹಣ : 76 ನಿಮಿಷ ಮರೆಯಾಗಲಿರುವ ಚಂದಮಾಮ
ಪಶ್ಚಿಮ ಏಷ್ಯಾ, ಹಿಂದೂ ಮಹಾಸಾಗರ, ಪೂರ್ವ ಆಪ್ರಿಕಾದ ಪ್ರದೇಶಗಳ ಜನರಿಗೆ ಸಂಪೂರ್ಣ ಖಗ್ರಾಸ ಚಂದ್ರ ಗ್ರಹಣದ ದರ್ಶನ

ನವದೆಹಲಿ: ಮೇ 4 ಮಂಗಳವಾರ ಮಧ್ಯರಾತ್ರಿಯ ಹೊತ್ತಿಗೆ 76 ನಿಮಿಷಗಳ ಖಗ್ರಾಸ ಚಂದ್ರಗ್ರಹಣವಾಗಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಪೂರ್ವಾರ್ಧ ಗೋಳದಲ್ಲಿ ನೆಲೆಸಿರುವ ಜನರಿಗೆ ಈ ಗ್ರಹಣದ ದೃಶ್ಯವು ಸ್ಪಷ್ಟವಾಗಿ ಗೋಚರಿಸಲಿದೆ. ಉತ್ತರ ಅಮೆರಿಕಾದ ಜನರು ಈ ಖಗ್ರಾಸ ಚಂದ್ರಗ್ರಹಣ ವೀಕ್ಷಣೆಯಿಂದ ವಂಚಿತರಾಗಲಿದ್ದಾರೆ. ಚಂದ್ರನು ಮಧ್ಯಾಹ್ನ ಮತ್ತು ಸಂಜೆಯ ಹೊತ್ತಿಗೆ ಕ್ಷಿತಿಜಕ್ಕಿಂತ ಕೆಳಗೆ ಬರಲಿದ್ದಾನೆ.

ಕಳೆದ ಸುಮಾರು ಒಂದು ವರ್ಷಗಳ ಅವಧಿಯಲ್ಲಿ ಇಂತಹ ಗ್ರಹಣ ಕಾಣಿಸುತ್ತಿರುವುದು ಮೂರನೇ ಬಾರಿಯಾಗಿದೆ. 2003ರ ಮೇ 15-16 ಮತ್ತು ನವೆಂಬರ್‌ 8 ರಂದು ಚಂದ್ರ ಗ್ರಹಣ ಕಾಣಿಸಿಕೊಂಡಿತ್ತು.

ಖಗ್ರಾಸ ಚಂದ್ರ ಗ್ರಹಣವು ಮೇ 4ರಂದು ಮಂಗಳವಾರ ಭಾರತೀಯ ಕಾಲಮಾನ 23. 21 ಗಂಟೆಗೆ ಪ್ರಾರಂಭವಾಗಿ ಬುಧವಾರ 4. 40 ಗಂಟೆಯವರೆಗೆ ಮುಗಿಯಲಿದೆ. ಈ ಮಧ್ಯೆ ಚಂದ್ರನು ಬುಧವಾರ ಬೆಳಿಗ್ಗೆ 1.22 ರಿಂದ 76 ನಿಮಿಷಗಳ ಕಾಲ ಸಂಪೂರ್ಣವಾಗಿ ಮರೆಯಾಗಲಿದ್ದಾನೆ.

ಗ್ರಹಣದ ಸ್ಪಷ್ಟ ಮತ್ತು ಸರಿಯಾದ ಚಿತ್ರಣವನ್ನು ನೋಡಿ ಸವಿಯಿವ ಭಾಗ್ಯವಿರುವುದು ಪಶ್ಚಿಮ ಏಷ್ಯಾ, ಹಿಂದೂ ಮಹಾಸಾಗರದ ಬಳಿಯ ಬಹುತೇಕ ಪ್ರದೇಶ ಮತ್ತು ಪೂರ್ವ ಆಪ್ರಿಕಾದ ಮೂರನೆಯ ಎರಡು ಭಾಗದ ಜನರಿಗೆ ಮಾತ್ರ. ಈ ಪ್ರದೇಶಗಳ ಜನರಿಗೆ ಸಂಪೂರ್ಣ ಖಗ್ರಾಸ ಚಂದ್ರ ಗ್ರಹಣದ ದರ್ಶನವಾಗಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X