ಗುರ್ತಿನ ಚೀಟಿ ಇಲ್ಲವಾ? ಚಿಂತೆ ಬೇಡ, ವೋಟು ಚಲಾಯಿಸಬಹುದು
ಗುರ್ತಿನ ಚೀಟಿ ಇಲ್ಲವಾ? ಚಿಂತೆ ಬೇಡ, ವೋಟು ಚಲಾಯಿಸಬಹುದು
ನಿಮ್ಮ ವಿಳಾಸ ದೃಢೀಕರಿಸಲು ಯಾವುದಾದರೊಂದು ಅಧಿಕೃತ ದಾಖಲೆ ಹಾಜರುಪಡಿಸಿದರೆ ಸಾಕು.
ಏಪ್ರಿಲ್ 20 ಮತ್ತು 26 ರಂದು ನಡೆಯಲಿರುವ ಎರಡು ಹಂತದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಲು ಗುರುತಿನ ಪತ್ರ ಕಡ್ಡಾಯವೇನಲ್ಲ . ಮತ ಚಲಾಯಿಸುವ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಮತಗಟ್ಟೆಯ ಅಧಿಕಾರಿಗೆ ಈ ಕೆಳಗಿನ ದಾಖಲೆಗಳಲ್ಲಿ ಯಾವುದಾದರೊಂದನ್ನು ತೋರಿಸಿ ಮತ ಚಲಾವಣೆ ಮಾಡಬಹುದು.
- ಪಾಸ್‌ಪೋರ್ಟ್
- ಡ್ರೈವಿಂಗ್ ಲೈಸೆನ್ಸ್
- ಪಾನ್(ಪಿ.ಎ.ಎನ್) ಕಾರ್ಡ್
- ರೇಷನ್ ಕಾರ್ಡು
- ರಾಜ್ಯ ಅಥವಾ ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಗುರುತಿನ ಪತ್ರ
- ಬ್ಯಾಂಕ್ ಪಾಸ್‌ಬುಕ್/ಕಿಸಾನ್ ಪತ್ರ/ ಅಂಚೆ ಕಛೇರಿ ಪಾಸ್‌ಬುಕ್
- ವಿದ್ಯಾರ್ಥಿಗಳ ಕಾಲೇಜಿನ ಗುರುತಿನ ಚೀಟಿ (ಮಾರ್ಚ್ 31, 2004 ರೊಳಗೆ ನೀಡಿರತಕ್ಕದ್ದು)
- ಜಾತಿ ಪ್ರಮಾಣಪತ್ರ
- ಪಿಂಚಣಿ ದಾಖಲು ಪತ್ರಗಳು
- ರೈಲ್ವೆ ಸಿಬ್ಬಂದಿ ಐಡಿ
- ಸ್ವಾತಂತ್ರ್ಯ ಹೋರಾಟಗಾರರ ಐಡಿ
- ದೈಹಿಕ ಅಂಗವಿಕಲತಾ ಪತ್ರ.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications