ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ ಹೊಸಅಸ್ತ್ರ : ನಿರುದ್ಯೋಗ ಭತ್ಯೆ, 3ರು. ಅಕ್ಕಿ, ಉಚಿತ ಸೀರೆ

By Staff
|
Google Oneindia Kannada News

ಕಾಂಗ್ರೆಸ್‌ ಹೊಸಅಸ್ತ್ರ : ನಿರುದ್ಯೋಗ ಭತ್ಯೆ, 3ರು. ಅಕ್ಕಿ, ಉಚಿತ ಸೀರೆ
ಆತಂಕಿತ ರಾಜ್ಯ ಕಾಂಗ್ರೆಸ್‌ನಿಂದ ನವೀಕೃತ ಪ್ರಣಾಳಿಕೆ

ಬೆಂಗಳೂರು : ಮೊದಲ ಹಂತದ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ತನ್ನ ಪ್ರಣಾಳಿಕೆಯನ್ನು ನವೀಕರಿಸಿರುವ ಆಡಳಿತಾರೂಢ ರಾಜ್ಯ ಕಾಂಗ್ರೆಸ್‌, ಭರವಸೆಗಳ ಅಕ್ಷಯಪಾತ್ರೆಯನ್ನೇ ಮತದಾರರ ಮುಂದಿರಿಸಿದೆ.

ನಿರುದ್ಯೋಗಿ ಯುವ ಜನತೆಗೆ ನಿರುದ್ಯೋಗ ಭತ್ಯೆ, ಬಡತನದ ರೇಖೆಯಿಂತ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೊಂದು ಸೀರೆ, ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಶೇ.4ರ ಬಡ್ಡಿಯಲ್ಲಿ ಸಾಲ ಹಾಗೂ 3 ರುಪಾಯಿಗೆ ಕಿಲೋ ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ಹೇಳಿಕೊಂಡಿದೆ. ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಪಕ್ಷದ ನವೀಕೃತ ಪ್ರಣಾಳಿಕೆಯನ್ನು ಏ.15ರ ಗುರುವಾರ ಬಿಡುಗಡೆ ಮಾಡಿದರು.

ಪ್ರಣಾಳಿಕೆಯ ಮುಖ್ಯಾಂಶಗಳು :

  • 18 ರಿಂದ 25ರ ವಯೋಮಿತಿಯ ನಿರುದ್ಯೋಗಿಗಳಿಗೆ ತಿಂಗಳಿಗೆ 500 ರು.ಗಳ ನಿರುದ್ಯೋಗ ಭತ್ಯೆ. 5 ಲಕ್ಷ ಮಂದಿಗೆ ಅನ್ವಯವಾಗುವ ಈ ಯೋಜನೆಯನ್ನು ಭರವಸೆಯ ಕಿರಣ ಎಂದು ಹೆಸರಿಸಲಾಗಿದೆ.
  • 3 ರುಪಾಯಿಗೆ ಕೇಜಿ ಅಕ್ಕಿ.
  • ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಶೇ.4ರ ಬಡ್ಡಿಯಲ್ಲಿ ಸಾಲ.
  • ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವರ್ಷಕ್ಕೊಂದು ಉಚಿತ ಸೀರೆ.
  • ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳ ಯೋಜನೆ ಹುಡುಗರಿಗೂ (10ನೇ ತರಗತಿಯವರೆಗೆ) ವಿಸ್ತರಣೆ.
  • ಸ್ವಾಯತ್ತ ಮಂಡಳಿಯಿಂದ ಮದರಸಾಗಳಿಗೆ ಅನುದಾನ.
  • ಕ್ರಿಶ್ಚಿಯನ್ನರ ಹಿತಾಸಕ್ತಿ ರಕ್ಷಣೆಗಾಗಿ ಕಾನೂನುಬದ್ಧ ಸಮಿತಿ ರಚನೆ.
  • ಜಾಗತಿಕ ಮಟ್ಟದ ವಿದ್ಯುತ್‌, ವೈದ್ಯಕೀಯ ಹಾಗೂ ಸಾರಿಗೆ ಸಂಪರ್ಕ.
  • ಎಸ್‌ಸಿ, ಎಸ್‌ಟಿ, ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಯುವಜನತೆಗೆ ಖಾಸಗಿ ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗ.
ಪಕ್ಷದ ನೀತಿ-ಉದ್ದೇಶಗಳು ಜನತೆಗೆ ನೆನಪಿನಲ್ಲಿರಲಿ ಎನ್ನುವ ಉದ್ದೇಶದಿಂದ ನವೀಕೃತ ಪ್ರಣಾಳಿಕೆಯನ್ನು ತಡವಾಗಿ ಬಿಡುಗಡೆ ಮಾಡಲಾಗಿದೆ. ಇದು ಪಕ್ಷದ ತಂತ್ರ ಎಂದು ಪೂಜಾರಿ ಬಣ್ಣಿಸಿದರು.

(ಪಿಟಿಐ)

ಕಾಂಗ್ರೆಸ್‌ ಪ್ರಣಾಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ?

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X