ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಂಡಾಯ’ದ ವ್ಯಾಸರಾಯ ಬಲ್ಲಾಳರಿಗೆ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಗರಿ

By Staff
|
Google Oneindia Kannada News

‘ಬಂಡಾಯ’ದ ವ್ಯಾಸರಾಯ ಬಲ್ಲಾಳರಿಗೆ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಗರಿ
ಜೂನ್‌13ರಂದು ಬೆಂಗಳೂರಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಕನ್ನಡದ ಪ್ರಸಿದ್ಧ ಕಥೆಗಾರ, ಕಾದಂಬರಿಗಾರ, ಅನುವಾದಕ 81ರ ಹರೆಯದ ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳ ಅವರು 2004ನೇ ಸಾಲಿನ ಪ್ರತಿಷ್ಠಿತ ‘ಮಾಸ್ತಿ ಪ್ರಶಸ್ತಿ’ ಗೌರವಕ್ಕೆ ಪಾತ್ರರಾಗಿದ್ದಾರೆ.

25 ಸಾವಿರ ರು. ನಗದು ಬಹುಮಾನ ಒಳಗೊಂಡ ಮಾಸ್ತಿ ಪ್ರಶಸ್ತಿಯನ್ನು ಜೂನ್‌ 13ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥ್‌ ಹೇಳಿದ್ದಾರೆ.

ಬಲ್ಲಾಳರು...

ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ 1923 ಡಿಸೆಂಬರ್‌ 1ರಂದು ಜನಿಸಿದ ಬಲ್ಲಾಳರು ಹೆಚ್ಚಿನ ಸಮಯ ವಾಸಿಸಿದ್ದು ಮುಂಬಯಿಯಲ್ಲಿ. ಅವರು ಮುಂಬಯಿಯಲ್ಲಿ ಇದ್ದುಕೊಂಡೇ ಕನ್ನಡ ಸರಸ್ವತಿಯ ಸೇವೆ ಮಾಡಿದರು.

‘ಬದುಕಿನ ಆದರ್ಶ’, ‘ಸಂಪಿಗೆ ಹೂ’, ‘ಮಂಜರಿ’, ‘ತ್ರಿಕಾಲ’ ಇವರ ಕಥಾ ಸಂಕಲನಗಳು. ‘ಅನುರಕ್ತೆ’, ‘ಹೆಜ್ಜೆ’, ‘ಉತ್ತರಾಯಣ ’, ‘ಆಕಾಶಕ್ಕೊಂದು ಕಂದಿಲು’, ‘ಬಂಡಾಯ’ ಕಾದಂಬರಿಗಳು. ‘ನಾನೊಬ್ಬ ಭಾರತೀಯ ಪ್ರವಾಸಿ’ ‘ಸಂಗ್ರಹ ಭಾರತಾಯಣ’ ‘ಗಿಣಿಯು ಪಂಜರದೊಳಗಿಲ್ಲ’ ‘ಕಟ್ಟುವೆವು ನಾವು’ ಮುಂತಾದ ಕೃತಿಗಳಿಂದ ಕನ್ನಡ ಸಾಹಿತ್ಯಲೋಕದಲ್ಲಿ ಜನಜನಿತರಾಗಿದ್ದಾರೆ. ಸದ್ಯಕ್ಕೆ ಬಲ್ಲಾಳರು ಬೆಂಗಳೂರು ನಿವಾಸಿ.

ಇವರ ಅನೇಕ ಕೃತಿಗಳು ಚಲನ ಚಿತ್ರವಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮಂತಾದ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. 1990ರಲ್ಲಿ ಮಹಾರಾಷ್ಟ್ರ ಸರಕಾರ 1ಲಕ್ಷ ನಗದು ಪ್ರಶಸ್ತಿ ನೀಡಿ ಗೌರವಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X