ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಅಧ್ಯಾಯಕ್ಕೆ ತೆರೆ; ಬಳ್ಳಾರಿ-ಕೋಲಾರದಲ್ಲಿ ಹಾರಿದ ಗುಂಡು

By Staff
|
Google Oneindia Kannada News

ಪ್ರಥಮ ಅಧ್ಯಾಯಕ್ಕೆ ತೆರೆ; ಬಳ್ಳಾರಿ-ಕೋಲಾರದಲ್ಲಿ ಹಾರಿದ ಗುಂಡು
ಕನಕಪುರದಲ್ಲಿ ಕಲ್ಲು ತೂರಾಟ, ಶಿವಕುಮಾರ್‌ ಕಾರು ಜಖಂ

ಬೆಂಗಳೂರು : ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯನ್ನು ತಹಬಂದಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಮಾರಕಾಸ್ತ್ರಗಳನ್ನು ಹೊಂದಿದ್ದ ಗುಂಪುಗಳು ಘರ್ಷಣೆಗೆ ತೊಡಗಿದಾಗ ಮಧ್ಯಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿಗೆ ತಹಬಂದಿಗೆ ಬರದೆಹೋದಾಗ ಗಾಳಿಯಲ್ಲಿ ಗುಂಡು ಹಾರಿಸಿದರು.

ಕೋಲಾರದಲ್ಲೂ ಗುಂಡು : ಕೋಲಾರದ ರಹಮತ್‌ ನಗರದಲ್ಲಿ ದುಷ್ಕರ್ಮಿಗಳು ಮತಗಟ್ಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸಿದಾಗ ಉಂಟಾದ ಕೋಲಾಹಲದ ಪರಿಸ್ಥಿತಿಯಲ್ಲಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಮತಪಟ್ಟಿಯಲ್ಲಿ ತಮ್ಮ ಹೆಸರಿಲ್ಲದ ಕಾರಣ ಆಕ್ರೋಶಗೊಂಡ ಜನರ ಗುಂಪು ಮೂರು ಮತಗಟ್ಟೆಗಳ ಮೇಲೆ ದಾಳಿ ನಡೆಸಿತು. ಕೆಲವರು ಮತಯಂತ್ರಗಳನ್ನು ನಾಶಪಡಿಸಲು ಯತ್ನಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.

ಬಿಜಾಪುರದ ಬಸವನ ಬಾಗೇವಾಡಿಯಲ್ಲಿ ಸಹ ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಗುಂಪು ಘರ್ಷಣೆಗೆ ಕಾರಣವಾಗಿದೆ. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ಹದಗೆಡುವ ಮಟ್ಟಕ್ಕೆ ಹೋಗಲಿಲ್ಲ.

ಶಿವಕುಮಾರ್‌ ಕಾರು ಜಖಂ : ಕನಕಪುರದಲ್ಲಿ ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾದಳ ಕಾರ್ಯಕರ್ತರುಗಳು ಘರ್ಷಣೆಯಲ್ಲಿ ಹತ್ತಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಕಲ್ಲು ತೂರಾಟದಲ್ಲಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಕಾರೂ ಹಾನಿಗೊಳಗಾಗಿದೆ.

ಚಿತ್ರದುರ್ಗದಲ್ಲಿ ಗುರುತಿನ ಚೀಟಿ ಇದ್ದರೂ ಮತದಾರ ಪಟ್ಟಿಯಲ್ಲಿ ಹೆಸರಿರದ ಕಾರಣದಿಂದ ಮತ ಚಲಾಯಿಸಲಾಗದ ಮತದಾನ ವಂಚಿತರು ಜಿಲ್ಲಾಧಿಕಾರಿಯವರ ಕಛೇರಿಯೆದುರು ಧರಣಿ ನಡೆಸಲು ಮುಂದಾದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದರು.

(ಇನ್ಫೋ ವಾರ್ತೆ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X