ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಕಾಲ್‌ಸೆಂಟರ್‌, ಬೆರಳು ತುದಿಯಲ್ಲಿ ರೈಲು ಸಮಾಚಾರ

By Staff
|
Google Oneindia Kannada News

ಬೆಂಗಳೂರಲ್ಲಿ ಕಾಲ್‌ಸೆಂಟರ್‌, ಬೆರಳು ತುದಿಯಲ್ಲಿ ರೈಲು ಸಮಾಚಾರ
ಆಗಸ್ಟ್‌ ವೇಳೆಗೆ ಕಾಲ್‌ ಸೆಂಟರ್‌ ಕಾರ್ಯಾರಂಭ

ಬೆಂಗಳೂರು : ದಕ್ಷಿಣ ರೈಲ್ವೆಯ ಬೆಂಗಳೂರು ಘಟಕವು ಪ್ರಯಾಣಿಕರಿಗೆ ಬೇಕಾದ ಎಲ್ಲ ಮಾಹಿತಿ, ಸೌಲಭ್ಯಗಳ ಬಗೆಗೆ ಬೆರಳತುದಿಯಲ್ಲಿ ಮಾಹಿತಿ ಒದಗಿಸಲು ಕಾಲ್‌ ಸೆಂಟರ್‌ ಆರಂಭಿಸುತ್ತಿದೆ.

ಮುಂಬರುವ ಆಗಸ್ಟ್‌ ವೇಳೆಗೆ ಈ ಕಾಲ್‌ಸೆಂಟರ್‌ು ಕಾರ್ಯರೂಪಕ್ಕೆ ಬರಲಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮಹೇಶ್‌ ಕುಮಾರ್‌ ತಿಳಿಸಿದರು. ಏಪ್ರಿಲ್‌ 13 ರಂದು ನಡೆದ 49ನೇ ರೈಲ್ವೆ ಸಪ್ತಾಹದಲ್ಲಿ ಭಾಗವಹಿಸಿದ್ದ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಇದೊಂದು ಪರಿಪೂರ್ಣ ಮಾಹಿತಿಯನ್ನೊದಗಿಸುವ ಕಾಲ್‌ ಸೆಂಟರ್‌ ಆಗಲಿದೆ. ರೈಲ್ವೆ ಮುಂಗಡ ಟಿಕೆಟ್‌ ಕಾಯ್ದಿರಿಸುವುದು, ಟಿಕೆಟ್‌ ದೊರಕುವುದರ ಬಗ್ಗೆ ನಿಖರ ಮಾಹಿತಿ, ಯಾವ ಪಟ್ಟಿ(ಹಳಿ)ಯಲ್ಲಿ ಮತ್ತು ಯಾವ ಫ್ಲಾಟ್‌ಫಾರಂನಲ್ಲಿ ಸಂಬಂಧಪಟ್ಟ ರೈಲು ನಿಲ್ಲುವುದು, ಯಾವ ಮಾರ್ಗವಾಗಿ ಹೋಗುವುದು ಮುಂತಾದ ಸವಿವರ ಮಾಹಿತಿಯನ್ನು ಪ್ರಯಾಣಿಕರಿಗೆ ಈ ಕಾಲ್‌ ಸೆಂಟರ್‌ ಒದಗಿಸಲಿದೆ. ಅಲ್ಲದೆ ಎಸ್ಸೆಮ್ಮೆಸ್‌ ಮೂಲಕವೂ ಮಾಹಿತಿ ನೀಡುವ, ಪಡೆಯುವ ಸೌಲಭ್ಯ ಕಲ್ಪಿಸಲಿದ್ದೇವೆ ಎಂದು ಮಹೇಶ್‌ ಕುಮಾರ್‌ ತಿಳಿಸಿದರು.

ಯಶವಂತಪುರದ ರೈಲ್ವೆ ತಂಗುದಾಣವನ್ನು ನವೀಕರಿಸುವ ಯೋಜನೆಯೂ ಇದೆ. ಅಲ್ಲದೇ ಮೆಜೆಸ್ಟಿಕ್‌ ಮತ್ತು ಯಶವಂತಪುರ ರೈಲ್ವೆ ತಂಗುದಾಣಗಳ ನಡುವೆ ಅಗತ್ಯ ಬಸ್‌ ವ್ಯವಸ್ಥೆಗಳನ್ನು ಮಾಡಲಿದ್ದೇವೆ ಎಂದು ಮಹೇಶ್‌ ಕುಮಾರ್‌ ತಿಳಿಸಿದರು. ರೈಲ್ವೆ ಸಿಬ್ಬಂದಿಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡುತ್ತಿದ್ದು , ಈ ಬಾರಿ 550 ಸಿಬ್ಬಂದಿಗಳು ತಮ್ಮ ಅವಿರತ ಸೇವೆಗೆ ಪ್ರಶಸ್ತಿ ಪಡೆದರು. ಪ್ರಶಸ್ತಿ ಪ್ರದಾನ ಕಾರ್ಯವನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ನಿರ್ದೇಶಕರಾದ ಡಾ. ಪ್ರಕಾಶ್‌ ಜಿ. ಆಪ್ಟೆ ನಡೆಸಿಕೊಟ್ಟರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X