ಅಬ್ಬರಿಸಿಬೊಬ್ಬಿರಿದ ಮಳೆದಾಳಿಗೆ ಬೆಂಗಳೂರಲ್ಲಿ ಮುನ್ನೂರು ಮರ ಬಲಿ
ಅಬ್ಬರಿಸಿಬೊಬ್ಬಿರಿದ ಮಳೆದಾಳಿಗೆ ಬೆಂಗಳೂರಲ್ಲಿ ಮುನ್ನೂರು ಮರ ಬಲಿ
ಸಂಚಾರ ಅಸ್ತವ್ಯಸ್ತ , ವಿದ್ಯುತ್ ಕಣ್ಣಾಮುಚ್ಚಾಲೆ, ಪಾಲಿಕೆ-ಪೊಲೀಸ್ ನಿದ್ದೆಗೆ ಸಂಚಕಾರ
ಮಲ್ಲೇಶ್ವರಂ, ಸದಾಶಿವನಗರ, ಶ್ರೀರಾಮಪುರ, ಸ್ಯಾಂಕಿ ರಸ್ತೆ , ವಯ್ಯಾಲಿ ಕಾವಲ್, ಗುಟ್ಟಹಳ್ಳಿ, ಮೇಕ್ರಿ ವೃತ್ತ ಮುಂತಾದ ಪ್ರದೇಶಗಳಲ್ಲಿ ಕನಿಷ್ಠ ಮುನ್ನೂರು ಮರಗಳು ಮಳೆಗಾಳಿಯಿಂದ ಉರುಳಿ ಬಿದ್ದಿರಬಹುದೆಂದು ಅಂದಾಜು ಮಾಡಲಾಗಿದೆ. ಏ.22 ಹಾಗೂ 23ರ ರಾತ್ರಿ ಸುರಿದ ಬಿರುಮಳೆಯಿಂದ ಈ ಮರ ಹಾನಿ ಸಂಭವಿಸಿದೆ.
ಅಬ್ಬರದ ಮಳೆಗಾಳಿಯಿಂದಾಗಿ ಬೆಂಗಳೂರಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿದ್ದು , ಬೆಂಗಳೂರು ದಕ್ಷಿಣ ಭಾಗದಲ್ಲಿ ಶುಕ್ರವಾರ ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿತ್ತು .
ಮರಗಳು ಉರುಳಿರುವುದರಿಂದ ಅನೇಕ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ. 8 ವಾಹನಗಳು ಈ ಅಸ್ತವ್ಯಸ್ತತೆಯಲ್ಲಿ ಜಖಂಗೊಂಡಿವೆ. ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ನಗರ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಿದ್ದ ಮರಗಳು ಹಾಗೂ ಮುರಿದ ಕೊಂಬೆಗಳನ್ನು ತೆರವುಗೊಳಿಸುವ, ವಿದ್ಯುತ್ ಸರಬರಾಜು ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications