ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ ವಿರುದ್ಧ ವೋಟು: ಸಿಡಿದೆದ್ದ ಪ್ರಮೀಳಾ ಸಂಘಗಳ ಒಕ್ಕೂಟ

By Staff
|
Google Oneindia Kannada News

ಎನ್‌ಡಿಎ ವಿರುದ್ಧ ವೋಟು: ಸಿಡಿದೆದ್ದ ಪ್ರಮೀಳಾ ಸಂಘಗಳ ಒಕ್ಕೂಟ
ಮಹಿಳಾ ಹಕ್ಕು ರಕ್ಷಣೆ, ಆರ್ಥಿಕ ನ್ಯಾಯ, ಜಾತ್ಯತೀತ ನಿಲುವಿಗಾಗಿ ಎನ್‌ಡಿಎ ವಿರೋಧಿಸಿ

ನವದೆಹಲಿ : ಎನ್‌ಡಿ ಎ ಮೈತ್ರಿಕೂಟದ ಸರಕಾರವು ಮಹಿಳಾ ಹಿತಾಸಕ್ತಿಗೆ ಮೋಸ ಮಾಡಿದೆ. ಆದ್ದರಿಂದ ಈ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯಿರಿ ಎಂದು ವಿವಿಧ ಮಹಿಳಾ ಸಂಘಟನೆಗಳ ಒಕ್ಕೂಟವಾದ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (ಎಐಡಿಡಬ್ಲ್ಯೂಎ) ಕರೆ ನೀಡಿದೆ.

ಎನ್‌ಡಿ ಎ ಆಡಳಿತದಲ್ಲಿ ಮಹಿಳೆಯರ ಮೇಲಿನ ದಾಳಿ ಹೆಚ್ಚಾಗಿದೆ. ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ, ಆರ್ಥಿಕ ನ್ಯಾಯಕ್ಕಾಗಿ ಹಾಗೂ ಜಾತ್ಯತೀತ ನಿಲುವಿಗಾಗಿ ಎನ್‌ಡಿಎಯನ್ನು ಬೆಂಬಲಿಸಬಾರದು ಎಂದು ಸಂಘಟನೆ ಪ್ರಮುಖವಾಗಿ ಮಹಿಳೆಯರಲ್ಲಿ ಮನವಿ ಮಾಡಿದೆ.

ಅಗತ್ಯ ಬಹುಮತವಿದ್ದರೂ ಅವರು 33ಶೇಕಡಾ ಮಹಿಳಾ ಮೀಸಲಾತಿ ಕಾನೂನು ಮಾಡಲಿಲ್ಲ. ‘ಸ್ವರಕ್ಷಣೆ’ ಎಂಬ ಹೆಸರಲ್ಲಿ ತಪ್ಪಿತಸ್ಥನಿಗೆ ರಕ್ಷಣೆ ನೀಡುವ ಮೂಲಕ ಆಂತರಿಕ ಶೋಷಣೆಯನ್ನು ತಡೆಹಿಡಿಯಲಿಲ್ಲ ಎಂದು ಒಕ್ಕೂಟ ಆರೋಪಿಸಿದೆ.

ಆರ್ಥಿಕ ಉದಾರೀಕರಣವನ್ನು ಜಾರಿಗೊಳಿಸುವ ಮೂಲಕ ಸ್ತ್ರೀಯರ ಮೇಲೆ ಋಣಾತ್ಮಕ ಪರಿಣಾಮ ಬೀರುವಂತೆ ಮಾಡಿದೆ. 1999ರ ಬಜೆಟ್‌ನಲ್ಲಿ ಮಹಿಳಾ ಪ್ರಧಾನ ಯೋಜನೆಗೆ ಶೇ.1.02 ರಷ್ಟು ನಿಧಿ ಮೀಸಲಿಟ್ಟಿದ್ದರೆ, ಈ ಪ್ರಮಾಣ 2002ರಲ್ಲಿ ಶೇಕಡಾ 0.87 ಕ್ಕೆ ಕುಸಿದಿದೆ. ಹೊಸ ನೇಮಕಾತಿಗೆ ಸರಕಾರ ನಿಷೇಧ ಹೇರಿದೆ. ಇವರ ನೀತಿಯಿಂದ ಬ್ಯಾಂಕಿಂಗ್‌ ಒಂದರಲ್ಲೇ 45,000 ಮಹಿಳೆಯರು ಉದ್ಯೋಗ ಕಳಕೊಂಡಿದ್ದಾರೆ. ಕೇಂದ್ರ ಸರಕಾರದ ಉದ್ಯೋಗದಲ್ಲಿದ್ದ ಸುಮಾರು ಒಂದು ಲಕ್ಷದಷ್ಟು ಮಹಿಳೆಯರು ಕೆಲಸ ಕಳೆದು ಕೊಂಡಿದ್ದಾರೆ ಎಂದು ಒಕ್ಕೂಟ ಹೇಳಿದೆ.

(ಪಿಟಿಐ)

ಮುಖಪುಟ / ಕುರುಕ್ಷೇತ್ರ-2004

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X